More

    ಅಧಿಕಾರಿ, ಜನಪ್ರತಿನಿಧಿಗಳಿಗೆ ದರ್ಪ ಬೇಡ: ಸಚಿವ ಎಚ್​. ಕೆ. ಪಾಟೀಲ

    ವಿಜಯವಾಣಿ ಸುದ್ದಿಜಾಲ ಗದಗ/ ಮುಂಡರಗಿ
    ರಾಜ್ಯ ಸರ್ಕಾರ ಆಡಳಿತದಲ್ಲಿ ಪ್ರಭುತ್ವ ತಂದಿದೆ. ಜನರ ಮನೆ ಬಾಗಿಲಿಗೆ ಆಡಳಿತ ತೆಗೆದುಕೊಂಡು ಹೋಗುವ ಇಚ್ಛಾಶಕ್ತಿ ಹೊಂದಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.
    ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡವರಿಗೆ ಸೌಲಭ್ಯ ಒದಗಿಸುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ದರ್ಪದ ಕಲ್ಪನೆ ಬದಲಾಯಿಸಬೇಕು. ಆಡಳಿತ ವ್ಯವಸ್ಥೆಯಲ್ಲಿ ತಾತ್ಸಾರ ಮನೋಭಾವದಿಂದ ವ್ಯವಸ್ಥೆ ಜಡಗಟ್ಟಿದೆ. ಕಾಂಗ್ರೆಸ್​ ಸರ್ಕಾರ ಜಡತ್ವವನ್ನು ನಿವಾರಿಸುವ ಕೆಲಸ ಮಾಡತ್ತಿದೆ. ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಿ ಜನರ ಸಮಸ್ಯೆ ಬಗೆ ಹರಿಸುತ್ತೇವೆ. ಜನತಾ ದರ್ಶನವು ಪ್ರಜಾಪ್ರಭುತ್ವದ ದೊಡ್ಡ ಪ್ರಯೋಗವಾಗಿದೆ ಎಂದರು.
    ಇಂದು ನಡೆಯುವ ಜನತಾ ದರ್ಶನದಲ್ಲಿ ಫೆ. 28 ರ ಒಳಗಾಗಿ ಎಲ್ಲ ಅಜಿರ್ಗಳಿಗೆ ಪರಿಹಾರ ನೀಡುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ ಎಂದರು.
    ಕಾರ್ಯಕ್ರಮದಲ್ಲಿ ಶಾಸಕ ಜಿ.ಎಸ್​. ಪಾಟೀಲ, ಚಂದ್ರು ಲಮಾಣಿ, ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್​, ಕೊಟ್ರೇಶ ವಿಭೂತಿ ಇತರರು ಇದ್ದರು.

    ಈ ಮೊದಲು ಕೇಂದ್ರದಿಂದ ಗ್ರಾಮದ ಅಭಿವೃದ್ಧಿಗೆ 1 ರೂ. ಬಿಡುಗಡೆ ಆದರೆ, ಪ್ರತಿ ಹಂತದಲ್ಲೂ ಲಂಚ ನೀಡುವ ವ್ಯವಸ್ಥೆ ಇತ್ತು. ಜಿಲ್ಲೆಯಲ್ಲಿ ಮಹಿಳಾ ಫಲಾನುಭವಿಗಳಿಗೆ ತಲಾ 2 ಸಾವಿರದಂತೆ 42 ಕೋಟಿ ರೂ. ವಿತರಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಎಲ್ಲಿಯೂ ಲಂಚ ನೀಡುವ ಪ್ರಸಂಗ ಬಂದಿದೆಯಾ ಎಂದು ಸಚಿವರು ಪ್ರಶ್ನಿಸಿದರು. ಸರ್ಕಾರದ ಆಧ್ಯತೆ ಬಡವರು ಮತ್ತು ಬಡವರ ಅಭಿವೃದ್ಧಿಗೆ ಶ್ರಮವಹಿಸುವುದಾಗಿದೆ ಎಂದು ಸಚಿವರು ಹೇಳಿದರು.

    ಗದಗ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಜನತಾ ದರ್ಶನದಲ್ಲಿ ಭಾಗಶಃ ಎಲ್ಲ ಅಜಿರ್ಗಳನ್ನು ಪರಿಹರಿಸಿದ್ದೇವೆ. ಆದೇ ರೀತಿ ಅನರ್ಹ 171 ಅಜಿರ್ಗಳನ್ನು ತಿರಸ್ಕರಿಸಿದ್ದೇವೆ. 171 ಅಜಿರ್ದಾರರು ಸೌಕರ್ಯ ಹೊಂದಿದವರಾಗಿ, ತೆರಿಗೆ ತುಂಬುವರಾಗಿದ್ದು ಅವರ ಅಜಿರ್ಗಳನ್ನು ತಿರಸ್ಕರಿಸ್ಕಾರ ಮಾಡಲಾಗಿದೆ. ನ್ಯಾಯಯುತ ಅಜಿರ್ಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಲು ಬದ್ಧತೆ ನಮ್ಮ ಸರ್ಕಾರಕ್ಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts