More

    40 ವರ್ಷದ ಬಳಿಕ 10ನೇ ತರಗತಿ ಪರೀಕ್ಷೆ ಬರೆದ ಶಾಸಕ!

    ಭುವನೇಶ್ವರ: ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದು ನಿಜವಾಗಿದೆ. ಯಾವ ವಯಸ್ಸಿನಲ್ಲಾದರೂ ಶಿಕ್ಷಣ ಕಲಿಯಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ.

    ಶಾಲೆ ಬಿಟ್ಟು ಸತತ ನಲವತ್ತು ವರ್ಷಗಳ ಬಳಿಕ 58 ವರ್ಷದ ಶಾಸಕ ಈಗ 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಹೌದು.. ವಿಚಿತ್ರವೆನಿಸಿದರೂ ಸತ್ಯ. ಒಡಿಶಾದ ಫುಲ್ಬನಿಯಲ್ಲಿ 1978ರಲ್ಲಿ 10ನೇ ತರಗತಿಯಲ್ಲಿ ಅರ್ಧಕ್ಕೆ ಬಿಟ್ಟಿದ್ದ ಸದ್ಯ ಬಿಜು ಜನತಾ ದಳದ ಶಾಸಕ ಅಂಗದ ಕನ್ಹಾರ್​ ಅವರು ರುಜಂಗ್​ನ ಹೈ ಸ್ಕೂಲ್​ನಲ್ಲಿ ಶನಿವಾರ ಪರೀಕ್ಷೆ ಬರೆದಿದ್ದಾರೆ.

    ತಮ್ಮ ಕುಟುಂಬದ ಸಮಸ್ಯೆಯಿಂದಾಗಿ 10ನೇ ತರಗತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದೆ. 50ವರ್ಷವಾದರೂ ಪರೀಕ್ಷೆ ಬರೆಯಬಹುದು ಎಂದು ತಿಳಿದು ಈಗ ಪರೀಕ್ಷೆ ಬರೆಯಲು ಬಂದಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಕನ್ಹಾರ್​ ಜತೆಗೆ ಸರ್​ಪಂಚ್​ ಆಗಿರುವ ಅವರ ಸ್ನೇಹಿತ ಕೂಡ 10ನೇ ತರಗಿತಿ ಪರೀಕ್ಷೆ ಬರೆದಿದ್ದಾರೆ.

    10ನೇ ತರಗತಿಯಲ್ಲಿ ಅನುತ್ತೀರ್ಣರಾದ ಉಳಿದ 63 ವಿದ್ಯಾರ್ಥಿಗಳೊಂದಿಗೆ ಶಾಸಕನಾಗಿದ್ದರೂ ಸಾಮಾನ್ಯರಾಗಿಯೇ ಪರೀಕ್ಷೆ ಬರೆದು ಇತರರಿಗೆ ಮಾದರಿಯಾಗಿದ್ದಾರೆ.

    1000 ಕೋಟಿ ರೂ.ಗಳಿಸಿದ ಭಾರತದ 4ನೇ ಸಿನಿಮಾ ಕೆಜಿಎಫ್​​-2: ಇನ್ನುಳಿದ ಮೂರು ಸಿನಿಮಾ ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts