More

    ಸ್ಪರ್ಧಾರ್ಥಿಗಳಲ್ಲಿ ನಿರಂತರ ಕಲಿಕೆ ಅಗತ್ಯ

    ವಿಜಯಪುರ: ಸ್ಪರ್ಧಾರ್ಥಿಗಳು ನಿರಂತರ ಓದಬೇಕು. ಜ್ಞಾನ ಎಲ್ಲಿಂದ ಬಂದರೂ ಅದನ್ನು ಸ್ವೀಕಾರ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಈರಪ್ಪ ಆಶಾಪುರ ಹೇಳಿದರು.

    ನಗರದ ಮಿಲನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಚಾಣಕ್ಯ ಪ್ರಕಾಶನದಿಂದ ಸೋಮವಾರ ಹಮ್ಮಿಕೊಂಡಿದ್ದ ಚಾಣಕ್ಯ ಸಾಮಾನ್ಯ ಕನ್ನಡ ಮತ್ತು ನೆನಪಿಡುವ ಕೌಶಲಗಳು ಎರಡು ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಚಾಣಕ್ಯ ಅಕಾಡೆಮಿಯು ರಾಜ್ಯಾದ್ಯಂತ ಹೆಸರಾದ ತರಬೇತಿ ಕೇಂದ್ರ. ಇಲ್ಲಿ ವಾಸ್ತವಿಕತೆ ಅರಿತು ತರಬೇತಿ ನಡೆಯುತ್ತದೆ. ಚಾಣಕ್ಯ ಸಾಮಾನ್ಯ ಕನ್ನಡ ಪುಸ್ತಕವು ಸರಳವಾಗಿ ವಿದ್ಯಾರ್ಥಿಗಳಿಗೆ ತಿಳಿಯುವಂತೆ ರಚಿಸಲಾಗಿದೆ. ಜತೆಗೆ ನೆನಪಿಡುವ ಕೌಶಲ ಪುಸ್ತಕ ಕೂಡ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ ಎಂದು ತಿಳಿಸಿದರು.

    ಸಾಹಿತಿ ಚನ್ನಪ್ಪ ಕಟ್ಟಿ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿಯು ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಒಂದು ಜ್ಞಾನ ದೇಗುಲ ಇದ್ದಂತೆ. ಇಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ಗುಣಾತ್ಮಕ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟಗಳಿಗೆ ಹೆದರಬಾರದು. ಅವುಗಳನ್ನು ಎದುರಿಸಿ ನಿಮ್ಮ ಗುರಿಯನ್ನು ತಲುಪಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಚಾಣಕ್ಯ ಅಕಾಡೆಮಿ ಮುಖ್ಯಸ್ಥ ಎನ್.ಎಂ.ಬಿರಾದಾರ ಮಾತನಾಡಿ, ನಮ್ಮ ಪ್ರಕಾಶನದಿಂದ ಬಂದ ಎಲ್ಲ ಪುಸ್ತಕಗಳು ಅತ್ಯುತ್ತಮ ಪುಸ್ತಕಗಳಾಗಿವೆ. ಸ್ಪರ್ಧಾರ್ಥಿಗಳು ಪುಸ್ತಕಗಳನ್ನು ಓದಿ ಯಶಸ್ವಿಯಾಗಬೇಕು. ಓದುವ ಸಂದರ್ಭದಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಅನ್ಯ ವಿಷಯಗಳ ಕಡೆಗೆ ಹರಿಬಿಡದೆ ಏಕಾಗ್ರ ಚಿತ್ತವಾಗಿ ಓದಿದ್ದೆ ಆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

    ಲೇಖಕ ಎಚ್.ಎಲ್.ಕುಡಚಿ, ಉಪನ್ಯಾಸಕಿ ನೀಲಮ್ಮ ಹತ್ತಳ್ಳಿ, ಸಂತೋಷ ಕುಲಕುರ್ಣಿ, ಗುರುರಾಜ ಹುಣಶ್ಯಾಳ, ಪ್ರಕಾಶ ಜಾಧವ, ಎಂ.ಎಚ್. ಪಾಟೀಲ, ರಮೇಶ ಹಾದಿಮನಿ, ರಾಹುಲ ಎಂ., ಅಶೋಕ ರಾಠೋಡ, ಲಾಯಪ್ಪ, ರಾಘವೇಂದ್ರ ಸುಣಗಾರ, ಮಹಾಂತೇಶ ಹೊಸಮನಿ, ಜಗದೀಶ ಮಠಪತಿ, ಶಿವುಕುಮಾರ ಹಿರೇಮಠ, ಶ್ರೀಶೈಲ ಹಳಕಟ್ಟಿ, ಸಿದ್ಧಲಿಂಗ ಬಾಗೇವಾಡಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts