More

    ಹಿಮಾಚಲ ಪ್ರದೇಶ: ಮನೆಯಲ್ಲಿ ಏಕೈಕ ಹೆಣ್ಣು ಮಗುವಿರುವ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ರೂ. ಪ್ರೋತ್ಸಾಹಧನ

    ಭ್ರೂಣ ಹತ್ಯೆ ಪಿಡುಗನ್ನು ನಿರ್ಮೂಲ ಮಾಡುವ ನಿಟ್ಟಿನಲ್ಲಿ, ಹಿಮಾಚಲ ಪ್ರದೇಶದ ಸರ್ಕಾರವು ಏಕೈಕ ಹೆಣ್ಣು ಮಗುವಿನ ಪೋಷಕರಿಗೆ 2 ಲಕ್ಷ ರೂ ಹಣ ನೀಡೋಕೆ ಮುಂದಾಗಿದೆ.


    ಇಂದಿರಾಗಾಂಧಿ ಬಾಲಿಕಾ ಸುರಕ್ಷಾ ಯೋಜನೆಯಡಿ ಈಗಿರುವ 35,000 ರೂ.ಗಳಿಂದ 2 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿ ಸುಖ್​​ವೇಂದರ್​ ಸಿಂಗ್​​ ಹೇಳಿದ್ದಾರೆ. ಶಿಮ್ಲಾದಲ್ಲಿ ನಡೆದ ಪ್ರೀ-ಕಾನ್ಸೆಪ್ಶನ್ ಮತ್ತು ಪ್ರಿ-ನೇಟಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ಸ್ ಆಕ್ಟ್, 1994 ರ ಎರಡು ದಿನಗಳ ಕಾರ್ಯಾಗಾರದ ನಂತರ ಈ ಘೋಷಣೆ ಮಾಡಿದ್ದಾರೆ.


    ಹಿಮಾಚಲ ಪ್ರದೇಶದ ಚಂಬಾ, ಶಿಮ್ಲಾ ಮತ್ತು ಮಂಡಿ ಜಿಲ್ಲೆಗಳು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಹೆಣ್ಣು ಮಕ್ಕಳನ್ನು ಹೆಚ್ಚು ಜನನ ಹೊಂದಿದ್ದು, ಅಲ್ಲಿನ ಪ್ರದೇಶದ ಜನರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿದೆ.


    ಕೇವಲ ಒಬ್ಬ ಹೆಣ್ಣು ಮಗಳನ್ನು ಹೊಂದಿರುವ ಪೋಷಕರಿಗೆ ಈಗ 2 ಲಕ್ಷ ರೂ ಮತ್ತು ಇಬ್ಬರು ಹೆಣ್ಣುಮಕ್ಕಳ ನಂತರ ಇನ್ನೊಂದು ಮಗುವನ್ನು ಬೇಡವೆಂದು ನಿರ್ಧರಿಸುವವರಿಗೆ 1 ಲಕ್ಷ ರೂ ನೀಡಲಾಗುವುದೆಂದು ಅಲ್ಲಿನ ಮುಖ್ಯಮಂತ್ರಿ ತಿಳಿಸಿದ್ದಾರೆ.


    ರಾಜ್ಯದಲ್ಲಿ ಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಸುಖ್​​ವೇಂದರ್​ ಸಿಂಗ್​​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts