More

    VIDEOS| ಹಿಮಾಚಲ ಪ್ರದೇಶದಲ್ಲಿ ವರುಣನ ಅಬ್ಬರ: ಪ್ರವಾಹದ ಭೀಕರ ದೃಶ್ಯಗಳು ಇಲ್ಲಿವೆ….

    ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಹಾ ಮಳೆಗೆ ಪ್ರವಾಹಗಳು ಮತ್ತು ಭೂಕುಸಿತಗಳು ಸಂಭವಿಸುತ್ತಿವೆ. ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ರಸ್ತೆಗಳು ಬ್ಲಾಕ್​ ಆಗಿವೆ ಮತ್ತು ಸೇತುವೆಗಳು ಕುಸಿಯುತ್ತಿವೆ.

    ಪ್ರಾಕೃತಿಕ ವಿಕೋಪಕ್ಕೆ ಹಿಮಾಚಲ ಪ್ರದೇಶದಲ್ಲಿ ಕಳೆದ 48 ಗಂಟೆಗಳಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಕೆಲವೆಡೆ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಸುಮಾರು 3 ಸಾವಿರದಿಂದ 4 ಸಾವಿರ ಕೋಟಿ ಮೌಲ್ಯದ ಮೂಲಸೌಕರ್ಯ ವರುಣನ ಅಬ್ಬರಕ್ಕೆ ನಷ್ಟವಾಗಿದೆ. ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರನ್ನು ನಿದ್ದೆಗೆಡಿಸುವಂತೆ ಮಾಡಿದೆ.

    ಹಿಮಾಚಲ ಪ್ರದೇಶದಲ್ಲಿ ಪ್ರಕೃತಿಯ ರೌದ್ರಾವತರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಭಾರೀ ಮಳೆಗೆ ಉಂಟಾಗಿರುವ ಪ್ರವಾಹದ ವೇಗ ಎಷ್ಟಿದೆ ಎಂದರೆ ತನ್ನ ಹಾದಿಗೆ ಎದುರಾಗುವ ಎಲ್ಲವನ್ನು ತನ್ನ ಒಡಲಿಗೆ ಸೆಳೆದುಕೊಳ್ಳುತ್ತಿದೆ. ಗುರುದ್ವಾರದ ಶ್ರೀ ಮಣಿಕರಣ್ ಸಾಹಿಬ್ ಮತ್ತು ಶಿವ ಮಂದಿರವನ್ನು ಸಂಪರ್ಕಿಸುವ ಸೇತುವೆಯು ಪಾರ್ವತಿ ನದಿಯ ಭಾರೀ ಪ್ರವಾಹದಿಂದಾಗಿ ಹಾನಿಯಾಗಿರುವುದನ್ನು ವೈರಲ್ ವೀಡಿಯೊದಲ್ಲಿ ಕಾಣಬಹುದು.

    ಇದನ್ನೂ ಓದಿ: ಐವರು ಮೆಕ್ಸಿಕನ್ನರು ಸೇರಿ 6 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್​ ಮೌಂಟ್​ ಎವೆರೆಸ್ಟ್ ಬಳಿ ಪತನ

    ಮತ್ತೊಂದು ದೃಶ್ಯವು ಮನಾಲಿಯಲ್ಲಿ ಭಾರೀ ನೀರಿನ ಹರಿವಿನಿಂದಾಗಿ ಹೋಟೆಲ್ ಕಟ್ಟಡವೊಂದು ಕುಸಿಯುತ್ತಿರುವುದನ್ನು ತೋರಿಸುತ್ತದೆ.

    ಹಿಮಾಚಲ ಪ್ರದೇಶದ ಸೋಲನ್​ ಜಿಲ್ಲೆಯಲ್ಲಿರುವ ಚರನಿಯಾ ಸೇತುವೆ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿರುವ ದೃಶ್ಯವಿದೆ.

    ಕುಲುವಿನ ಮತ್ತೊಂದು ವಿಡಿಯೋದಲ್ಲಿ ಬಿಯಾಸ್ ನದಿಯಲ್ಲಿ ಉಂಟಾಗಿರುವ ಪ್ರವಾಹದ ನೀರಿನಲ್ಲಿ ಟ್ರಕ್ ಒಂದು ಆಟಿಕೆಯ ಸಾಮಾನಿನಂತೆ ಕೊಚ್ಚಿಕೊಂಡುವ ಹೋಗುತ್ತಿರುವುದನ್ನು ಕಾಣಬಹುದು.

    ಪ್ರವಾಹದ ನೀರಿನ ಕೊರೆತದಿಂದಾಗಿ ರಸ್ತೆಯ ಬದಿ ಕುಸಿದು, ಅರ್ಧ ರಸ್ತೆ ನೀರಿಗೆ ಆಹುತಿಯಾಗಿರುವುದನ್ನು ಕಾಣಬಹುದು.

    ಮಂಡಿ ಜಿಲ್ಲೆಯಲ್ಲಿ ಬಿಯಾಸ್​ ನದಿಯ ದಂಡೆಯಲ್ಲಿರುವ ಪ್ರಖ್ಯಾತ ಪಂಚವಕ್ತ್ರ ಶಿವ ದೇವಾಲಯ ಪ್ರವಾಹದಿಂದ ಭಾಗಶಃ ಮುಳುಗಡೆಯಾಗಿರುವುದನ್ನು ಕಾಣಬಹುದು.

    ಇದನ್ನೂ ಓದಿ: ತಮಿಳುನಾಡಿನ ಸೌಂದರ್ಯವನ್ನು ಅನ್ವೇಷಿಸಿದ ಬಾಹುಬಲಿ ನಿರ್ದೇಶಕ; ಟ್ರಿಪ್​​ ವಿಡಿಯೋ ಹಂಚಿಕೊಂಡ ರಾಜಮೌಳಿ

    ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹಿಮಾಚಲ ಪ್ರದೇಶದ ಅನೇಕ ಜಿಲ್ಲೆಗಳಿಗೆ ರೆಡ್​ ಮತ್ತು ಆರೆಂಜ್​ ಅಲರ್ಟ್​ ನೀಡಿದೆ. ಮುಂದಿನ 24 ಗಂಟೆಗಳು ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಸೋಲನ್, ಶಿಮ್ಲಾ, ಸಿರ್ಮೌರ್, ಕುಲು, ಮಂಡಿ, ಕಿನ್ನೌರ್ ಮತ್ತು ಲಾಹೌಲ್‌ನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಉನಾ, ಹಮೀರ್‌ಪುರ, ಕಾಂಗ್ರಾ ಮತ್ತು ಚಂಬಾದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಮುಂದಿನ 24 ಗಂಟೆಗಳ ಕಾಲ ಮಂಡಿ, ಕಿನ್ನೌರ್ ಮತ್ತು ಲಾಹೌಲ್-ಸ್ಪಿಟಿಗೆ ಹಠಾತ್ ಪ್ರವಾಹದ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಐಎಂಡಿ ವಿಜ್ಞಾನಿ ಸಂದೀಪ್ ಕುಮಾರ್ ಶರ್ಮಾ ಸೋಮವಾರ ಹೇಳಿದ್ದಾರೆ. (ಏಜೆನ್ಸೀಸ್​)

    ವರುಣನ ಅಬ್ಬರಕ್ಕೆ ಅಪಾಯ ಮಟ್ಟ ಮೀರಿದ ಯುಮುನಾ ನದಿ: ರಾಷ್ಟ್ರ ರಾಜಧಾನಿಗೆ ಪ್ರವಾಹ ಭೀತಿ

    ಬದಲಾಯಿತು ಪಾಕ್​ ಮಹಿಳೆಯ ಜೀವನ ಶೈಲಿ: ಮಾಂಸಾಹಾರಿ ಸೀಮಾ ಈಗ ಸಸ್ಯಾಹಾರಿ, ನಿತ್ಯವೂ ದೇವರ ಸೇವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts