More

    ಗೃಹರಕ್ಷಕ ದಳ ಸಿಬ್ಬಂದಿಗಿಲ್ಲ ಸೂಕ್ತ ವೇತನ

    ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

    ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ಪೊಲೀಸ್ ಇಲಾಖೆ ಜತೆ ದುಡಿಯುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗೆ ಸಿಗುವ ದಿನದ ಭತ್ಯೆ ಕೇವಲ 380 ರೂಪಾಯಿ ಮಾತ್ರ. ಕೋವಿಡ್ ಸಮಯದ ಈ ವಿಷಮ ಸ್ಥಿತಿಯಲ್ಲಿಯೂ ಈ ಕನಿಷ್ಠ ವೇತನಕ್ಕೆ ಗೃಹರಕ್ಷಕರು ದುಡಿಯಬೇಕಿದೆ.
    ಉಡುಪಿ ಜಿಲ್ಲೆಯಲ್ಲಿ ಪುರುಷರು ಮತ್ತು ಮಹಿಳಾ ಸಿಬ್ಬಂದಿ ಸೇರಿದಂತೆ 500 ಮಂದಿ ಗೃಹರಕ್ಷಕರು ಇದ್ದಾರೆ. ಬ್ರಹ್ಮಾವರ ಯುನಿಟ್‌ನಲ್ಲಿ 5 ಮಹಿಳೆಯರು ಸೇರಿದಂತೆ ಒಟ್ಟು 32 ಮಂದಿ ಇದ್ದಾರೆ. ಬ್ರಹ್ಮಾವರ ಮತ್ತು ಕೋಟ ಠಾಣಾ ವ್ಯಾಪ್ತಿಯಲ್ಲಿ, ಕಳೆದ ವರ್ಷ ಮತ್ತು ಈ ವರ್ಷ ಕೋವಿಡ್ ಡ್ಯೂಟಿಗಾಗಿ ಪೊಲೀಸ್ ಇಲಾಖೆಯೊಂದಿಗೆ ಹಗಲಿರುಳು ಜತೆಯಾಗಿ ದುಡಿಯುತ್ತಿದ್ದಾರೆ. ರಾತ್ರಿ ಹೊತ್ತು ಗೋವು ಸಾಗಾಟ ಸೇರಿದಂತೆ ಅನೇಕ ಅಪರಾಧಿಗಳನ್ನು ಹಿಡಿಯುವಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಪಾತ್ರ ಇದೆ.

    ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಯಲ್ಲಿ ದಿನವೊಂದಕ್ಕೆ 750 ರೂ. ಭತ್ಯೆ ನೀಡುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಡಳಿತ 2 ವರ್ಷದಿಂದ ದಿನವೊದಕ್ಕೆ 380 ರೂಪಾಯಿಯ ದುಡಿಸಿಕೊಳ್ಳುತ್ತಿದೆ.
    ಕರ್ತವ್ಯಕ್ಕೆ ಸೇರುವಾಗ ಒಂದು ಜತೆ ಖಾಕಿ ಉಡುಪು ನೀಡುವುದು ಮಾತ್ರ. ಅದು ಕೂಡ ಕೆಲವರ ಅಳತೆಗೆ ಹೊಂದುವುದಿಲ್ಲ. ಶೂ ಮತ್ತು ಬೆಲ್ಟ್, ಕ್ಯಾಪ್ ಇದೆಲ್ಲವೂ ಸಿಬ್ಬಂದಿಯೇ ಮಾಡಿಕೊಳ್ಳಬೇಕು.

    ಗೃಹರಕ್ಷಕ ದಳದ ಸಿಬ್ಬಂದಿಗೆ ಪೊಲೀಸ್ ಠಾಣಾ ವತಿಯಿಂದ ನೀಡುವ ಗಣೇಶೋತ್ಸವ, ದೀಪಾವಳಿ, ರಂಜಾನ್, ಜಾತ್ರೆ ಸೇರಿದಂತೆ ಇನ್ನಿತರ ಡ್ಯೂಟಿಗೆ ದಿನವೊಂದಕ್ಕೆ 750 ರೂ. ನೀಡಲಾಗುತ್ತಿದೆ. 2 ವರ್ಷದಿಂದ ಠಾಣಾ ಡ್ಯೂಟಿ ತಿಂಗಳಲ್ಲಿ 15 ದಿನ ಮಾತ್ರವಾಗಿದ್ದು ಲೆಕ್ಕಾಚಾರ ಹಾಕಿದಲ್ಲಿ ದಿನವೊಂದಕ್ಕೆ ಕೇವಲ 380 ರೂಪಾಯಿ ಅಷ್ಟೆ ಆಗುತ್ತದೆ. ಒಂದೊಮ್ಮೆ ಅನಾರೋಗ್ಯ ಅಥವಾ ಅನಿರೀಕ್ಷಿತ ಘಟನೆಗೆ ತುತ್ತಾದರೆ ಆರೋಗ್ಯ ಸೇರಿದಂತೆ ಯಾವುದೇ ಜೀವನ ಭದ್ರತೆ ಇವರಿಗಿಲ್ಲ.

    ಪ್ರಸ್ತುತ ಬಸ್ ವ್ಯವಸ್ಥೆ ಇಲ್ಲದೆ ಕೆಲವರು ಆಟೋರಿಕ್ಷಾ ಅವಲಂಬಿಸಬೇಕಿದ್ದು, ದೂರ ಪ್ರದೇಶದಿಂದ ಬರುವವರು ದಿನಕ್ಕೆ 200 ರೂಪಾಯಿ ಖರ್ಚು ಮಾಡಬೇಕಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಗೃಹಕರಕ್ಷಕ ಸೂಕ್ತ ವೇತನ ಮಾಡಬೇಕಾಗಿದೆ.

    ಉಡುಪಿ ಜಿಲ್ಲೆಯಲ್ಲಿ ಇರುವ ಸಿಬ್ಬಂದಿಯಲ್ಲಿ 132 ಮಂದಿಯನ್ನು ಕರಾವಳಿ ಕಾವಲು ಪಡೆಗೆ ನೇಮಿಸಿದ್ದು ಉಳಿದವರಲ್ಲಿ 150 ಮಂದಿಗೆ ಮಾತ್ರ ಕೋವಿಡ್ ಡ್ಯೂಟಿ ನೀಡಲಾಗಿದೆ. ಉಳಿದ ಸಿಬ್ಬಂದಿಯನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಿಂಗಳೊಂದರ 15 ದಿನ ಡ್ಯೂಟಿಗೆ 750 ರೂಪಾಯಿಯಂತೆ ನೀಡಲಾಗುವುದು. ದಿನದ ಭತ್ಯೆ (ಸಂಭಾವನೆ ) ಹೆಚ್ಚಿಸುವುದು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಅಥವಾ ಸರ್ಕಾರ.
    ಡಾ.ಕೆ .ಪ್ರಶಾಂತ್ ಶೆಟ್ಟಿ, ಜಿಲ್ಲಾ ಕಮಾಂಡೆಂಟ್ ಗೃಹರಕ್ಷಕದಳ ಉಡುಪಿ.

    ಚಿಕ್ಕ ಮಕ್ಕಳನ್ನು ಹೊಂದಿದ್ದು, ಬಸ್ ಸಂಚಾರ ಇಲ್ಲದ ಈ ಸಮಯದಲ್ಲಿ ಸಾಸ್ತಾನ ಬಳಿಯ ಕೋಡಿಯಿಂದ 2 ಹೊತ್ತು ರಿಕ್ಷಾದಲ್ಲಿ ಬಂದು ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರೊಂದಿಗೆ ಸೇರಿ ಕೋವಿಡ್ ಡ್ಯೂಟಿ ಮಾಡುತ್ತಾ ಇದ್ದೇನೆ. ಸಿಗುವ ಭತ್ಯೆ ತೀರಾ ಕಡಿಮೆ. ಉಡುಪಿ ಜಿಲ್ಲಾಧಿಕಾರಿ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು.
    ಸುಜಾತಾ, ಗೃಹರಕ್ಷಕದಳ ಸಿಬ್ಬಂದಿ ಬ್ರಹ್ಮಾವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts