More

    ವಿವಿ ಸಾಗರದಿಂದ ವೇದಾವತಿ ನದಿಗೆ ಮತ್ತೆ ನೀರು

    ಹಿರಿಯೂರು: ವಿವಿ ಸಾಗರದಿಂದ ವೇದಾವತಿ ನದಿ ಮೂಲಕ ಚಳ್ಳಕೆರೆ ತಾಲೂಕಿಗೆ ಮತ್ತೆ 0.25 ಟಿಎಂಸಿ ಅಡಿ ನೀರು ಹರಿಸಲು ನೀರಾವರಿ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.

    ಹೆಚ್ಚುವರಿ ನೀರು ಹರಿಸಲು ಅವಕಾಶ ನೀಡುವುದಿಲ್ಲ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನಿನ್ನೆಯಷ್ಟೇ ರೈತರೊಂದಿಗೆ ವಿವಿ ಸಾಗರಕ್ಕೆ ಮುತ್ತಿಗೆ ಹಾಕಿ ಗುಟುರು ಹಾಕಿದ್ದರು.

    ತಕ್ಷಣ ಎಚ್ಚೆತ್ತ ಚಳ್ಳಕೆರೆ ಶಾಸಕ ರಘುಮೂರ್ತಿ,ಬೆಂಗಳೂರಿಗೆ ತೆರಳಿ ಸಚಿವ ಶ್ರೀ ರಾಮುಲು ಮೂಲಕ ಸಿಎಂ ಮೇಲೆ ಒತ್ತಡ ಹಾಕಿ ನೀರಾವರಿ ಸಚಿವರಿಗೆ ಪರಿಸ್ಥಿತಿ ಮನವರಿಕೆ ಮಾಡಿ ಪರಿಷ್ಕೃತ ಆದೇಶ ಹೊರಡಿಸಲು ಯಶಸ್ವಿಯಾಗಿದ್ದಾರೆ. ಇದು ಶಾಸಕಿ ಕೆ.ಪೂರ್ಣಿಮಾಗೆ ಹಿನ್ನಡೆಯಾದಂತಿದೆ.

    ಏ.23-28ರ ವರೆಗೆ 0.25 ಟಿಎಂಸಿ ಅಡಿ ನೀರು ಬಿಡಲಾಗಿದೆ. ಮಂಗಳವಾರ ಮಧ್ಯಾಹ್ನ 1.30 ಕ್ಕೆ ಸ್ಥಗಿತಗೊಳಿಸಲಾಗಿತ್ತು. (ನೀರಾವರಿ ಸಚಿವರ ಮೌಖಿಕ ಆದೇಶದಂತೆ ಮತ್ತೆ ನೀರು ಹರಿ ಬಿಟ್ಟಿದ್ದರಿಂದ ಆಕ್ರೋಶಗೊಂಡ ಶಾಸಕಿ ಪೂರ್ಣಿಮಾ ಸಂಜೆ ವೇಳೆಗೆ ನೀರು ಸ್ಥಗಿತಗೊಳಿಸಿದ್ದರು.)

    ಗಡಿಯಲ್ಲಿ ಅಳತೆ: ವಿವಿ ಸಾಗರ ಜಲಾಶಯದ ನೀರು ವೇದಾವತಿ ನದಿ ಪಾತ್ರದ ಮೂಲಕ 60 ಕಿ.ಮೀ ಕ್ರಮಿಸಿ ಶಿಡ್ಲಯ್ಯನಕೋಟೆ ಬ್ಯಾರೇಜ್ ತಲುಪತ್ತದೆ. ಇಲ್ಲಿ ಗೇಜ್ ಅಳವಡಿಸಿ 0.25 ಟಿಎಂಸಿ ಅಡಿ ನೀರನ್ನು ಚಳ್ಳಕೆರೆಗೆ ಹರಿಸುವಂತೆ ಪರಿಷ್ಕೃತ ಆದೇಶದಲ್ಲಿ ಸೂಚಿಸಲಾಗಿದೆ.

    ಧರ್ಮಪುರ ಹೋಬಳಿ ರೈತರಿಗೂ ಅನುಕೂಲ: ಶಿಡ್ಲಯ್ಯನಕೋಟೆ ಬ್ಯಾರೇಜ್‌ನಿಂದ ಚಳ್ಳಕೆರೆಗೆ ನೀರು ಹರಿಸಿದರೆ ಧರ್ಮಪುರ ಹೋಬಳಿಯ 15-20 ಹಳ್ಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಿ ಕೃಷಿ, ಜನ, ಜಾನುವಾರಿಗೆ ಅನುಕೂಲವಾಗಲಿದೆ.

    ರೈತ ಮುಖಂಡ ಹಾರ್ಡ್‌ವೇರ್ ಶಿವಣ್ಣ ಹೇಳಿಕೆ: ಅಕ್ಕ ಪಕ್ಕದ ತಾಲೂಕಿನ ಜನಪ್ರತಿನಿಧಿಗಳಿಗೆ ನೀರಾವರಿ ವಿಚಾರದಲ್ಲಿರುವ ಬದ್ಧತೆ ನಮ್ಮ ರಾಜಕಾರಣಿಗಳಿಗಿಲ್ಲ. ಧರ್ಮಪುರ ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಆಗ್ರಹಿಸಿ ಹೋಬಳಿಯ ರೈತರ, ಜನರ ಹೋರಾಟ ಶತಮಾನ ಕಳೆದರೂ ಫಲಿತಾಂಶ ಮಾತ್ರ ಶೂನ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts