More

    ಬಸವಣ್ಣನ ದೇವರ ಪರಿಕಲ್ಪನೆ ಇಂದು ಪ್ರಸ್ತುತ

    ಹೊನ್ನಾಳಿ: ದೇಹವನ್ನೇ ದೇಗುಲವಾಗಿಸಕೊಂಡರೆ ಮನುಷ್ಯ ಸ್ವಚ್ಛ ಬದುಕು ಸಾಗಿಸಬಲ್ಲ ಎಂದು ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಬಿದರಗಡ್ಡೆ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪುಸ್ತಕಗಳ ಲೋಕಾರ್ಪಣೆ, ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಜಾಗತೀಕರಣ ಸಂದರ್ಭದಲ್ಲಿ ಈ ಮೊದಲಗಿಂತ ಪ್ರಸ್ತುತ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸುವ ಜರೂರಿದೆ. ಹಾಗಾಗಿ, ಬಸವಣ್ಣನವರ ಪರಿಕಲ್ಪನೆಯ ದೇವರ ಆರಾಧನೆ ಹೆಚ್ಚು ಪ್ರಸ್ತುತವಾಗಿದೆ ಎಂದು ಹೇಳಿದರು.

    ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಸಮಾಜ ಎತ್ತ ಸಾಗುತ್ತಿದೆ ಎಂಬುದೇ ಅರ್ಥವಾಗದಂಥ ಸ್ಥಿತಿ ಇದೆ ಎಂದು ಬೇಸರಪಟ್ಟರು.

    ಹಾವೇರಿ ಜಿಲ್ಲೆಯ ಹಾನಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿದರಗಡ್ಡೆ ಸಂತೋಷ್ ರಚಿತ ಕವನ ಸಂಕಲನ ಚಂದಮಾಮ ಮತ್ತು ಲೇಖನ ಮಾಲೆ ‘ಕ್ಷಣಹೊತ್ತು ಅನುಭವ ಮುತ್ತು ಪುಸ್ತಕಗಳನ್ನು ಹಿರಿಯ ಸಾಹಿತಿ ಯು.ಎನ್.ಸಂಗನಾಳಮಠ ಲೋಕಾರ್ಪಣೆಗೊಳಿಸಿದರು.

    ಹೊನ್ನಾಳಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಯೋತಿ, ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ, ಬಿಜೆಪಿ ಮುಖಂಡ ಎಂ.ಪಿ.ರಮೇಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಜಿ.ಹನುಮಂತಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts