More

    ಓದು ಮತ್ತು ಕರ್ತವ್ಯದಲ್ಲಿ ಚಾಣಾಕ್ಷಮತಿ ಎಂದು ಹುತಾತ್ಮ ಯೋಧನನ್ನು ಹಾಡಿಹೊಗಳಿದ ತಂದೆ

    ನವದೆಹಲಿ: ಕರ್ನಲ್ ಬಿಕ್ಕಮಲ್ಲಾ ಸಂತೋಷ್ ಬಾಬು (37) ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾ-ಭಾರತ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಭಾರತದ 20 ಯೋಧರಲ್ಲಿ ಒಬ್ಬರಾಗಿದ್ದಾರೆ.
    ಭಾರತೀಯ ಸೇನೆ ಸೇರಬೇಕೆಂಬುದು ಅವರ ಬಾಲ್ಯದ ಕನಸಾಗಿತ್ತು. ಆಂಧ್ರಪ್ರದೇಶದ ವಿಜಿಯಾನಗರಂ ಜಿಲ್ಲೆಯಲ್ಲಿ ರಕ್ಷಣಾ ಸಚಿವಾಲಯದ ಸೈನಿಕ ಶಾಲೆಯಡಿ 12 ನೇ ತರಗತಿ ಶಿಕ್ಷಣ ಪೂರೈಸಿದ್ದರು.

    ಇದನ್ನೂ ಓದಿ: ಮದುವೆಗಾಗಿ ಅಣ್ಣನ ಕಾಯತ್ತಿದ್ದಾಕೆಗೆ ಸಿಕ್ಕಿದ್ದು ಸಾವಿನ ಸುದ್ದಿ!

    ನಂತರ ಅವರು ಪುಣೆಯ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮತ್ತು ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ) ಗೆ ಸೇರಿದರು.
    ತೆಲಂಗಾಣದ ಸೂರ್ಯಪೇಟೆ ನಿವಾಸಿಯಾಗಿದ್ದ ಅವರು 2004 ರಲ್ಲಿ 16ನೇ ಬಿಹಾರ ರೆಜಿಮೆಂಟ್‌ಗೆ ನಿಯೋಜಿಸಲ್ಪಟ್ಟರು ಮತ್ತು ಮೊದಲ ಬಾರಿಗೆ ಜಮ್ಮುಗೆ ನೇಮಕಗೊಂಡರು. ಅಂದಿನಿಂದ ಅವರು ವಿವಿಧ ಪ್ರದೇಶಗಳ ಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
    ಅವರ ತಂದೆ ಬಿ ಉಪೇಂದರ್ ತಾವು ಸೇನೆಗೆ ಸೇರಬೇಕೆಂಬ ಗುರಿ ಇಟ್ಟುಕೊಂಡಿದ್ದರಂತೆ, ದುರದೃಷ್ಟವಶಾತ್ ಅದು ಈಡೇರದಿದ್ದಾಗ ಹತಾಶರಾಗದೆ ತಮ್ಮ ಮಗನನ್ನು ಸೇನೆಗೆ ಸೇರಿಸುವ ಗುರಿ ಇಟ್ಟುಕೊಂಡಿದ್ದರಂತೆ.

    ಇದನ್ನೂ ಓದಿ:  ಚೀನಾದ ಕಮಾಂಡಿಂಗ್​ ಅಧಿಕಾರಿಯನ್ನೂ ಹತ್ಯೆ ಮಾಡಿದೆ ಭಾರತ ಸೇನೆ

    “ನಾನು ಸೈನ್ಯಕ್ಕೆ ಸೇರಬೇಕೆಂದು ವಿದ್ಯಾರ್ಥಿದೆಸೆಯಲ್ಲೇ ಕನಸು ಕಂಡಿದ್ದೆ. ಆದರೆ ಕುಟುಂಬದ ಪರಿಸ್ಥಿತಿ ನಾನು ಸೇನೆಗೆ ಸೇರಲು ಬಿಡಲಿಲ್ಲ. ನನ್ನ ಕನಸುಗಳನ್ನು ನನ್ನ ಮಗನ ಮೂಲಕ ಈಡೇರಿಸಿಕೊಂಡೆ”ಎಂದು 63 ವರ್ಷದ ಉಪೇಂದರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

    “ಅವನು ನಮ್ಮನ್ನು ಈ ರೀತಿ ತೊರೆಯುತ್ತಾನೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಆದರೆ ಆತ ದೇಶಕ್ಕಾಗಿ ಪ್ರಾಣವನ್ನು ತ್ಯಜಿಸಿದ್ದು ನನಗೆ ಎಂದೆಂದಿಗೂ ಹೆಮ್ಮೆ ಇದೆ, ”ಎಂದು ಅವರು ಹೇಳಿದರು.
    ಫೆಬ್ರವರಿಯಲ್ಲಿ ಕರ್ನಲ್ ಆಗಿ ಬಡ್ತಿ ಪಡೆದಿದ್ದ ತಮ್ಮ ಮಗನನ್ನು “ಅಧ್ಯಯನ ಮತ್ತು ಕರ್ತವ್ಯಗಳಲ್ಲಿ ಅದ್ಭುತ ವ್ಯಕ್ತಿ” ಎಂದು ಉಪೇಂದರ್ ಬಣ್ಣಿಸಿದರು.
    ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ನನ್ನ ಮಗನ ಬಗ್ಗೆ ಹೆಮ್ಮೆ ಪಡುತ್ತಿದ್ದೇನೆ”ಎಂದು ಅವರ ತಾಯಿ ಹೇಳಿದ್ದಾರೆ. ಕರ್ನಲ್ ಅವರು ತಾಯಿ ಮಂಜುಳಾ, ಪತ್ನಿ ಸಂತೋಶಿ, ಒಂಬತ್ತು ವರ್ಷದ ಮಗಳು ಅಭಿಜ್ಞಾ ಮತ್ತು ನಾಲ್ಕು ವರ್ಷದ ಮಗ ಅನಿರುದ್ಧ್ ಅವರನ್ನು ಅಗಲಿದ್ದಾರೆ. ಅವರ ಪತ್ನಿ ಮತ್ತು ಮಕ್ಕಳು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

    ಹೊಸ ಮನೆ ನೋಡುವ ಮುನ್ನವೇ ಹುತಾತ್ಮನಾದ! ತಬ್ಬಲಿಯಾದ ಕಂದಮ್ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts