More

    ಒಳ್ಳೆಯ ಕೆಲಸಗಳಿಗೆ ಸವಾಲುಗಳು ಸಾಲು ಸಾಲು: ಸಾಣೇಹಳ್ಳಿ ಸ್ವಾಮೀಜಿ ಅಭಿಮತ

    ಹೊಸದುರ್ಗ: ಯಾವುದೇ ವ್ಯಕ್ತಿ, ಪಕ್ಷ, ಜಾತಿಗಳ ಹಿತಾಸಕ್ತಿ ಇಲ್ಲದೆ ಸಾರ್ವಜನಿಕರ ಹಿತಕ್ಕಾಗಿ ಆಯೋಜಿಸಲಾಗಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮ ಎಲ್ಲ ಸಮುದಾಯದ ಭಕ್ತರ ಸಹಕಾರದಿಂದ ಯಶಸ್ವಿಯಾಗಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಸಾಣೇಹಳ್ಳಿಯ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮತ್ತೆ ಕಲ್ಯಾಣ-22ರ ಹಿನ್ನೋಟ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಇಂತಹ ಸಮಾಜಮುಖಿ ಕಾರ್ಯಕ್ರಮ ಮಾಡುವಾಗ ಮಾನವ ನಿರ್ಮಿತ ಮತ್ತು ಅತಿವೃಷ್ಟಿಯಂತಹ ನೈಸರ್ಗಿಕ ಸವಾಲುಗಳು ಸಾಲು ಸಾಲಾಗಿ ಎದುರುಗೊಳ್ಳುತ್ತವೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಮತ್ತು ನಾವು ಮಾನಸಿಕವಾಗಿ ಬಹಳ ನೋವು ಅನುಭವಿಸಿದ್ದೇವೆ. ಈ ವಿಷಮ ವಾತಾವರಣದಿಂದಾಗಿ ನಮಗಿಂತ ಭಕ್ತರಿಗೆ ಹೆಚ್ಚು ನೋವಾಗಿದೆ ಎಂದು ಹೇಳಿದರು.

    ಅರಸೀಕೆರೆ ಮತ್ತು ತಿಪಟೂರು ತಾಲೂಕಿನ ಎಲ್ಲೆಲ್ಲೂ ಬಡತನವೇ ಎದ್ದು ಕಾಣುತ್ತಿದೆ. ಹಾಲು ಉತ್ಪಾದನೆಯೇ ಅವರ ಪ್ರಮುಖ ಉದ್ಯೋಗ. ಸಂಜೆ 6 ಗಂಟೆಯ ಹೊತ್ತಿಗೆ ಜನರು ಡೈರಿಗೆ ಹಾಲು ಹಾಕಬೇಕಿತ್ತು. ಇದರ ನಡುವೆ ಜೋರು ಮಳೆ ಸೇರಿ ಅನೇಕ ಅಡೆತಡೆಗಳಿದ್ದರೂ ಜನರ ಸಹಕಾರದಿಂದಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು.

    ಮತ್ತೆ ಕಲ್ಯಾಣ ಕಾರ್ಯಕ್ರಮ ಹೊಸ ಕಾರ್ಯಕ್ರಮವಲ್ಲ. 2005ರಲ್ಲಿಯೇ ಸಾಣೇಹಳ್ಳಿಯಲ್ಲಿ ಈ ಕುರಿತು ವಿಚಾರಸಂಕಿರಣ ನಡೆಸಿ, ಒಂದು ಪುಸ್ತಕವನ್ನೇ ಹೊರತಂದಿದ್ದೇವು. 2014ರಿಂದ ಶ್ರಾವಣ ಸಂಜೆ ಎನ್ನುವ ಕಾರ್ಯಕ್ರಮದ ರೂಪದಲ್ಲಿ ಆಯೋಜಿಸಲಾಗುತಿತ್ತು. 2019ರಲ್ಲಿ ಮತ್ತೆ ಕಲ್ಯಾಣದ ಹೆಸರಲ್ಲಿ ವ್ಯಾಪಕ ರೂಪ ತಳೆದು ರಾಜ್ಯಾದ್ಯಂತ ನಡೆಯುವಂತಾಯಿತು ಎಂದು ಹೇಳಿದರು.

    ಶಿವಸಂಚಾರದ ಕಲಾವಿದರಾದ ಎಚ್.ಎಸ್.ನಾಗರಾಜ್, ಕೆ.ಜ್ಯೋತಿ, ಕೆ.ದಾಕ್ಷಾಯಿಣಿ ವಚನಗೀತೆಗಳನ್ನು ಹಾಡಿದರು. ಅರಸೀಕೆರೆ ಮತ್ತು ತಿಪಟೂರು ತಾಲೂಕಿನ ಭಕ್ತರು ಮತ್ತೆ ಕಲ್ಯಾಣದ ಕುರಿತು ಮಾತನಾಡಿದರು.

    ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜು, ಜಿಪಂ ಮಾಜಿ ಸದಸ್ಯ ಮಾಡಾಳು ಸ್ವಾಮಿ, ಉದ್ಯಮಿ ಹೆಬ್ಬಳ್ಳಿ ಓಂಕಾರಪ್ಪ, ನವೀನ್, ದೇವರಾಜ್, ಪರಮೇಶ್ವರಪ್ಪ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts