More

    ನಾಡಿಗೆ ಮಲ್ಲಾಡಿಹಳ್ಳಿ ಕೊಡುಗೆ ಅಪಾರ

    ಹೊಳಲ್ಕೆರೆ: ಸಾಂಸ್ಕೃತಿಕ ಲೋಕಕ್ಕೆ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

    ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರುದಾಸ್‌ಜೀ ಅವರ ಪುಣ್ಯಾರಾಧನೆ ಅಂಗವಾಗಿ ಮಲ್ಲಾಡಿಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹದ ಸಮಾರೋಪದಲ್ಲಿ ಮಾತನಾಡಿದರು.

    ಮಲ್ಲಾಡಿಹಳ್ಳಿ ಶ್ರೀಗಳು ಯೋಗ, ಆಯುರ್ವೇದ ಮತ್ತು ಶಿಕ್ಷಣ ಕ್ಷೇತ್ರದ ಜತೆ ಸಾಂಸ್ಕೃತಿಕ ಲೋಕಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಅವರು ನಾಟಕ ರಚಿಸಿ ಪ್ರದರ್ಶನ ಮಾಡಿಸಿರುವುದು ನೋಡಿದ್ದೇವೆ. ಶ್ರೀ ಶಿವಮೂರ್ತಿ ಮುರುಘಾ ಶರಣರು ಆ ಪರಂಪರೆ ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.

    ಹಂಪಿ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗ ಮುಖ್ಯಸ್ಥ ಡಾ.ಚಲುವರಾಜು ಮಾತನಾಡಿ, ಜಗತ್ತಿನ ಎಲ್ಲ ಜ್ಞಾನವು ಹುಟ್ಟಿರುವುದು ಗುಡಿಸಲಿನಲ್ಲಿ ಮತ್ತು ಅದು ಸಾಯುವುದು ಅರಮನೆಯಲ್ಲಿ ಎಂದು ಹೇಳಿದರು.

    ದೃಶ್ಯ ಮಾಧ್ಯಮಗಳಿಂದ ಸಾಮಾಜಿಕ ಜಾಗೃತಿ ಮೂಡಿಸಬಹುದು. ಸಾಹಿತ್ಯ, ಸಂಗೀತ ಮತ್ತು ನಾಟಕಗಳ ಸೂಕ್ಷ್ಮ ರಸ ಸಂವೇದನೆಯು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆದರ್ಶಗಳನ್ನು ಮೂಡಿಸಬಹುದು ಎಂದರು.

    ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿ ದೊರೆಸ್ವಾಮಿ ಮಾತನಾಡಿ, ಪಠ್ಯಕ್ಕೆ ಪೂರಕವಾಗುವ ರಂಗ ಚಟುವಟಿಕೆಗಳಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.

    ಜಮುರಾ ತಂಡದ ಕಲಾವಿದರನ್ನು ಈ ವೇಳೆ ಗೌರವಿಸಲಾಯಿತು. ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಪರಮಶಿವಯ್ಯ, ಉಪನ್ಯಾಸಕ ಜೆ.ರಘುನಾಥ್, ವ್ಯವಸ್ಥಾಪಕ ಎಚ್.ಎಸ್.ಸಿದ್ರಾಮಸ್ವಾಮಿ, ಉಪ ಪ್ರಾಚಾರ್ಯ ಕೆ.ವಿ.ರಾಜಶೇಖರ್, ಉಪನ್ಯಾಸಕ ತಂಗರಾಜು, ಬಿ.ಪಿ.ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts