More

    ಭವಿಷ್ಯದ ದಿನಗಳು ಕಠಿಣ

    ಹೊಳಲ್ಕೆರೆ: ಕರೊನಾ ನಿಯಂತ್ರಣಕ್ಕೆ ಸರ್ಕಾರದ ಸೂಚನೆಗಳನ್ನು ಜನತೆ ಕಡ್ಡಾಯ ಪಾಲಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಮನವಿ ಮಾಡಿದರು.

    ಅಧಿಕಾರಿಗಳ ತಂಡದೊಂದಿಗೆ ತಾಲೂಕಿನ ಬಿ.ದುರ್ಗ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚಾರ ನಡೆಸಿ ಹಳ್ಳಿಯ ಜನರೊಂದಿಗೆ ಸಂವಾದ ನಡೆಸಿ ಮಾತನಾಡಿದರು.

    ಲಾಕ್‌ಡೌನ್ ಪ್ರಾರಂಭಿಸಿ ತಿಂಗಳು ಸಮಿಪಿಸುತ್ತಿದೆ. ಮುಂದಿನ ದಿನಗಳು ಕಠಿಣವಾಗಬಹುದು. ಎಲ್ಲದಕ್ಕೂ ಜನತೆ ಸಿದ್ಧರಾಗಿರಬೇಕು. ಈ ಸಂಕಷ್ಟದ ಸಮಯದಲ್ಲಿ ಸಹಕರಿಸಿದರೆ ಮಾತ್ರ ಕರೊನಾ ವೈರಸ್‌ನಿಂದ ರಕ್ಷಣೆ ಪಡೆಯಬಹುದು ಎಂದರು.

    ಕ್ಷೇತ್ರದಲ್ಲಿ ಸಮಸ್ಯೆಗಳು ಬರದಂತೆ ಸರ್ಕಾರದಿಂದ ಆಹಾರ ಧಾನ್ಯ ವಿತರಿಸಲಾಗಿದೆ. ತೀರ ಬಡತನದಲ್ಲಿರುವ ಜನರಿಗೆ, ನನ್ನ ಬೆಂಬಲಿಗರು ಆಹಾರದ ಕಿಟ್ ವಿತರಿಸಿದ್ದಾರೆ ಎಂದು ತಿಳಿಸಿದರು.

    ಜಿಪಂ ಸದಸ್ಯ ಸುಮಾ ಲಿಂಗರಾಜ್, ಮಾಜಿ ಅಧ್ಯಕ್ಷ ಎಲ್.ಬಿ.ರಾಜಶೇಖರ್, ತಾಪಂ ಸದಸ್ಯ ದೇವರಾಜ್, ಬಿಜೆಪಿ ಮುಖಂಡರಾದ ಗೌಡರ ಇಂದ್ರಪ್ಪ, ಎಂ.ಬಿ.ಸಿದ್ದೇಶ್, ಗ್ರಾಪಂ ಅಧ್ಯಕ್ಷ ಡಿ.ಸಿ.ಮೋಹನ್, ಎಪಿಎಂಸಿ ಸದಸ್ಯ ಮರಳಸಿದ್ದೇಶ್, ತಹಸೀಲ್ದಾರ್ ಕೆ.ನಾಗರಾಜ್, ಇಒ ತಾರಾನಾಥ, ಸಹಾಯಕ ಕೃಷಿ ನಿರ್ದೇಶಕ ಶ್ರೀನೀವಾಸಲು ಇತರರಿದ್ದರು.

    ತಾಲೂಕಿನ ಕಾಗಳಗೆರೆ, ಮೇಗಳಹಟ್ಟಿ, ಗೊಲ್ಲರಹಟ್ಟಿ, ಉಡುಗೆರೆ, ಬಂಡೆಬೊಮ್ಮನಹಳ್ಳಿ, ಬಂಡೆವಟ್ಟರಹಟ್ಟಿ, ಇಂಗಳದಹಟ್ಟಿ, ಸಾಸಲು, ಲಂಬಾಣಿಹಟ್ಟಿ, ತಣಿಗೆಹಳ್ಳಿ, ಹಿರೇಕಂದವಾಡಿ, ಕಲ್ಲವ್ಪನಾಗ್ತಿಹಳ್ಳಿ, ರಂಗ್ಪನಹಳ್ಳಿ, ಗುಂಜಗನೂರು, ಎಸ್.ಎಚ್.ಹಳ್ಳಿ, ಹೊನ್ನಕಾಲುವೆ, ಐನಹಳ್ಳಿ, ಕಡೂರು, ಚಿಕ್ಕಕಂದವಾಡಿ ಗ್ರಾಮಗಳಲ್ಲಿ ಪ್ರವಾಸ ನಡೆಸಲಾಯಿತು.

    ಇಂದು ವಿವಿಧೆಡೆ ಪ್ರವಾಸ: ಜೈಪುರ, ಅರೇಹಳ್ಳಿ, ಗುಂಡಮಡು, ಗುಂಡಿಮಡುಗೊಲ್ಲರಹಟ್ಟಿ, ಆಗ್ರಹಾರ, ಹುಲೇಮಳಲಿ, ಪುಣಜೂರು, ಕೊಡಗವಳ್ಳಿ, ಚಿಕ್ಕಎಮ್ಮಿಗನೂರು, ಹಿರೇಎಮ್ಮಿಗನೂರು, ಕಾಮನಹಳ್ಳಿ, ಅಜ್ಜಿಕ್ಯಾತನ ಹಳ್ಳಿ, ಅಂತಪುರ, ನಂದಿಹಳ್ಳಿ, ದಾಸರಹಳ್ಳಿ, ಕಾಳಘಟ್ಟ, ದಂಡಿಗೆನಹಳ್ಳಿ ವಿಶ್ವನಾಥನಹಳ್ಳಿ, ಕೋಟಿಗೆಹಳ್ಳಿಯಲ್ಲಿ ಶಾಸಕ ಚಂದ್ರಪ್ಪ ಪ್ರವಾಸ ನಡೆಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts