More

    ನಾಳೆಯಿಂದಲೇ ಮನೆ ಬಾಗಿಲಿಗೆ ಮದ್ಯ ಸರಬರಾಜು!

    ಚಂಡೀಗಢ: ಪಂಜಾಬ್​ನಲ್ಲಿ ನಾಳೆಯಿಂದಲೇ ಮನೆಬಾಗಿಲಿಗೆ ಮದ್ಯ ಸರಬರಾಜು ಪ್ರಕ್ರಿಯೆ ಶುರುವಾಗಲಿದ್ದು, ರಾಜ್ಯದ ಎಕ್ಸೈಸ್​ ಆ್ಯಂಡ್ ಟ್ಯಾಕ್ಸೇಷನ್​ ಡಿಪಾರ್ಟ್​ಮೆಂಟ್​ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಇದರಂತೆ ಬುಧವಾರದಿಂದಲೇ ಮದ್ಯದಂಗಡಿ ತೆರೆದಿದ್ದು, ವಹಿವಾಟು ಶುರುಮಾಡಿಕೊಂಡಿವೆ.

    ಲಾಕ್​ಡೌನ್ ಅವಧಿಯಲ್ಲಿ ಕರ್ಫ್ಯೂ ವಿನಾಯಿತಿ ಇರುವ ಬೆಳಗ್ಗೆ 9ರಿಂದ ಅಪರಾಹ್ನ 1 ಗಂಟೆ ತನಕ ಮಾತ್ರವೇ ಮದ್ಯದಂಗಡಿ ತೆರೆಯುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಎಲ್ಲರೂ ಮದ್ಯದಂಗಡಿ ಎದುರು ಕ್ಯೂ ನಿಲ್ಲುವುದನ್ನು ತಪ್ಪಿಸುವ ಸಲುವಾಗಿ ಹೋಮ್​ ಡೆಲಿವರಿ ನೀಡುವ ವಿಚಾರ ಸರ್ಕಾರದ ಪರಿಶೀಲನೆಗೆ ಬಂದಿದ್ದು, ಇದಕ್ಕೆ ಅನುಮತಿಯನ್ನೂ ನೀಡಿದೆ. ನಾಳೆಯಿಂದಲೇ ಈ ಹೋಮ್ ಡೆಲಿವರಿ ಸೇವೆ ಮದ್ಯಪ್ರಿಯರಿಗೆ ಲಭ್ಯವಿರಲಿದೆ.

    ಇದನ್ನೂ ಓದಿ: ಭಾರಿ ಪ್ರಮಾಣದ ಲಿಕ್ಕರ್ ಮಿಸ್ಸಿಂಗ್​; ಪೊಲೀಸರ ಮೇಲೆಯೇ ಡೌಟ್​!

    ಮದ್ಯ ಹೋಮ್ ಡೆಲಿವರಿಗೆ ಸಮಯ ನಿಗದಿ ಮಾಡುವ ವಿಚಾರವೂ ಸರ್ಕಾರದ ಪರಿಶೀಲನೆಯಲ್ಲಿದೆ. ಇದುವರೆಗೆ ಮದ್ಯವನ್ನು ಹೋಮ್ ಡೆಲಿವರಿ ಮಾಡುವ ಸೌಲಭ್ಯ ಇರಲಿಲ್ಲ. ಈಗ ಈ ಸನ್ನಿವೇಶದಲ್ಲಿ ಪಂಜಾಬ್​​ನ 1914ರ ಎಕ್ಸೈಸ್ ಆ್ಯಕ್ಟ್​ ಮತ್ತು ಎಕ್ಸೈಸ್ ರೂಲ್ಸ್​ಗೆ ಹೊರತಾಗಿ ಕೋವಿಡ್ 19 ನಿಯಮಾವಳಿ ಪ್ರಕಾರ ಸಾಮಾಜಿಕ ಅಂತರದ ಕಾರಣ ಇಂಥದ್ದೊಂದು ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಅಂದ ಹಾಗೆ ಈ ಹೋಮ್ ಡೆಲಿವರಿ ಸೇವೆ ಲಾಕ್​ಡೌನ್ ಅವಧಿಗೆ ಮಾತ್ರವೇ ಸೀಮಿತ. ಹೋಮ್ ಡೆಲಿವರಿ ಬಾಯ್​ಗಳಿಗೆ ಸರ್ಕಾರ ಗುರುತು ಚೀಟಿ ವಿತರಿಸಲಿದೆ. ಮದ್ಯದ ಅಂಗಡಿ ಎದುರು ಐದು ಜನಕ್ಕಿಂತ ಹೆಚ್ಚು ಜನ ನಿಲ್ಲುವಂತಿಲ್ಲ. ಅಷ್ಟು ಜನ ಇದ್ದರೂ ಅವರು ಸಾಮಾಜಿಕ ಅಂತರ ಕಾಯುವಂತೆ ನೋಡಿಕೊಳ್ಳಬೇಕಾದ್ದು ಆಯಾ ಮದ್ಯದಂಗಡಿ ಮಾಲೀಕರ ಹೊಣೆಗಾರಿಕೆ. ಇನ್ನು, ಮದ್ಯ ಹೋಮ್ ಡೆಲಿವರಿ ಬಯಸುವವರು ಹಣ ಪಾವತಿಸಿ ಗರಿಷ್ಠ ಎರಡು ಲೀಟರ್​ ಮದ್ಯವನ್ನಷ್ಟೇ ಪಡೆಯಬಹುದು. ಆದಾಗ್ಯು, ಪಂಜಾಬ್​ ಮೀಡಿಯಂ ಲಿಕ್ಕರ್​ ಅನ್ನು ಹೋಮ್ ಡೆಲಿವರಿ ನೀಡಲಾಗದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: ಮದ್ಯಪ್ರಿಯರಿಗೆ ಶಾಕಿಂಗ್​ ನ್ಯೂಸ್​: ಕುಡುಕರ ಆಸೆ ಈಡೇರಿಸಿ ಜೇಬಿಗೆ ಕತ್ತರಿ ಹಾಕಿದ ಸರ್ಕಾರ

    ಮದ್ಯ ಗುತ್ತಿಗೆದಾರರು ಶೇಕಡ 50 ಲೈಸನ್ಸ್ ಫೀ ಪಾವತಿಸಿದರೆ ಮಾತ್ರವೇ ಅವರ ಅಂಗಡಿಯನ್ನು ತೆರೆಯುವುದಕ್ಕೆ ಅವಕಾಶ ನೀಡಲಾಗುತ್ತದೆ. ಪಂಜಾಬ್​ ಸರ್ಕಾರ ಇದಕ್ಕೂ ಮೊದಲ ಮದ್ಯದಂಗಡಿ ತೆರೆಯಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು. ಆ ಮೂಲಕ ಟ್ಯಾಕ್ಸ್​ ರೆವೆನ್ಯೂ ಸಂಗ್ರಹಿಸುವ ಇರಾದೆಯನ್ನು ಅದು ಕೇಂದ್ರದ ಮುಂದೆ ವ್ಯಕ್ತಪಡಿಸಿತ್ತು. (ಏಜೆನ್ಸೀಸ್)

    ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts