More

    ಅಬ್ಬಬ್ಬಾ… ಹೇಗಿವೆ ಗೊತ್ತಾ ‘ಕೆಜಿಎಫ್​-2’ ಫ್ಯಾನ್ ಮೇಡ್ ಪೋಸ್ಟರ್​ಗಳು? #RockyBhaiFandom

    ಬೆಂಗಳೂರು: ಇಡೀ ದೇಶದಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಹವಾ ಜೋರಾಗಿದೆ. ಅದರಲ್ಲಿಯೂ, ಉತ್ತರ ಭಾರತದಲ್ಲಿ ಮತ್ತು ತೆಲುಗಿನಲ್ಲಿ ‘ಕೆಜಿಎಫ್: ಚಾಪ್ಟರ್ 2’ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ವಿದೇಶಗಳಲ್ಲಿ ಕೂಡಾ ಈ ಸಿನಿಮಾದ ಹವಾ ಈಗಾಗಲೇ ಆರಂಭವಾಗಿದೆ. ಇನ್ನು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಲು ಸಾಧ್ಯವಾದ ಎಲ್ಲಾ ರೀತಿಗಳಲ್ಲಿ ಈ ಚಿತ್ರತಂಡ ಸಿನಿಮಾದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯೇ ಸಿನಿಮಾದ ಸ್ಟ್ಯಾಂಡಿಗಳನ್ನು ವಿಶ್ವಾದ್ಯಂತ ಹಲವು ಥಿಯೇಟರ್ ಆವಾರಣಗಳಲ್ಲಿ ಪ್ರದರ್ಶನ ಮಾಡುವುದಾಗಿ ಮಾಹಿತಿ ಹೊರಬಿದ್ದಿತು.
    ಅದಾದ ಬಳಿಕ, ಅಭಿಮಾನಿಗಳು ವಿನ್ಯಾಸಗೊಳಿಸಿದ ಕೆಲವು ಪೋಸ್ಟರ್​ಗಳನ್ನು ಪ್ರಮುಖ ಸ್ಥಳಗಳಲ್ಲಿ ಹಾಕಲಾಗುವುದು ಎಂದು ಸಿನಿಮಾ ತಂಡ ತಿಳಿಸಿತ್ತು. ಇದೀಗ, ‘ಕೆಜಿಎಫ್: ಚಾಪ್ಟರ್ 2’ ತಂಡದ ಕರೆಗೆ ಸ್ಪಂದಿಸಿದ ಹಲವಾರು ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಕ್ರಿಯೇಟಿವ್ ಪೋಸ್ಟರ್​ಗಳನ್ನು ಮಾಡಿದ್ದಾರೆ. ಇನ್ನು, ಹಾಗೆ ಬಂದ ಸಾವಿರಾರು ಪೋಸ್ಟರ್​ಗಳಲ್ಲಿ ಕೆಲವೇ ಕೆಲವು ಪೋಸ್ಟರ್​ಗಳನ್ನು ಚಿತ್ರತಂಡ ಆಯ್ಕೆ ಮಾಡಿದೆ. ಇನ್ನು, ಹಾಗೆ ಆಯ್ಕೆಯಾದ ಕೆಲವು ಪೋಸ್ಟರ್​ಗಳು ಮುಂಬೈನ ಪ್ರಮುಖ ಸ್ಥಳಗಳಲ್ಲಿ ರಾರಾಜಿಸಲಿವೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ.
    ಚಿತ್ರದ ಅಭಿಮಾನಿಗಳು ಈ ಪರಿ ರೆಸ್ಪಾನ್ಸ್ ನೀಡಿರುವುದು ಚಿತ್ರತಂಡಕ್ಕೆ ತುಂಬಾನೆ ಖುಷಿ ಕೊಟ್ಟಿದ್ದು, ಆಯ್ಕೆಯಾದ ಕೆಲವು ಫ್ಯಾನ್ ಮೇಡ್ ಪೋಸ್ಟರ್​ಗಳನ್ನು ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಅವರ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದೆ. ಪೋಸ್ಟರ್ ಜತೆಗೆ, ಯಾವ ಪೋಸ್ಟರ್​ ಎಲ್ಲಿ ಪ್ರದರ್ಶನ ಕಾಣಲಿದೆ, ಆ ಪೋಸ್ಟರ್ ಅನ್ನು ಯಾರು ಮಾಡಿದ್ದು ಎಂಬ ಮಾಹಿತಿಯನ್ನೂ ಒಳಗೊಂಡಿದೆ. ಸದ್ಯಕ್ಕೆ, ಆಯ್ಕೆಯಾದ 5 ಪೋಸ್ಟರ್​ಗಳನ್ನು ಕರ್ನಾಟಕದ ಅಭಿಮಾನಿ ಸಚಿನ್​ ಕುಮಾರ್, ಮಹಾರಾಷ್ಟ್ರದ ಪರಿವರ್ತನ್, ಕರ್ನಾಟಕದ ಅಭಿಮಾನಿ ಜಾನ್​ ಪೌಲ್​ ಗ್ಸಾವಿಯರ್, ಕರ್ನಾಟಕದ ಅಭಿಮಾನಿ ಅಭಿಜಿತ್​ ಶೆಟ್ಟಿ, ತಮಿಳುನಾಡಿನ ಬಾಲಾಜಿ ಮೂರ್ತಿ ಎಂಬುವವರು ಮಾಡಿದ್ದಾರೆ.
    ಅಂದಹಾಗೆ, ಪ್ರದರ್ಶನಕ್ಕೆ ಆಯ್ಕೆಯಾದ 5 ಪೋಸ್ಟರ್​ಗಳು ಒಂದಕ್ಕಿಂತ ಒಂದು ಸೂಪರ್ ಆಗಿವೆ ಎಂದು ಅನಿಸುತ್ತೆ. ಹೊರರಾಜ್ಯಗಳು ಮತ್ತು ವಿದೇಶಗಳಲ್ಲಿ ಸಹ ಹಲವು ಅಭಿಮಾನಿಗಳು ತಮ್ಮ ವಿಶೇಷ ಕಲ್ಪನೆಯಲ್ಲಿ ಸಿನಿಮಾದ ಪೋಸ್ಟರ್​ಗಳನ್ನು ವಿನ್ಯಾಸ ಮಾಡಿದ್ದಾರೆ. ಅಭಿಮಾನಿಗಳ ಹೆಚ್ಚು ಪೋಸ್ಟರ್​ಗಳನ್ನು ಚಿತ್ರತಂಡ ಆಯ್ಕೆ ಮಾಡದಿದ್ದರೂ, ಈ ಪರಿಯ ರೆಸ್ಪಾನ್ಸ್ ಕಂಡು ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನು, ಕೆಲ ಅಭಿಮಾನಿಗಳು ತಾವು ಮಾಡಿದ ಪೋಸ್ಟರ್​ಗಳನ್ನು ತಮ್ಮದೇ ಸೋಶಿಯಲ್ ಮೀಡಿಯಾ ಖಾತೆಗಳನ್ನು ಬಳಸಿ ವೈರಲ್ ಮಾಡುತ್ತಿದ್ದಾರೆ. ಪ್ರತಿ ಪೋಸ್ಟರ್​ಗಳಲ್ಲೂ #RockyBhaiFandom ಎಂಬ ಹ್ಯಾಶ್​ಟ್ಯಾಗ್ ಇದ್ದು, ಟ್ವಿಟರ್​ನಲ್ಲಿ ಇವು ಸಿಕ್ಕಾಪಟ್ಟೆ ಟ್ರೆಂಡ್​ ಆಗುತ್ತಿವೆ

    ಅಬ್ಬಬ್ಬಾ... ಹೇಗಿವೆ ಗೊತ್ತಾ ‘ಕೆಜಿಎಫ್​-2’ ಫ್ಯಾನ್ ಮೇಡ್ ಪೋಸ್ಟರ್​ಗಳು? #RockyBhaiFandom ಅಬ್ಬಬ್ಬಾ... ಹೇಗಿವೆ ಗೊತ್ತಾ ‘ಕೆಜಿಎಫ್​-2’ ಫ್ಯಾನ್ ಮೇಡ್ ಪೋಸ್ಟರ್​ಗಳು? #RockyBhaiFandom ಅಬ್ಬಬ್ಬಾ... ಹೇಗಿವೆ ಗೊತ್ತಾ ‘ಕೆಜಿಎಫ್​-2’ ಫ್ಯಾನ್ ಮೇಡ್ ಪೋಸ್ಟರ್​ಗಳು? #RockyBhaiFandom ಅಬ್ಬಬ್ಬಾ... ಹೇಗಿವೆ ಗೊತ್ತಾ ‘ಕೆಜಿಎಫ್​-2’ ಫ್ಯಾನ್ ಮೇಡ್ ಪೋಸ್ಟರ್​ಗಳು? #RockyBhaiFandom ಅಬ್ಬಬ್ಬಾ... ಹೇಗಿವೆ ಗೊತ್ತಾ ‘ಕೆಜಿಎಫ್​-2’ ಫ್ಯಾನ್ ಮೇಡ್ ಪೋಸ್ಟರ್​ಗಳು? #RockyBhaiFandom ಅಬ್ಬಬ್ಬಾ... ಹೇಗಿವೆ ಗೊತ್ತಾ ‘ಕೆಜಿಎಫ್​-2’ ಫ್ಯಾನ್ ಮೇಡ್ ಪೋಸ್ಟರ್​ಗಳು? #RockyBhaiFandom ಅಬ್ಬಬ್ಬಾ... ಹೇಗಿವೆ ಗೊತ್ತಾ ‘ಕೆಜಿಎಫ್​-2’ ಫ್ಯಾನ್ ಮೇಡ್ ಪೋಸ್ಟರ್​ಗಳು? #RockyBhaiFandom

    ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಮೆಗಾ ಕುಟುಂಬದ ಕುಡಿ! ತಂದೆ ನಾಗಬಾಬು ಹೇಳಿದ್ದೇನು?

    ಮೇ ತಿಂಗಳಲ್ಲಿ ಅಪ್ಪು ಮತ್ತೆ ತೆರೆಯ ಮೇಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts