More

    ‘ದೈವ ದೇವರೆಂದರೆ ತಮಾಷೆಯಾ?’; ‘ಕಾಂತಾರ’ದ ‘ವರಾಹ ರೂಪಂ’ ಗೀತೆ ರಚಿಸಿದ ಸಾಹಿತಿ ಹೀಗಂದಿದ್ದೇಕೆ?

    ಬೆಂಗಳೂರು: ನಿನ್ನೆಯಷ್ಟೇ ಒಟಿಟಿಯಲ್ಲಿ ಬಿಡುಗಡೆಗೊಂಡಿದ್ದ ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಗೀತೆ ಸಿನಿಮಾದಲ್ಲಿ ಇದ್ದ ರಾಗದಲ್ಲಿ ಇರದಿದ್ದಕ್ಕೆ ಸಿನಿಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆದರೆ ಅದಾಗಿ ಒಂದೇ ದಿನಕ್ಕೆ ಅವರೆಲ್ಲ ಮತ್ತೆ ಖುಷಿ ಪಡುವಂಥ ವಾತಾವರಣ ಮೂಡಿದೆ. ಮಾತ್ರವಲ್ಲ, ‘ದೈವ ದೇವರೆಂದರೆ ತಮಾಷೆಯಾ?’ ಎಂಬ ಸಂತೋಷದ ಉದ್ಗಾರ ಕೂಡ ಕೇಳಿಬಂದಿದೆ.

    ವರಾಹ ರೂಪಂ ಗೀತೆಯಲ್ಲಿ ನಮ್ಮ ಕಾಪಿರೈಟ್ ಉಲ್ಲಂಘನೆ ಆಗಿದೆ ಎಂದು ತೈಕುಡಂ ಬ್ರಿಡ್ಜ್ ಎಂಬ ಕೇರಳದ ಮ್ಯೂಸಿಕ್ ಬ್ಯಾಂಡ್ ಸಂಸ್ಥೆ ಕೇಸು ದಾಖಲಿಸಿತ್ತು. ಇದರಿಂದ ಕಾಂತಾರ ತಂಡಕ್ಕೆ ಹಿನ್ನಡೆಯಾಗಿದ್ದು, ಅನುಮತಿ ಇಲ್ಲದೆ ವರಾಹ ರೂಪಂ ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್ ಆದೇಶ ನೀಡಿತ್ತು. ಅದೇ ಕಾರಣಕ್ಕೆ ವರಾಹ ರೂಪಂ ಗೀತೆಯನ್ನು ಯೂಟ್ಯೂಬ್ ಚಾನೆಲ್ ಸೇರಿ ಎಲ್ಲೆಡೆ ತೆಗೆಯಲಾಗಿತ್ತು. ಅಲ್ಲದೆ ನಿನ್ನೆ ಬಿಡುಗಡೆಯಾದ ಒಟಿಟಿ ಆವೃತ್ತಿಯಲ್ಲೂ ಆ ಗೀತೆಯನ್ನು ಬೇರೆಯದೇ ರಾಗದಲ್ಲಿ ಅಳವಡಿಸಲಾಗಿತ್ತು.

    ಆದರೆ ಅನುಮತಿ ಇಲ್ಲದೆ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್​ ಆದೇಶ ನೀಡಿದ್ದ ತಡೆಯಾಜ್ಞೆ ಇಂದು ತೆರವುಗೊಂಡಿದ್ದು, ‘ಕಾಂತಾರ’ ಚಿತ್ರತಂಡಕ್ಕೆ ಗೆಲುವು ಸಿಕ್ಕಂತಾಗಿದೆ. ಇದರ ಬೆನ್ನಿಗೇ ಕಾಂತಾರ ಸಿನಿಮಾಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಲಾರಂಭಿಸಿದ್ದಾರೆ.

    ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ, ರಿಷಬ್​ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದರು. ವರಾಹ ರೂಪಂ ಗೀತೆಗೆ ಕರಾವಳಿಯ ರಂಗಭೂಮಿ ಕಲಾವಿದ, ವಕೀಲರೂ ಆಗಿರುವ ಶಶಿರಾಜ್ ಕಾವೂರು ಸಾಹಿತ್ಯ ರಚಿಸಿದ್ದು, ಸಾಯಿ ವಿಘ್ನೇಶ್ ಹಾಡಿದ್ದರು.

    ಜಾಗದ ವಿವಾದ ವಿಚಾರವಾಗಿ ಕೋಲದಲ್ಲಿ ದೈವವನ್ನೇ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದಾಗ ದೈವವು, ‘ನೀನು ಕೋರ್ಟ್​ಗೆ ಹೋಗ್ತಿ, ಆದರೆ ಜಾಗದ ಇತ್ಯರ್ಥವನ್ನು ಕೋರ್ಟ್​ ಮೆಟ್ಟಿಲ ಮೇಲೆ ನಾನು ಮಾಡುತ್ತೇನೆ’ ಎಂಬ ಮಾತು ಹೇಳುವ ದೃಶ್ಯ ಕಾಂತಾರ ಸಿನಿಮಾದಲ್ಲಿದೆ. ಈಗ ನಿಜಾರ್ಥದಲ್ಲಿ ಹಾಗೆಯೇ ಆಯ್ತಾ ಎನ್ನುವಂತೆ ಅಚ್ಚರಿ ರೀತಿಯಲ್ಲಿ ನ್ಯಾಯಾಲಯದಲ್ಲಿ ಕಾಂತಾರಗೆ ಜಯ ಸಿಕ್ಕಿದೆ.

    ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿ ಸಿನಿಮಾದ ಅಭಿಮಾನಿಗಳು, ಕರಾವಳಿಗರನೇಕರು ತಮ್ಮ ಸಂತಸ ಹೇಳಿಕೊಳ್ಳುತ್ತ, ದೈವ-ದೇವರ ಕಾರ್ಣಿಕಗಳ ಕುರಿತು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವೆಂದರೆ ವರಾಹ ರೂಪಂ ಗೀತೆಯನ್ನು ರಚಿಸಿದ ಶಶಿರಾಜ್ ಕಾವೂರು ಕೂಡ ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ದೈವ ದೇವೆರ್ ಪಂಡ ಕುಸಾಲಾ?
    ಕೋರ್ಟ್ ಪೋತೆರ್. ಇತ್ಯರ್ಥ ಮಲ್ತೆರತ್ತ?
    ವರಾಹ ರೂಪಂಗೆ ಜೈ…”
    (ದೈವ ದೇವರು ಎಂದರೆ ತಮಾಷೆಯಾ?
    ಕೋರ್ಟ್​ಗೆ ಹೋಗಿದ್ರು, ಇತ್ಯರ್ಥ ಮಾಡಿದ್ರಲ್ಲ?
    ವರಾಹ ರೂಪಂಗೆ ಜೈ) ಎಂಬುದಾಗಿ ಶಶಿರಾಜ್ ತಮ್ಮ ಸಂತಸವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಕೇಸಿನ ವಿಚಾರವಾಗಿ ನ್ಯಾಯಾಲಯದಲ್ಲಿ ಶಶಿರಾಜ್ ಅವರೇ ವಾದಿಸಿದ್ದಾರೆ ಎನ್ನಲಾಗಿದೆ.

    'ದೈವ ದೇವರೆಂದರೆ ತಮಾಷೆಯಾ?'; 'ಕಾಂತಾರ'ದ 'ವರಾಹ ರೂಪಂ' ಗೀತೆ ರಚಿಸಿದ ಸಾಹಿತಿ ಹೀಗಂದಿದ್ದೇಕೆ?

    ಬೆಲ್ಜಿಯಂ ಬೆಡಗಿ ಜತೆ ಹಂಪಿ ಆಟೋಚಾಲಕನ ಮದ್ವೆ; 3 ವರ್ಷದ ಹಿಂದೆ ಗೈಡ್​ಗೆ ಫಿದಾ ಆಗಿದ್ದ ವಿದೇಶಿ ಯುವತಿ, ಇಂದು ಲಗ್ನ..

    ನಿನ್ನೆ ಸಂಭ್ರಮದಲ್ಲಿದ್ದ ಯುವತಿ ಇಂದಿಲ್ಲ; ಸಂಬಂಧಿಕರ ಸಮಾರಂಭದಲ್ಲಿ ಕುಸಿದು ಬಿದ್ದು ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts