More

    ಗಂಡ-ಹೆಂಡತಿ ಒಂದೇ ಕಡೆ ವರ್ಗಾವಣೆ

    ಹೊಳಲ್ಕೆರೆ: ಶಿಕ್ಷಣ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಚಾರ ತಾಂಡವಾಡುತ್ತಿದ್ದು, ಇದಕ್ಕೆ ಸಚಿವ ಸುರೇಶಕುಮಾರ್ ಕಡಿವಾಣ ಹಾಕಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಶಿಕ್ಷಕ ಸಂಘದ ಪ್ರತಿನಿಧಿಗಳು ಹಾಗೂ ಬಿಜೆಪಿ ಪದಾಧಿಕಾರಿಗಳಿಂದ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿ, ಶಿಕ್ಷಕರು ಇನ್ನು ಮುಂದೆ ವರ್ಗಾವಣೆ, ಮುಂಬಡ್ತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸುವ ಅಗತ್ಯ ಇಲ್ಲ ಎಂದರು.

    ಶಿಕ್ಷಕರ ಸಮಸ್ಯೆಗಳು ಶಿಕ್ಷಣ ಇಲಾಖೆಯ ಗಮನಕ್ಕೆ ಈಗಾಗಲೆ ಬಂದಿದೆ. ಮುಂದಿನ ಮಾರ್ಚ್‌ನಿಂದ ಮೇ ವರೆಗೆ ವರ್ಗಾವಣೆ ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆ ಕೈಗೊಳ್ಳುತ್ತದೆ ಎಂದರು.

    ಪತಿ-ಪತ್ನಿ ಇಬ್ಬರು ಶಿಕ್ಷಕರಾಗಿದ್ದು ಅವರು ಬೇರೆ ಬೇರೆ ಸ್ಥಳಗಳಲ್ಲಿ ನಿಯೋಜನೆ ಗೊಂಡಿದ್ದರೆ ಅಂತಹವರನ್ನು ಒಂದೇ ಕಡೇ ವರ್ಗಾವಣೆ ಮಾಡುವ ಪ್ರಸ್ತಾಪ ಸರ್ಕಾರದ ಬಳಿ ಇದೆ. ಇದಕ್ಕೆ ಸರ್ಕಾರ ಮನ್ನಣೆ ನೀಡಲಿದ್ದು, ಬಹಳಷ್ಟು ಮಂದಿ ನೆಮ್ಮದಿ ಜೀವನ ಜತೆಗೆ ಉತ್ತಮ ಬೋಧನೆಗೆ ಸಹಕಾರಿ ಆಗಲಿದೆ ಎಂದು ಹೇಳಿದರು.

    ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಎಂ.ರೂಪಾ, ತಾಲೂಕು ಮಂಡಲ ಅಧ್ಯಕ್ಷ ಸಿದ್ದೇಶ್, ಜಿಪಂ ಮಾಜಿ ಸದಸ್ಯ ಜಿ.ಎಚ್.ಶಿವಕುಮಾರ್, ಪಪಂ ಸದಸ್ಯರಾದ ಕೆ.ಸಿ.ರಮೇಶ್, ಆರ್.ಅಶೋಕ್, ಮಲ್ಲಿಕಾರ್ಜುನ, ವಿಜಯಕುಮಾರ್, ಜಯಕುಮಾರ್, ಎನ್.ಶಿವಮೂರ್ತಿ, ಬಿಇಒ ಜಗದೀಶ್ವರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts