More

    ಸಿನಿಮೀಯ ಹೋಳಿ, ಹಬ್ಬಕ್ಕೂ ಹಬ್ಬಿದ ‘ದಿ ಕಶ್ಮೀರ್ ಫೈಲ್ಸ್’ ಕ್ರೇಜ್​..

    ಕೊಪ್ಪಳ: ರಾಜ್ಯದ ಕೊಪ್ಪಳದಲ್ಲಿ ಹಬ್ಬಕ್ಕೂ ದಿ ಕಶ್ಮೀರ್ ಫೈಲ್ಸ್ ಚಿತ್ರದ ಕ್ರೇಜ್​ ಹಬ್ಬಿದ್ದು, ಹೋಳಿ ಕೂಡ ಸಿನಿಮೀಯವಾಗಿ ಆಚರಣೆಗೊಂಡಿದೆ. ಈ ಸಿನಿಮಾ ಕುರಿತು ಪರ-ವಿರೋಧ ಅಭಿಪ್ರಾಯಗಳು ಹರಿದಾಡುತ್ತಿರುವಾಗಲೇ ಇಂಥದ್ದೊಂದು ಬೆಳವಣಿಗೆ ನಡೆದಿರುವುದು ಗಮನ ಸೆಳೆದಿದೆ.

    ಕೊಪ್ಪಳದ ಕೆಲವು ಯುವಕರು ಹೋಳಿ ಆಡುವ ಮೂಲಕ ಕಶ್ಮೀರ್ ಫೈಲ್ಸ್ ಚಿತ್ರದ ಪ್ರಚಾರವನ್ನೂ ಮಾಡಿದ್ದು, ಆ ಫೋಟೋಗಳು ಎಲ್ಲೆಡೆ ಹರಿದಾಡಲಾರಂಭಿಸಿವೆ. ಕೊಪ್ಪಳ ಜಿಲ್ಲೆಯ ಕೆಲವು ಕಡೆ ಇಂದು ಕೂಡ ಹೋಳಿ ಹಬ್ಬ ನಡೆಯುತ್ತಿದ್ದು, ಗಂಗಾವತಿಯಲ್ಲಿ ಹೋಳಿ ಹಬ್ಬದ ಆಚರಣೆ ವೇಳೆ ಈ ದೃಶ್ಯ ಕಂಡುಬಂದಿದೆ.

    ದಿ ಕಶ್ಮೀರ್ ಫೈಲ್ಸ್ ಚಿತ್ರದ ನಾಯಕನಂತೆ ಈ ಯುವಕರು ಕೂಡ ಮುಖಕ್ಕೆ ನೀಲಿ ಬಣ್ಣ ಬಳಿದುಕೊಂಡು, ಹಣೆಗೆ ತಿಲಕ ಇಟ್ಟುಕೊಂಡು ಹೋಳಿ ಆಡಿದ್ದಾರೆ. ಆರು ಮಂದಿ ಯುವಕರು ಹೀಗೆ ವಿಭಿನ್ನವಾಗಿ ಹೋಳಿ ಆಚರಿಸಿಕೊಂಡ ಫೋಟೋಗಳು ಈಗ ಎಲ್ಲೆಡೆ ಹರಿದಾಡಲಾರಂಭಿಸಿವೆ.

    ಸಿನಿಮೀಯ ಹೋಳಿ, ಹಬ್ಬಕ್ಕೂ ಹಬ್ಬಿದ 'ದಿ ಕಶ್ಮೀರ್ ಫೈಲ್ಸ್' ಕ್ರೇಜ್​..

    ಅಮ್ಮನೆದುರೇ ಮಗಳ ಕುತ್ತಿಗೆ ಮೇಲೆ ಸಾಗಿದ ಆಟೋ; ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts