More

    ಬಂತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧೀಯ ಗಿಡಮೂಲಿಕೆಯ ಚಹಾ!

    ಪಾಲಂಪುರ್ (ಹಿಮಾಚಲಪ್ರದೇಶ): ಸಮೀಪದ ಕಾಂಗ್ರಾ ಗ್ರಾಮದಲ್ಲಿರುವ ಸರ್ಕಾರಿ ಸ್ವಾಮ್ಯದ ಚೌಧರಿ ಶರವಣಕುಮಾರ್ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಈಗಿನ ಕರೊನಾ ಹಾವಳಿಯ ಕಾಲದಲ್ಲಿ ಮನುಷ್ಯರ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಗಿಡಮೂಲಿಕೆಗಳ ಚಹಾ ಅಭಿವೃದ್ಧಿಪಡಿಸಿದ್ದಾರೆ.

    ಇದರಲ್ಲಿ ವೈಜ್ಞಾನಿಕವಾಗಿ ಪ್ರಯೋಜನಕಾರಿ ಎಂದು ಸಾಬೀತಾಗಿರುವ ಆ್ಯಂಟಿ ಆಕ್ಸಿಡೆಂಟ್ ಗುಣಸ್ವಭಾವಗಳಿದ್ದು ಇದನ್ನು ಸೇವಿಸಿದರೆ ಫಂಗಸ್, ಬ್ಯಾಕ್ಟೀರಿಯಾ ಮತ್ತು ವೈರಲ್ ರೋಗಗಳಿಂದ ರಕ್ಷಣೆ ನೀಡುತ್ತದೆ ಎಂದು ಕುಲಪತಿ ಅಶೋಕ್‌ಕುಮಾರ ಸರಿಯಾಲ್ ತಿಳಿಸಿದ್ದಾರೆ. ಇದನ್ನೂ ಓದಿ: VIDEO| ರಸ್ತೆ ಅಗಲೀಕರಣಕ್ಕೆ ಅಡ್ಡಿಪಡಿಸಿದಲ್ಲದೇ ಜೆಸಿಬಿ ಚಾಲಕನ ಮೇಲೆ ಹಲ್ಲೆ ಮಾಡಿದ ಮಾಜಿ ಶಾಸಕ

    ವಿಶ್ವವಿದ್ಯಾಲಯದ ಸುಪರ್ದಿಯಲ್ಲಿ 44 ಹೆಕ್ಟೇರ್‌ನಷ್ಟು ಒಟ್ಟು ವಿಸ್ತೀರ್ಣವಿರುವ ಮೂರು ಚಹಾ ತೋಟಗಳಿವೆ. ಚಹಾ ಸಂಸ್ಕರಣೆ ಘಟಕವೂ ವಿವಿಯಲ್ಲಿದೆ. ಅಲ್ಲಿ ಪ್ರತಿ ವರ್ಷ 40 ಸಾವಿರ ಕಿಲೋದಷ್ಟು ಹಸಿರು ಮತ್ತು ಕಪ್ಪು ಬಣ್ಣದ ಚಹಾಪುಡಿ ಉತ್ಪಾದಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಔಷಧೀಯ ಗುಣಗಳುಳ್ಳ ಗಿಡಮೂಲಿಕೆ ಆಧರಿತ ಆರ್ಗ್ಯಾನಿಕ್ ಚಹಾಪುಡಿ ಉತ್ಪಾದಿಸುತ್ತಿದ್ದೇವೆ ಎಂದು ವಿವಿಯ ವಿಭಾಗ ಮುಖ್ಯಸ್ಥ ಜೈದೇವ್ ಶರ್ಮಾ ಹೇಳಿದರು.

    ಗ್ರೀನ್ ಟೀ ವಿತ್ ತುಳಸಿ, ಗ್ರೀನ್ ಟೀ ವಿತ್ ಲೆಮನ್ ಹನೀ, ಟೀ ವಿತ್ ಮಿಂಟ್, ತುಳಸಿ ಮತ್ತು ರೋಸ್… ಹೀಗೆ ಹಲವು ವೈವಿಧ್ಯಗಳಲ್ಲಿ ಈ ಚಹಾಪುಡಿ ಲಭ್ಯವಿದೆ. ಸಾಂಪ್ರದಾಯಿಕ ಬ್ಲಾೃಕ್ ಟೀ (ರೋಸ್ ಫ್ಲೇವರ್) ಕೂಡ ಇದೆ. 25 ಟೀ ಬ್ಯಾಗ್‌ಗಳಿರುವ ಪೊಟ್ಟಣಕ್ಕೆ 225 ರೂ. ದರ ನಿಗದಿಪಡಿಸಲಾಗಿದೆ. ಧೌಲಾಧರ್ ಹಿಮ್ ಪಾಲಂ ಎಂಬ ಬ್ರಾೃಂಡ್ ನೇಮ್ ಅಡಿ ಕ್ಯಾಂಪಸ್‌ನಲ್ಲೇ ಕೌಂಟರ್ ತೆರೆದು ಮಾರಾಟ ಮಾಡಲಾಗುತ್ತಿದೆ. ಬೇಡಿಕೆ ಆಧರಿಸಿ ಇದನ್ನು ಮಾರುಕಟ್ಟೆಗೂ ಬಿಡುಗಡೆ ಮಾಡಲಾಗುವುದು ಎಂದರು.

    ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿಯೇ ಕಾಂಗ್ರಾ ಕಣಿವೆಯ ಪಾಲಂಪುರ ಸುತ್ತಮುತ್ತ ಚಹಾ ಬೆಳೆಯಲು ಆರಂಭಿಸಲಾಯಿತು. 1849ರಲ್ಲಿ ಬ್ರಿಟಿಷರು ಮೊದಲ ಬಾರಿಗೆ ಕ್ಯಾಮೆಲಿಯಾ ಟೀ ಬೆಳೆದರು. ಅದು ಕಾಂಗ್ರಾ ಟೀ ಎಂದೇ ಪ್ರಸಿದ್ಧವಾಯಿತು. 1886ರಲ್ಲಿ ಲಂಡನ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಚಿನ್ನದ ಪದಕ ಕೂಡ ಪಡೆಯಿತು. ತದನಂತರ ಸ್ಥಳೀಯರೂ ಇಲ್ಲಿ ಚಹಾ ಬೆಳೆಯಲು ಆರಂಭಿಸಿದರು. ಇತ್ತೀಚಿನ ಮಾಹಿತಿಯಂತೆ ಇಲ್ಲಿ 4 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಔಷಧೀಯ ಗುಣವುಳ್ಳ ಚಹಾ ಬೆಳೆಯಲಾಗುತ್ತಿದೆ.

    ಭಾರತ-ಅಮೆರಿಕ ಆಯುರ್ವೇದ ವೈದ್ಯರಿಂದ ಜಂಟಿಯಾಗಿ ಕೋವಿಡ್​-19 ಔಷಧ ಪರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts