More

    ಸಾಮಾಜಿಕ ಕಾರ್ಯದಲ್ಲಿ ಪತ್ರಿಕಾರಂಗದ ಹೆಜ್ಜೆ ಶ್ಲಾಘನೆ

    ದೇವರಹಿಪ್ಪರಗಿ: ಪತ್ರಿಕಾ ಕೇತ್ರ ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದಲು ಸಹಕಾರಿಯಾಗಿದೆ. ಪ್ರತಿಯೊಂದು ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸಮಾಜ ಸುಧಾರಣೆಯಲ್ಲಿಯೂ ಪ್ರಮುಖ ಹೆಜ್ಜೆಯನ್ನಿಟ್ಟಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

    ಸಮೀಪದ ಪಡಗಾನೂರ ಗ್ರಾಮದಲ್ಲಿ ಕಾನಿಪ ಸಂಘದ ತಾಲೂಕು ಘಟಕ ಹಾಗೂ ಜಿಲ್ಲಾ ಕಜಾಪ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮಾಚರಣೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರ ಸಂಘವೂ ಇತ್ತೀಚಿನ ದಿನಗಳಲ್ಲಿ ಉತ್ತಮ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತ ಸಮಾಜದಲ್ಲಿನ ಸಾಧಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ದಿನನಿತ್ಯ ನಡೆಯುವ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರು ನೋಡುವಂತಾಗಲು ಪತ್ರಕರ್ತರ ಶ್ರಮ ಬಹಳಷ್ಟಿದೆ. ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಸದಾ ಚಿಂತಿಸುತ್ತ ಪ್ರತಿಯೊಂದು ವರ್ಗದ ಜನರನ್ನು ಉತ್ತಮ ಮಾರ್ಗದೆಡೆಗೆ ಬರುವಂತೆ ಪ್ರೇರೆಪಿಸುತ್ತ ಬಂದಿರುವ ಕಾರ್ಯ ಉತ್ತಮವಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿ ಜನರ ಬಳಿ ಕನ್ನಡನಾಡು ನುಡಿಯ ಕುರಿತು ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

    ಮಾಜಿ ಶಾಸಕ ಅಶೋಕ ಶಾಬಾದಿ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ರಾಜ್ಯ ಕಾರ್ಯಕಾರಣಿ ಸದಸ್ಯ ಡಿ.ಬಿ. ವಡವಡಗಿ ಮಾತನಾಡಿದರು. ಉಪನ್ಯಾಸಕ ಮಂಜುನಾಥ ಜುನಗೊಂಡ ಹಾಗೂ ನಾಗೇಶ ತಳವಾರ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.

    ದೇವರಹಿಪ್ಪರಗಿ ಅವೂಗೇಶ್ವರ ತಪೋವನ ಪರದೇಶಿ ಮಠದ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿದರು. ಅಯ್ಯಪ್ಪಸ್ವಾಮಿಗಳು ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತರಾಯಗೌಡ ಪಾಟೀಲ, ಅವಿನಾಶ ಬಿದರಿ, ಬಾಳನಗೌಡ ಪಾಟೀಲ, ಸಂಗಮೇಶ ಉತ್ನಾಳ, ಕಬೂಲ್ ಕೊಕಟನೂರ, ಮಹಾದೇವಿ ಆಕಳವಾಡಿ, ಕಸ್ತೂರಿಬಾಯಿ ಹೊಸಟ್ಟಿ, ಡಾ. ರಮೇಶ ರಾಠೋಡ, ಆನಂದ ಔದಿ, ಟಿ.ಕೆ. ಮಲಗೊಂಡ, ಕಾಶಿರಾಯಗೌಡ ಬಿರಾದಾರ, ಬಸನಗೌಡ ಪಾಟೀಲ, ಶ್ರೀಧರ ನಾಡಗೌಡ, ಮಹಮ್ಮದರಫೀಕ ಮೊಮೀನ, ಶಿವಾನಂದ ಕುಂಬಾರ, ಗುರುನಾಥ ಮುರುಡಿ, ಹುಸೇನ್ ಕೊಕಟನೂರ, ಸಂಗಮೇಶ ಕೆರೆಪ್ಪಗೋಳ, ಚೆನ್ನವೀರ ಕುದರಿ, ಶ್ರೀಶೈಲ ಕಬ್ಬಿನ, ವಿಜುಗೌಡ ಕಾಳಶೆಟ್ಟಿ, ಕಾರ್ಯನಿರತ ಪತ್ರಕರ್ತರು, ಗ್ರಾಪಂ ಸದಸ್ಯರು, ಪದಾಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts