More

    ವಿಶ್ವದ ದುಬಾರಿ ತರಕಾರಿ ಇದು: ಇದನ್ನು ಕೊಳ್ಳಲು ಶ್ರೀಮಂತರೇ 10 ಬಾರಿ ಯೋಚಿಸುತ್ತಾರಂತೆ!

    ನವದೆಹಲಿ: ಸಾಮಾನ್ಯವಾಗಿ ತರಕಾರಿ ಬೆಲೆ ಕೆಜಿಗೆ ಗರಿಷ್ಠ 40 ರಿಂದ 50 ರೂಪಾಯಿ ಇರಬಹುದು. ದೊಡ್ಡ ದೊಡ್ಡ ಮಾಲ್​ಗಳಲ್ಲಿ 100 ರೂಪಾಯಿವರೆಗೂ ಇರಬಹುದು. ಆದರೆ, ಇಲ್ಲೊಂದು ತರಕಾರಿ ಇದೆ. ಇದು ವಿಶ್ವದಲ್ಲಿ ಅತ್ಯಂತ ದುಬಾರಿಯಾದ ತರಕಾರಿ. ಈ ತರಕಾರಿಯನ್ನು ತೆಗೆದುಕೊಳ್ಳಲು ದೊಡ್ಡ ದೊಡ್ಡ ಶ್ರೀಮಂತರೇ 10 ಬಾರಿ ಯೋಚಿಸುತ್ತಾರಂತೆ.

    ಈ ತರಕಾರಿಯ ಬೆಲೆ ಒಂದು ಕೆಜಿಗೆ 1000 ಯೂರೋ. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 82 ಸಾವಿರ ರೂಪಾಯಿ. ಆ ದುಬಾರಿ ತರಕಾರಿಯ ಹೆಸರೇ ಹಾಪ್ ಶೂಟ್ಸ್ (hop shoots). ಅದರಲ್ಲಿರುವ ಹೂವನ್ನು ಹಾಪ್ ಕೋನ್ಸ್ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಹೂವನ್ನು ಬಿಯರ್ ತಯಾರಿಸಲು ಬಳಸುತ್ತಾರೆ. ಕೊಂಬೆಗಳನ್ನು ಆಹಾರವಾಗಿ ಬಳಸುತ್ತಾರೆ.

    ಇದನ್ನೂ ಓದಿರಿ: ಅನುಮಾನ ಬಂದು ಬಾತ್​​ರೂಮ್​ನಲ್ಲಿನ ಕನ್ನಡಿ ತೆಗೆದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​..!

    ಹಾಪ್ ಶೂಟ್ಸ್ ತರಕಾರಿಯಲ್ಲಿ ಔಷಧೀಯ ಗುಣಗಳ ರಾಶಿ ಇದೆ. ಅಲ್ಲದೆ, ಇದನ್ನು ಗಿಡಮೂಲಿಕೆಯನ್ನಾಗಿಯೂ ಬಳಸಲಾಗುತ್ತದೆ. ಹಲ್ಲು ನೋವಿಗೆ ಇದು ತುಂಬಾ ಪರಿಣಾಮಕಾರಿಯಂತೆ. ಇದನ್ನು ಹೊರತುಪಡಿಸಿದರೆ ಕ್ಷಯ ರೋಗದಂತಹ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸುತ್ತಾರೆ. ಅಲ್ಲದೆ, ಇದು ರೋಗನಿರೋಧಕ ಗುಣಗಳನ್ನು ಹೊಂದಿದೆ.

    ಜನರು ಹಾಪ್ ಶೂಟ್ಸ್ ಅನ್ನು ಹಸಿಯಾಗಿಯೂ ತಿನ್ನುತ್ತಾರೆ. ಇದು ಸ್ವಲ್ಪ ಕಹಿಯಾಗಿದೆ. ಇದರ ಕೊಂಬೆಗಳನ್ನು ಸಲಾಡ್ ನಲ್ಲಿ ಬಳಸುತ್ತಾರೆ. ಇದರಿಂದ ಉಪ್ಪಿನಕಾಯಿ ಸಹ ಮಾಡುತ್ತಾರೆ. ಇದು ತುಂಬಾ ರುಚಿಕರ ಮತ್ತು ತಿನ್ನಲು ಪ್ರಯೋಜನಕಾರಿಯಾಗಿದೆ.

    ಹಾಪ್ ಶೂಟ್ಸ್ ನಲ್ಲಿ ಔಷಧೀಯ ಗುಣಗಳನ್ನು 100 ಶತಮಾನದ ಹಿಂದೆ ಗುರುತಿಸಲಾಯಿತು. ಹಿಂದಿನ ಜನ ಇದನ್ನು ಬಿಯರ್ ಜತೆ ಬೆರೆಸಿ ಕುಡಿಯುತ್ತಿದ್ದರು. ಇದೇ ಟ್ರೆಂಡ್ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಮೊದಲು ಇದರ ಕೃಷಿ ಉತ್ತರ ಜರ್ಮನಿಯಲ್ಲಿ ಪ್ರಾರಂಭವಾಯಿತು. ನಂತರ ಅದು ಕ್ರಮೇಣ ಪ್ರಪಂಚದಾದ್ಯಂತ ಹರಡಿತು. ಇದರ ಆರೋಗ್ಯರಕ ಗುಣಗಳಿಂದ 18 ನೇ ಶತಮಾನದ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿಯೂ ಇದಕ್ಕೆ ತೆರಿಗೆ ವಿಧಿಸಲಾಯಿತು. ಅಲ್ಲದೆ, ಬಿಯರ್ ತಯಾರಿಸಲು ಇದನ್ನು ಬಳಸಬೇಕು ಎಂದು ಕಡ್ಡಾಯಗೊಳಿಸಲಾಯಿತು. (ಏಜೆನ್ಸೀಸ್​)

    ಇದನ್ನೂ ಓದಿರಿ: ಹೆಂಡತಿಯನ್ನು ಸೇರಲೊಪ್ಪದ ಗಂಡ, ಆಕೆಗೆ ದೆವ್ವ ಹಿಡಿದಿದೆ ಎಂದು ಕಿರುಕುಳ ಕೊಟ್ಟ; ಪತಿ, ಅತ್ತೆ-ಮಾವನ ವಿರುದ್ಧ ದೂರಿತ್ತ ಮಹಿಳೆ

    ನುಗ್ಗೆಕಾಯಿ ಕದಿಯುವಾಗ ಮಾಲೀಕನ ಕೈಗೆ ಸಿಕ್ಕಿಬಿದ್ದ ಇಬ್ಬರು ಪೊಲೀಸರು! ಮುಂದಾಗಿದ್ದು ಹೈಡ್ರಾಮ

    ಸುರಕ್ಷತೆಯ ಭ್ರಮೆ ಬೇಡ; ಕೆಲ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕರೊನಾ ಪ್ರಕರಣ..

    ಇಂಗ್ಲೆಂಡ್ ಲೆಜೆಂಡ್ಸ್ ತಂಡದ ಎದುರು ಭಾರತ ಲೆಜೆಂಡ್ಸ್ ತಂಡಕ್ಕೆ ವೀರೋಚಿತ ಸೋಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts