More

    ಲಾಕ್​ಡೌನ್​ ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ಗೃಹ ಸಚಿವರು, ಪೊಲೀಸ್​ ಆಯುಕ್ತರಿಂದ ಶಾಕ್!

    ಬೆಂಗಳೂರು: ಜನರ ಒಳಿತಿಗಾಗಿ ಕೋವಿಡ್​-19 ಸೋಂಕು ತಡೆಗಟ್ಟಲು ಲಾಕ್​ಡೌನ್ ಹೇರಿದ್ದರೂ, ಬೇಕಾಬಿಟ್ಟಿ ರಸ್ತೆಯಲ್ಲಿ ಓಡಾಡುತ್ತಿದ್ದವರಿಗೆ ಗೃಹ ಸಚಿವರು ಹಾಗೂ ಪೊಲೀಸ್​ ಆಯುಕ್ತರು ಶಾಕ್ ಕೊಟ್ಟಿದ್ದಾರೆ.

    ಇಂದು ಮಟ-ಮಟ ಮಧ್ಯಾಹ್ನ ರಸ್ತೆಗಿಳಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ನಗರ ಪೊಲೀಸ್ ಆಯುಕ್ತ​ ಭಾಸ್ಕರ್ ರಾವ್ ಚೆಕ್​ಪೋಸ್ಟ್​ಗಳ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದರು. ಕೆಜಿ ಹಳ್ಳಿಯ ಮುಖ್ಯರಸ್ತೆಯಲ್ಲಿ ಖಾಸಗಿ‌ ವಾಹನಗಳಲ್ಲಿ ಸಾರ್ವಜನಿಕರಂತೆ ಓಡಾಡಿ ಗಮನ ಸೆಳೆದರು.

    ತಪಾಸಣೆ ವೇಳೆ ನಕಲಿ ಕರೊನಾ ಪೊಲೀಸ್ ಪಾಸ್ ಕೂಡ ಪತ್ತೆಯಾಗಿದೆ. ಗೃಹಸಚಿವರ ಪರಿಶೀಲನೆ​ ವೇಳೆ ನಕಲಿ ಪಾಸ್ ಹೊಂದಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಗೂಡ್ಸ್ ಆಟೋ ಹಾಗೂ ಒಂದು ಕಾರ್​ನಲ್ಲಿ ನಕಲಿ ಪಾಸ್ ಪತ್ತೆಯಾಗಿದೆ. ಮೂಲ ಪಾಸ್ ಅನ್ನು ಕಲರ್ ಝೆರಾಕ್ಸ್ ಮಾಡಿ ಪೊಲೀಸರಿಗೆ ಚಮಕ್ ನೀಡಿದ್ದಾರೆ.

    ನಕಲಿ ಪಾಸ್​ ಹೊಂದಿದ್ದ ಚಾಲಕರ ಮೈ ಚಳಿ ಬಿಡಿಸಿದ ಬಸವರಾಜ್ ಬೊಮ್ಮಾಯಿ, ಗೂಡ್ಸ್ ಆಟೋ ಹಾಗೂ ಕಾರ್ ಸೀಜ್ ಮಾಡುವಂತೆ ಆದೇಶಿಸಿದರು. ಪಾಸ್ ಇಲ್ಲದೇ ಓಡಾಡುತ್ತಿದ್ದವರಿಗೆ ಇದೇ ಕೊನೆಯ ಎಚ್ಚರಿಕೆ ಎಂದರು.

    ದುಬೈನಿಂದ ಮರಳಿದ್ದ ಪತಿಗೆ ನೆಗೆಟಿವ್ ಇದ್ದರೂ ಗರ್ಭಿಣಿ ಪತ್ನಿಗೆ ಕರೊನಾ ಪಾಸಿಟಿವ್​!

    ಲಾಕ್​ಡೌನ್​ ಅವಧಿಯಲ್ಲಿ ಜನ ಮನೇಲಿ ಏನು ಮಾಡುತ್ತಿದ್ದಾರೆ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts