More

    ಐತಿಹಾಸಿಕ ಕರಗಕ್ಕೆ ನಾಳೆ ಚಾಲನೆ; ದರ್ಗಾಕ್ಕೂ ತೆರಳಲಿರುವ ಕರಗ; ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಆಗಮನ?

    ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗಕ್ಕೆ ನಾಳೆ ಚಾಲನೆ ಸಿಗಲಿದ್ದು, ಏ. 6ರಂದು ಬೆಂಗಳೂರು ಕರಗ ಶಕ್ತ್ಯುತ್ಸವ ನಡೆಯಲಿದೆ. ಕರಗ ಉತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಹಾಗೂ ಸ್ಥಳೀಯ ಶಾಸಕ ಉದಯ್ ಗರುಡಾಚಾರ್ ಜತೆಯಾಗಿ ಇಂದು ಕುರಿತು ಮಾಹಿತಿ ನೀಡಿದರು.

    ದೇವಸ್ಥಾನದ ಆವರಣದಲ್ಲಿ ನಾಳೆಯಿಂದಲೇ ನಿತ್ಯ ವಿವಿಧ ಪೂಜಾ ಕೈಂಕರ್ಯಗಳು ಒಂಭತ್ತು ದಿನಗಳ ಕಾಲ ನಡೆಯಲಿವೆ. ನಾಳೆ ರಾತ್ರಿ 10 ಗಂಟೆಗೆ ದೇವಸ್ಥಾನದ ಆವರಣದಲ್ಲಿ ದ್ವಜಸ್ಥಂಬ ನೆಡುವ ಮೂಲಕ ಕರಗಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.

    ಇದನ್ನೂ ಓದಿ: ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ; 114.19 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

    ನಾಳೆ ಧ್ವಜಾರೋಹಣ ನಡೆಯಲಿದ್ದು, 9 ಬಾಗಿಲು ಪೂಜೆ ಆಗಲಿದೆ. ಏ. 4ಕ್ಕೆ ಹಸಿ ಕರಗ ಇರಲಿದ್ದು, ಏ.6ರಂದು ಶಕ್ತ್ಯುತ್ಸವ ನಡೆಯಲಿದೆ ಎಂದು ಸತೀಶ್ ತಿಳಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಮಸ್ತಾನ್ ಸಾಬ್ ದರ್ಗಾಗೆ ಕರಗ ಹೋಗಲಿದ್ದು, ಧಾರ್ಮಿಕ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಈ ಬಾರಿಯೂ ಜ್ಞಾನೇಂದ್ರ ಅವರೇ ಕರಗ ಹೊರಲಿದ್ದು, ಅವರದ್ದು ಈ ಸಲ ಹನ್ನೆರಡನೇ ಕರಗವಾಗಿದೆ. ಅದ್ಧೂರಿಯಾಗಿ ನಡೆಯಲಿರುವ ಈ ಕರಗಕ್ಕೆ ಶಿಷ್ಟಾಚಾರ ಪ್ರಕಾರ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಶ್ರೀಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರೂ ಆಗಮಿಸುವ ಭರವಸೆ ನೀಡಿದ್ದಾರೆ ಎಂದು ಕರಗ ಉತ್ಸವ ಸಮಿತಿ ಅಧ್ಯಕ್ಷ ತಿಳಿಸಿದ್ದಾರೆ.

    ಚುನಾವಣಾ ಆಯೋಗಕ್ಕೆ ವಿಶೇಷ ಮನವಿ: ಜಾರಿಯಾಗುತ್ತಾ ಹೊಸ ಸೂಚನೆ?

    ಭಾರಿ ಅನಾಹುತದಿಂದ ಪಾರಾದ ಸಿಎಂ, ಸಚಿವ ಸುಧಾಕರ್: ಸ್ವಲ್ಪ ಎಡವಟ್ಟಾಗಿದ್ದರೂ ಹೆಲಿಕಾಪ್ಟರ್ ಕಟ್ಟಡಕ್ಕೆ ಡಿಕ್ಕಿ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts