More

    ತಿದ್ದುಪಡಿ ಪೌರತ್ವ ಕಾಯ್ದೆ ಯಾರ ಪೌರತ್ವವನ್ನು ಕಸಿಯುವುದಿಲ್ಲ, ಬದಲಿಗೆ ಪೌರತ್ವ ನೀಡುತ್ತದೆ: ಕೇಂದ್ರ ಗೃಹ ಸಚಿವ ಅಮಿತ್​ ಷಾ

    ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆಯ ಯಾರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಬದಲಿಗೆ ಪೌರತ್ವ ಕೊಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಹೇಳಿದರು.

    ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಪೌರತ್ವ ಕಾಯ್ದೆ ವಿರೋಧಿಸುವವರು ದಲಿತ ವಿರೋಧಿಗಳು. ಕಾಯ್ದೆ ಯಾರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಪೌರತ್ವ ಕಸಿದುಕೊಳ್ಳುವ ಯಾವುದೇ ಅಂಶ ಕಾಯ್ದೆಯಲ್ಲಿ ಇಲ್ಲ ಎಂದರು.

    ಕಾಂಗ್ರೆಸ್​ ಮತಕ್ಕಾಗಿ ದೇಶವನ್ನು ಧರ್ಮದ ಮೇಲೆ ವಿಭಜಿಸಿದೆ. ಮತಕ್ಕಾಗಿ ವಿಭಜನೆಯಾದ ದೇಶವನ್ನು ಪ್ರಧಾನಿ ಮೋದಿ ಒಂದುಗೂಡಿಸುತ್ತಿದ್ದಾರೆ. ಇದನ್ನು ರಾಹುಲ್​ ಗಾಂಧಿ ಅರ್ಥ ಮಾಡಿಕೊಳ್ಳಬೇಕು ಎಂದರು.

    ಭಾರತೀಯರು 70 ವರ್ಷಗಳಿಂದ ಎಲ್ಲ ಧರ್ಮವನ್ನು ಗೌರವಿಸುತ್ತಿದ್ದಾರೆ. ಅಲ್ಲದೆ ಅನ್ಯ ಧರ್ಮದವದೊಂದಿಗೆ ಸಹಬಾಳ್ವೆ ಜೀವನ ನಡೆಸುತ್ತಿದ್ದಾರೆ. ಆದರೆ ನೆರೆ ರಾಷ್ಟ್ರಗಳಾದ ಪಾಕಿಸ್ತಾನದಲ್ಲಿ ಈ ಸ್ಥಿತಿ ಇಲ್ಲ. ಅಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಪಾಕಿಸ್ತಾನದಲ್ಲಿ ಶೇ.30 ಇದ್ದ ಹಿಂದುಗಳು ಈಗ ಕೇವಲ ಶೇ.3ಕ್ಕೆ ಇಳಿದಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts