More

    ಕರೊನಾ ತಡೆಗೆ ಏಕತೆಯ ಮಂತ್ರವೇ ಮದ್ದು

    ಹಿರಿಯೂರು: ಪ್ರತಿಯೊಬ್ಬ ನಾಗರಿಕನೂ ಸರ್ಕಾರದ ಆದೇಶ ಪಾಲಿಸಿ ಏಕತೆಯ ಮಂತ್ರ ಜಪಿಸಿದಾಗ ಮಾತ್ರ ಕರೊನಾ ಯುದ್ಧ ಗೆಲ್ಲಲು ಸಾಧ್ಯ ಎಂದು ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ ಹೇಳಿದರು.

    ತಾಲೂಕಿನ ವಿವಿ ಪುರ, ಮಾರಿಕಣಿವೆಯಲ್ಲಿ ಬುಧವಾರ ಕರೊನಾ ವೈರಸ್ ಹರಡದಂತೆ ಕ್ಲೋರಿನೇಷನ್ ರಾಸಾಯನಿಕ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿದರು.

    ಗ್ರಾಪಂ ಸದಸ್ಯ ಎ.ಉಮೇಶ್ ಮಾತನಾಡಿ, ನಿರ್ಲಕ್ಷಿೃಸಿದರೆ ಸಾವು ಖಚಿತ: ಸಾಮಾಜಿಕ ಅಂತರ ಹಾಗೂ ವೈಯಕ್ತಿಕ ಸ್ವಚ್ಛತೆಯನ್ನು ಪ್ರಾಮಾಣಿಕವಾಗಿ ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಸಾವನ್ನು ತಾವುಗಳೇ ಆಹ್ವಾನಿಸಿಕೊಳ್ಳುತ್ತೀರಾ ಎಂಬ ಎಚ್ಚರಿಕೆ ಇರಲಿ. ಗ್ರಾಮ ಪಂಚಾಯಿತಿ ಸೂಚನೆ, ಕಾರ್ಯಗಳಿಗೆ ಜನತೆ ಸಹಕಾರ ನೀಡಬೇಕು. ಈ ಮೂಲಕ ಕರೊನಾ ಹರಡದಂತೆ ಜಾಗ್ರತೆ ವಹಿಸಬೇಕು ಎಂದು

    ತಾಪಂ ಇಒ ಹನುಮಂತಪ್ಪ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸ್ವಚ್ಛತೆ, ಜನರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ರೇಖಾ ನಾಗೇಶ್, ಗುರುಪ್ರಸಾದ್, ಶಾಂತಕುಮಾರ್, ಮೂಡಲಗಿರಿ, ಪಾತಪ್ಪ, ತಾಪಂ ಸದಸ್ಯ ಮುಕುಂದ್, ಪಿಡಿಒ ಹನ್ಸೀರಾಬಾನು, ಪ್ರದೀಪ್, ಮಹಾಂತೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts