More

    10ನೇ ತರಗತಿಯಲ್ಲಿ ಪ್ರಥಮ ದರ್ಜೆಯ ತೇರ್ಗೆಡೆಯಾದ ಬಡವಿದ್ಯಾರ್ಥಿನಿಗೆ ಸಿಕ್ಕ ಉಡುಗೊರೆ ನೋಡಿ…

    ನವದೆಹಲಿ: ಆ ಬಾಲಕಿ ಅತ್ಯಂತ ಕಡುಬಡತನದ ಹಿನ್ನೆಲೆಯವಳು. ಬೀದಿಬದಿ ಗುಡಿಸಲಲ್ಲಿ ಜೀವನ. ಸೀಮೆಎಣ್ಣೆ ದೀಪದಲ್ಲೇ ಓದಬೇಕಾದ ಅನಿವಾರ್ಯತೆ. ತಂದೆ ದಿನಗೂಲಿ ಕೆಲಸ ಮಾಡಿದರೆ, ತಾಯಿ ಗೃಹಿಣಿ.

    ಇಷ್ಟೆಲ್ಲ ತಾಪತ್ರಯಗಳ ನಡುವೆಯೂ ಆ ಬಾಲಕಿ ಚೆನ್ನಾಗಿ ಓದಿದಳು. 10ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ ಸರ್ಕಾರಿ ಶಾಲೆಗೆ ಹಾಗೂ ಅನಕ್ಷರಕುಕ್ಷಿಗಳಾದ ತನ್ನ ಪಾಲಕರಿಗೆ ಹೆಮ್ಮೆಯನ್ನು ತಂದಿದ್ದಾಳೆ. ಅಕೆಯ ಈ ಸಾಧನೆ ಪರಿಗಣಿಸಿದ ಇಂದೋರ್​ ಮಹಾನಗರಪಾಲಿಕೆ ಆಕೆಯ ಕುಟುಂಬಕ್ಕೆ 1 ಬಿಎಚ್​ಕೆ ಫ್ಯಾಟ್​ ಅನ್ನು ಬಳುವಳಿಯಾಗಿ ನೀಡಿದೆ. ಜತೆಗೆ ಆಕೆಯ ಭವಿಷ್ಯದ ವಿದ್ಯಾಭ್ಯಾಸವನ್ನು ಪ್ರಾಯೋಜಿಸುವುದಾಗಿ ಹೇಳಿದೆ.

    ಇದು ಓದು ಬರಹ ಗೊತ್ತಿಲ್ಲದ ದಶರತ್​ ಖಾಂಡೇಕಾರ್​ ಮತ್ತು ಲಕ್ಷ್ಮಿ ಎಂಬ ದಂಪತಿಯ ಪುತ್ರಿಯ ಸಾಧನೆ. ಈಕೆಯ ಸಾಧನೆಯಿಂದಾಗಿ ಈ ಕುಟುಂಬವೀಗ ಶಾಶ್ವತವಾಗಿ ತಲೆಯ ಮೇಲೊಂದು ಸೂರು ಕಾಣುವಂತಾಗಿದೆ.

    ಇದನ್ನೂ ಓದಿ: ನಟ ಪ್ರಭಾಸ್​ ತೆಗೆದುಕೊಂಡ ಈ ನಿರ್ಧಾರ ಕನ್ನಡಿಗರನ್ನು ಕೆಣಕುವಂತಿದೆ!

    ದಶರತ್​ ಮತ್ತು ಲಕ್ಷ್ಮಿ ದಂಪತಿಗೆ ಮೂವರು ಮಕ್ಕಳು. ತಮಗೆ ಓದು ಬರಹ ಗೊತ್ತಿಲ್ಲದಿದ್ದರೂ ತಮ್ಮ ಮಕ್ಕಳು ತಮ್ಮಂತೆ ಆಗಬಾರದು. ನಾಲ್ಕು ಅಕ್ಷರ ಕಲಿತು ಉತ್ತಮ ಜೀವನ ನಡೆಸಬೇಕು ಎಂದು ಕನಸು ಹೊತ್ತವರು. ಅದಕ್ಕಾಗಿ ತಮ್ಮ ಮೂವರು ಮಕ್ಕಳನ್ನೂ ಶಾಲೆ ಕಳುಹಿಸುತ್ತಿದ್ದಾರೆ.

    ಇವರ ಪೈಕಿ ಭಾರತಿ ಓದಿನಲ್ಲಿ ಚುರುಕು. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠಗಳನ್ನು ಅತ್ಯಾಸಕ್ತಿಯಿಂದ ಆಲಿಸುತ್ತಿದ್ದ ಆಕೆ, ತರಗತಿಯ ಬಳಿಕ ತನ್ನ ಪರಿಚಿತರೊಂದಿಗೆ ಪಠ್ಯಗಳ ಬಗ್ಗೆ ಚರ್ಚಿಸಿ, ಅನುಮಾನಗಳಿದ್ದರೆ ಪರಿಹರಿಸಿಕೊಳ್ಳುತ್ತಿದ್ದಳು. ಹಾಗಾಗಿ ಆಕೆಗೆ 10ನೇ ತರಗತಿಯಲ್ಲಿ ಪ್ರಥಮ ದರ್ಜೆ ಗಳಿಸಲು ಸಾಧ್ಯವಾಗಿದೆ ಎಂದು ಆಕೆಯ ಶಿಕ್ಷಕರು ಹೇಳಿದ್ದಾರೆ.

    ತನ್ನ ಸಾಧನೆ ಗುರುತಿಸಿ ತಲೆಯ ಮೇಲೊಂದು ಶಾಶ್ವತ ಸೂರು ಒದಗಿಸಿದ ಇಂದೋರ್​ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಕೃತಜ್ಞತೆ ಅರ್ಪಿಸಿರುವ ಭಾರತ, ತಾನು ಐಎಎಸ್​ ಅಧಿಕಾರಿಯಾಗುವ ಕನಸು ಹೊಂದಿರುವುದಾಗಿ ಹೇಳಿದ್ದಾಳೆ.

    ಕೋರ್ಟ್​ ಆವರಣದಲ್ಲೇ ಹೆಂಡತಿ-ಮಾವನಿಗೆ ಹಿಗ್ಗಾಮುಗ್ಗಾ ಥಳಿಸಿದ ಭೂಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts