More

    ಮುಂದಿನ ವಾರ ನಿಗಮಗಳಿಗೆ ನೇಮಕ

    ಬೆಂಗಳೂರು: ಬಿಜೆಪಿಯಲ್ಲಿ ಅತೃಪ್ತಿ ಹೆಚ್ಚಬಹುದೆಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ನಿಗಮ ಮತ್ತು ಮಂಡಳಿಗಳಿಗೆ ನೇಮಕಾತಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ದೇಶಿಸಿದ್ದಾರೆ. ಅತೃಪ್ತ ಶಾಸಕರು ಸಭೆ ನಡೆಸಬಹುದು, ಇದರಿಂದ ಸರ್ಕಾರಕ್ಕೆ ಮುಜುಗರವಾಗಬಹುದು ಎಂಬುದು ಯಡಿಯೂರಪ್ಪ ಅವರ ಗಮನಕ್ಕೆ ಇದ್ದೇ ಇತ್ತು. ಆದ್ದರಿಂದಲೇ ಅವರು ಕಳೆದ ವಾರವೇ ತಮ್ಮ ಆಪ್ತರೊಂದಿಗೆ ನಿಗಮ-ಮಂಡಳಿಗಳ ನೇಮಕದ ಬಗ್ಗೆ ಚರ್ಚೆ ನಡೆಸಿದ್ದರು.

    ಇದನ್ನೂ ಓದಿ: ಕರಾಚಿಯಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ ಬ್ಯಾಗ್​ನಲ್ಲಿ ಸಿಕ್ಕ ವಸ್ತುವನ್ನು ನೋಡಿ ತಬ್ಬಿಬ್ಬಾದ ರಕ್ಷಣಾ ಸಿಬ್ಬಂದಿ

    ಮೇ 31ಕ್ಕೆ ಲಾಕ್​ಡೌನ್ ಮುಕ್ತಾಯ ಆಗಲಿದ್ದು, ಜೂನ್ ಮೊದಲ ವಾರದಲ್ಲಿ ನಿಗಮ-ಮಂಡಳಿಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ನಿರ್ಧರಿಸಿದ್ದಾರೆ ಎಂದು ಅವರ ಆಪ್ತಮೂಲಗಳು ಖಚಿತಪಡಿಸಿವೆ. ಪ್ರಮುಖ ನಿಗಮಗಳಿಗೆ ಅತೃಪ್ತ ಶಾಸಕರಿಗೆ ಮೊದಲ ಆದ್ಯತೆ ನೀಡುವುದು, ಇನ್ನುಳಿದ ನಿಗಮ-ಮಂಡಳಿಗಳಿಗೆ ಪಕ್ಷದ ಮುಖಂಡರಿಗೆ ಪ್ರದೇಶವಾರು ನೇಮಕ ಮಾಡುವುದು ಎಂಬುದು ಚರ್ಚೆಯಾಗಿದೆ. ನಿರ್ದೇಶಕರನ್ನು ಜಿಲ್ಲಾ-ತಾಲೂಕು ಮಟ್ಟದಲ್ಲಿ ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಕಾರ್ಯಕರ್ತರು ಹಾಗೂ ಮುಖಂಡರನ್ನು ನೇಮಿಸುವ ಬಗ್ಗೆ ಚರ್ಚೆಯಾಗಿದೆ ಎನ್ನಲಾಗುತ್ತಿದೆ. ಕನಿಷ್ಠ 25 ಶಾಸಕರಿಗೆ ನಿಗಮ-ಮಂಡಳಿಗಳಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನದೊಂದಿಗೆ ನೀಡಲು ಚರ್ಚೆಯಾಗಿದೆ. ವಿಧಾನಪರಿಷತ್​ಗೆ ವಿಧಾನಸಭೆ ಕ್ಷೇತ್ರದಿಂದ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಸಿಗುವ 4 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆಗೂ ಮುಂದಿನ ವಾರ ಸಭೆ ನಡೆಸಲು ನಿರ್ಧರಿಸಲಾಗಿದೆ. ಅದೇ ವೇಳೆ 5 ನಾಮನಿರ್ದೇಶನ ಸಹ ಅಂತಿಮ ಮಾಡಿ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸುವ ಬಗ್ಗೆ ಸಿಎಂ ಆಪ್ತರ ಬಳಿ ರ್ಚಚಿಸಿದ್ದಾರೆ.

    ಇದನ್ನೂ ಓದಿ: ಬಂದಷ್ಟೇ ವೇಗದಲ್ಲಿ ಮಿಂಚಿ ಮರೆಯಾದ ತಾರೆ ನೀಲ್ ಜಾನ್ಸನ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts