More

    ದಾರ್ಶನಿಕರ ಸಂದೇಶಗಳಿಂದ ಸಮಾಜ ಸುಧಾರಣೆ

    ಯಲಬುರ್ಗಾ: ಧಾರ್ಮಿಕ ಕಾರ್ಯಕ್ರಮಗಳು ಎಲ್ಲ ಸಮುದಾಯಗಳ ಸಹಬಾಳ್ವೆೆಗೆ ಸಹಕಾರಿ ಎಂದು ಕುದರಿಮೋತಿ ಮೈಸೂರು ಸಂಸ್ಥಾನಮಠದ ಶ್ರೀ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.

    ತಾಲೂಕಿನ ಗೆದಗೇರಿ ಶ್ರೀ ಶರಣಬಸವೇಶ್ವರ ಜಾತ್ರೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

    ಹಳ್ಳಿಗಳಲ್ಲಿ ಎಲ್ಲರೂ ಸೇರಿಕೊಂಡು ನಡೆಸುವ ಧಾರ್ಮಿಕ ಕಾರ್ಯಗಳಿಂದ ಪ್ರೀತಿ, ವಿಶ್ವಾಸ ಜೀವಂತವಾಗಿವೆ. ದಾರ್ಶನಿಕರು ಮತ್ತು ಗುರು ಹಿರಿಯರ ಸಂದೇಶಗಳು ಸಮಾಜದ ಪರಿವರ್ತನೆಗೆ ಕಾರಣವಾಗಿವೆ. ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು ಎಂದರು.
    ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಎಲ್ಲರೂ ದಾನ, ಧರ್ಮ, ಸನ್ಮಾರ್ಗ ಹಾಗೂ ಸದ್ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ, ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಆನಂದ ಉಳ್ಳಾಗಡ್ಡಿ, ದೇವಸ್ಥಾನ ಕಮಿಟಿ ಕಾರ್ಯದರ್ಶಿ ರುದ್ರಪ್ಪ ಕೊಪ್ಪದ, ದೇವಸ್ಥಾನ ಕಮಿಟಿ ಅಧ್ಯಕ್ಷ ಬಸವರಾಜ ಬೆದವಟ್ಟಿ, ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ, ಉಪಾಧ್ಯಕ್ಷೆ ಶಶಿಕಲಾ ಮುರಡಿ, ಸದಸ್ಯರಾದ ಶರಣಪ್ಪ ನಾಗೂರು, ನೀಲವ್ವ ಕೋಳಿಹಾಳ, ನಾಗರಾಜ ನಾಯ್ಕ, ಪ್ರಮುಖರಾದ ಮಹೇಶ ಭೂತೆ, ರುದ್ರಪ್ಪ ನಡುಲಮನಿ, ದೊಡ್ಡನಗೌಡ ಗೌಡ್ರ, ತಿರುಪತಿ ಬಸರಿಗಿಡದ, ಶರಣಪ್ಪ ಇಟಗಿ, ಶೇಖಪ್ಪ ಬಳಿಗೇರ, ಶರಣಪ್ಪ ಗೋಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts