More

    ರೈತರು ತೊಗರಿ ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಲಿ

    ಹೂವಿನಹಿಪ್ಪರಗಿ: ರೈತರು ಬೆಳೆದ ತೊಗರಿ, ಕಡಲೆ ಬೆಳೆ ಸೇರಿ ಇತರೆ ದಾನ್ಯಗಳಿಗೆ ಸರ್ಕಾರ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಬೆಂಬಲ ಬೆಲೆ ನಿಗದಿ ಮಾಡಿದ್ದು, ನಾಡಿನ ಅನ್ನದಾತರು ಇದರ ಉಪಯೋಗ ಪಡೆಯಬೇಕೆಂದು ಯಾಳವಾರ ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ನಾಡಗೌಡ ಹೇಳಿದರು.
    ಸಮೀಪದ ಯಾಳವಾರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ನಿರ್ಮಿಸಿದ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಕೇಂದ್ರ ಸರ್ಕಾರ 5800 ರೂ. ಹಾಗೂ ರಾಜ್ಯ ಸರ್ಕಾರ 300 ರೂ. ಬೆಂಬಲ ಬೆಲೆ ಸೇರಿ ಒಟ್ಟು 6100 ಸ್ಪರ್ಧಾತ್ಮಕ ಬೆಂಬಲ ಬೆಲೆ ನೀಡುತ್ತಿದೆ. ಸರ್ಕಾರ ಆರಂಭಿಸಿದ ತೊಗರಿ ಕೇಂದ್ರದಲ್ಲಿ ರೈತರು ಮಾರಾಟ ಮಾಡಿ ಬೆಂಬಲ ಬೆಲೆಯ ಉಪಯೋಗ ಪಡೆಯಲು ಸಲಹೆ ನೀಡಿದರು.
    ಕಡಕೋಳ ಹಿರೇಮಠದ ರಾಜಗುರು ಮಾಹಾಲಿಂಗಯ್ಯ ಸ್ವಾಮಿಗಳು, ಆರ್.ಎಸ್. ಪಾಟೀಲ, ಶಿವಾನಂದ ಮೂಲಿಮನಿ, ಚಂದ್ರಶೇಖರ ಭೈರಿಪಾಟೀಲ, ಡಿ.ಎಂ. ಖಾನಾಪುರ, ನಾನಾಗೌಡ ಹಡ್ಲಗೇರಿ, ನಿಂಗನಗೌಡ ಮೂಲಿಮನಿ, ಮಲಕಣ್ಣ ಉಪ್ಪಾರ, ನಿಂಗಣ್ಣ ಕೊಂಡಗೂಳಿ, ಯಲ್ಲಪ್ಪ ಬೂದಿಹಾಳ, ಸಂಗನಗೌಡ ತೆಗ್ಗಿನಮನಿ, ತಮ್ಮಣ್ಣ ನಾಯ್ಕೋಡಿ, ಮಹಾಂತಗೌಡ ಖಾನಾಪುರ, ಸಂಗನಗೌಡ ತೆಗ್ಗಿನಮನಿ ಕಡಕೋಳ, ಅಪ್ಪಣ್ಣ ಚಾಂದಕವಟೆ, ಬಿ.ಆರ್. ನ್ಯಾಮಣ್ಣವರ, ಚನ್ನಬಸಪ್ಪ ಲಗಳಿ, ದಯಾನಂದ ಗುರುಮಠ, ಯಾಳವಾರ, ಕಡಕೋಳ, ನಾಗರಾಳ, ಡೋಣ, ನಂದಿಹಾಳ, ಸಿಂದಗೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts