More

    ಛಾಯಾಗ್ರಾಹಕರ ಅಭಿವೃದ್ಧಿಗೆ ಶ್ರಮಿಸುತ್ತೇನೆ

    ಹುಣಸೂರು: ಅಸಂಘಟಿತ ವಲಯದಲ್ಲಿ ಗುರುತಿಸಲ್ಪಟ್ಟಿರುವ ಛಾಯಾಗ್ರಾಹಕ ಸಮೂಹದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಭರವಸೆ ನೀಡಿದರು.

    ನಗರದ ಜೆ.ಪಿ.ಟ್ರಸ್ಟ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಛಾಯಾಗ್ರಾಹಕರ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದನೆ, ನಿಕಟಪೂರ್ವ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ಸಂಘದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ವೃತ್ತಿಪರರಾಗಿ ಛಾಯಾಗ್ರಾಹಕರು ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದ್ದಾರೆ. ಸರ್ಕಾರ ಛಾಯಾಗ್ರಾಹಕರನ್ನು ಅಸಂಘಟಿತ ವಲಯದಲ್ಲಿ ಗುರುತಿಸಿದೆ. ಸಾಕಷ್ಟು ಛಾಯಾಗ್ರಾಹಕರು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವುದನ್ನು ಕಂಡಿದ್ದೇನೆ. ತಾಲೂಕಿನಲ್ಲಿ ಇಂತಹ ಅಸಂಘಟಿತ ವಲಯದಲ್ಲಿರುವ ಸಂಘ, ಸಂಸ್ಥೆಗಳಿಗೆ ನಿವೇಶನವೂ ಸೇರಿದಂತೆ ವಿವಿಧ ಸರ್ಕಾರದ ಸವಲತ್ತುಗಳನ್ನು ಒದಗಿಸಲು ಶ್ರಮ ವಹಿಸುತ್ತೇನೆ ಎಂದರು.

    ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಾಮಸ್ವಾಮಿ ಮಾತನಾಡಿ, ತಾಲೂಕು ಛಾಯಾಗ್ರಾಹಕರಿಗೆ ನಿವೇಶನದ ಕೊರತೆ ಇದೆ. ಹಲವು ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು. ಪ್ರಭಾರ ಪೌರಾಯುಕ್ತೆ ಶರ್ಮಿಳಾ, ಜೆ.ಪಿ.ಟ್ರಸ್ಟ್ ನ ಉಪಾಧ್ಯಕ್ಷ ಗೋವಿಂದೇಗೌಡ, ಟಿಎಪಿಎಂಎಸ್. ಅಧ್ಯಕ್ಷ ಬಸವಲಿಂಗಯ್ಯ, ಸಭೆಯಲ್ಲಿ ಮಾತನಾಡಿದರು. ವಿಜಯ್ ಸ್ವಾಗತಿಸಿದರು.

    ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಕ್ಸೇವಿಯರ್, ಉಪಾಧ್ಯಕ್ಷ ದಾಮೋದರ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಅರುಣ್ ಕುಮಾರ್, ಸಹಕಾರ್ಯದರ್ಶಿ ರಘು, ಮಾಧ್ಯಮ ವಕ್ತಾರ ಗಜೇಂದ್ರ, ಕ್ರೀಡಾ ಕಾರ್ಯದರ್ಶಿ ಚೇತನ್, ನಿರ್ದೇಶಕರಾದ ಸುರೇಶ್, ಲೋಕೇಶ್, ಕಾಂತರಾಜು ಮತ್ತಿತರರಿದ್ದರು.

    ಉಪಸಂಪಾದಕರ ಗಮನಕ್ಕೆ: ಬಾಕಿ ಇರುವ ಸುದ್ದಿ
    ಫೆ.17ರ 2ನೇ ಫೈಲಿನ ಗಾವಡಗೆರೆಯಲ್ಲಿ ಆಯೋಜನೆಗೊಂಡಿದ್ದ ಪೌತಿಖಾತೆ ಆಂದೋಲನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts