More

    ವಿಜ್ಞಾನ ಚಿತ್ರಗಳು ಪಠ್ಯಕ್ರಮಕ್ಕೆ ಪೂರಕ

    ಹೊಳಲ್ಕೆರೆ: ಚಿತ್ರಗಳ ಜತೆ ವಿಜ್ಞಾನ ವಿಷಯ ಬೋಧಿಸಿದರೆ ಕಲಿಕೆ ಪರಿಣಾಮಕಾರಿಯಾಗುತ್ತದೆ ಪ್ರಾಂಶುಪಾಲ ಎನ್.ಶಿವಮೂರ್ತಿ ಹೇಳಿದರು.

    ಪಟ್ಟಣದ ಹೊರವಲಯದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಜ್ಞಾನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಯಾಶೀಲತೆ ಹೆಚ್ಚಿಸಲು ಇಂತಹ ಕಾರ್ಯಕ್ರಮ ಆಯೋಜನೆ ಅವಶ್ಯ ಎಂದರು.

    ವಿಜ್ಞಾನ ಶಿಕ್ಷಕ ಎಂ.ಸುರೇಶ್ ಅವರು ವಿಜ್ಞಾನ ಚಿತ್ರಗಳ ಮಹತ್ವ, ಉಪಯುಕ್ತತೆ ಕುರಿತು ತಿಳಿಸಿದರು. ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎ.ಜಯಪ್ಪ, ಕಾರ್ಯದರ್ಶಿ ಕೆ.ಪಿ.ಮನೋಹರ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಜಿ.ವೆಂಕಟೇಶ್ ಮಾತನಾಡಿದರು.
    ವಿಜ್ಞಾನ ಶಿಕ್ಷಕಿ ತಜೀನ್ ಸುಹಾ, ಶಿಕ್ಷಕರಾದ ಮಹಮದ್ ರಸೂಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts