More

    ಇದು ಕಾಂತಾರ ಕಂಬಳ: ಐತಿಹಾಸಿಕ ಕೆರಾಡಿ ಕಂಬಳೋತ್ಸವಕ್ಕೆ ಜನಸಾಗರ..

    ಉಡುಪಿ: ‘ಕಾಂತಾರ’ ಸಿನಿಮಾದಲ್ಲಿ ಕಂಬಳ ನಡೆದಿದ್ದ ಜಾಗದಲ್ಲೇ ಇಂದು ನೈಜ ಕಂಬಳೋತ್ಸವ ನಡೆಯುತ್ತಿದ್ದು, ಜನಸಾಗರವೇ ನೆರೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರಾಡಿಯಲ್ಲಿ ವರ್ಷಂಪ್ರತಿ ನಡೆಯುವ ಈ ಕಂಬಳ ಐತಿಹಾಸಿಕವಾಗಿದ್ದು, ಕಾಂತಾರದ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಈ ಸಲ ಹೆಚ್ಚಿನ ಗಮನ ಸೆಳೆಯುತ್ತಿದೆ.

    ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಹುಟ್ಟೂರಾದ ಕೆರಾಡಿಯಲ್ಲಿನ ಈ ಕಂಬಳ ಅವರ ಕುಟುಂಬಕ್ಕೆ ಸೇರಿದ್ದಾಗಿದ್ದು, ಇಲ್ಲಿ ಇಂದು ನಡೆಯುತ್ತಿರುವ ಕಂಬಳೋತ್ಸವ ವೀಕ್ಷಣೆ ಮಾಡಲು ಜನರು ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

    ಕೆರಾಡಿ ಬೀಡಿನ ಮನೆಯವರು ನಡೆಸಿಕೊಂಡು ಬರುತ್ತಿರುವ ಕಂಬಳ ಉತ್ಸವದಲ್ಲಿ ಈ ಸಲ 25ಕ್ಕೂ ಹೆಚ್ಚು ಜೊತೆ ಕೋಣಗಳು ಕಂಬಳದ ಓಟದಲ್ಲಿ ಭಾಗಿಯಾಗಲಿವೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ‘ಕಾಂತಾರ’ ಶೂಟಿಂಗ್ ನಡೆದಿತ್ತು. ಅದರಲ್ಲಿನ ಕಂಬಳದ ದೃಶ್ಯಕ್ಕಾಗಿ ರಿಷಬ್ ಶೆಟ್ಟಿ ಸ್ವತಃ ಕಂಬಳದ ಓಟದಲ್ಲಿ ಭಾಗಿಯಾಗಿದ್ದರು.

    ಇಂದು ಕೆರಾಡಿಯಲ್ಲಿ ಕಂಬಳೋತ್ಸವ ನಡೆಯುತ್ತಿರುವ ದಿನವೇ ವರಾಹ ರೂಪಂ ಸಂಗೀತದ ವಿಚಾರವಾಗಿಯೂ ಕಾಂತಾರಕ್ಕೆ ನ್ಯಾಯಾಲಯದಲ್ಲಿ ಜಯ ಸಿಕ್ಕಿರುವುದು ಕಾಕತಾಳೀಯವಾದರೂ, ಒಟ್ಟಾರೆ ಎರಡೆರಡು ಉತ್ಸವ ಎಂಬಂತಾಗಿದೆ.

    ‘ದೈವ ದೇವರೆಂದರೆ ತಮಾಷೆಯಾ?’; ‘ಕಾಂತಾರ’ದ ‘ವರಾಹ ರೂಪಂ’ ಗೀತೆ ರಚಿಸಿದ ಸಾಹಿತಿ ಹೀಗಂದಿದ್ದೇಕೆ?

    ಬೆಲ್ಜಿಯಂ ಬೆಡಗಿ ಜತೆ ಹಂಪಿ ಆಟೋಚಾಲಕನ ಮದ್ವೆ; 3 ವರ್ಷದ ಹಿಂದೆ ಗೈಡ್​ಗೆ ಫಿದಾ ಆಗಿದ್ದ ವಿದೇಶಿ ಯುವತಿ, ಇಂದು ಲಗ್ನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts