More

    ಜಿಲ್ಲಾ ಹೆದ್ದಾರಿಯಲ್ಲಿ ನಿಲ್ಲುವ ಕೊಳಚೆ ನೀರು – ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ

    ಕನಕಗಿರಿ: ಸುಳೇಕಲ್ ಗ್ರಾಪಂ ವ್ಯಾಪ್ತಿಯ ಕಲಕೇರಿಯಲ್ಲಿ ಜೀರಾಳ ಗ್ರಾಮಕ್ಕೆ ಸಂಪರ್ಕಿಸುವ ಜಿಲ್ಲಾ ಹೆದ್ದಾರಿ ರಸ್ತೆ ಚರಂಡಿ ನೀರು ನಿಲ್ಲುತ್ತಿದ್ದು, ವಾಹನ ಸವಾರರು ಹಾಗೂ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ.

    ರಸ್ತೆಯಲ್ಲಿ ದೊಡ್ಡ ಗುಂಡಿಗಳು ನಿರ್ಮಾಣ

    ಗ್ರಾಮದ ನಾನಾ ಓಣಿಗಳಿಂದ ಬರುವ ಕೊಳಚೆ ಹರಿಯಲು ಸಮರ್ಪಕ ಚರಂಡಿ ಇಲ್ಲವಾದ್ದರಿಂದ ರಸ್ತೆಯಲ್ಲಿ ನೀರು ನಿಲ್ಲುತ್ತಿತ್ತು. ಹೀಗಾಗಿ ಈ ಹಿಂದೆ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರೂ ಪ್ರಯೋಜವಿಲ್ಲದಂತಾಗಿದೆ. ಆದರೆ, ನಿತ್ಯ ನೀರು ಹರಿದು ಹಾಕಿದ್ದ ರಸ್ತೆಯು ಕಿತ್ತು ಹೋಗಿ, ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ.

    ಇದನ್ನೂ ಓದಿ: ರಸ್ತೆ ಸರಿ ಇಲ್ಲದ ಕಾರಣ ಹೆಣ್ಣು ಕೊಡುತ್ತಿರಲಿಲ್ಲ- ಕೆಆರ್‌ಪಿಪಿ

    ಬೈಕ್ ಸವಾರರು ಯಾಮಾರಿದಲ್ಲಿ ಗುಂಡಿಗೆ

    ಈ ಮೂರು ಗುಂಡಿಗಳಲ್ಲಿ ಮೊಣಕಾಲಿನವರೆಗೂ ಕೊಳಚೆ ನೀರು ತುಂಬಿರುವುದರಿಂದ ರಸ್ತೆ-ಗುಂಡಿ ಯಾವುದೆಂದು ತಿಳಿಯುವುದಿಲ್ಲ. ಇದರಿಂದ ವಾಹನಗಳು ಸಂಚರಿಸುವುದೇ ಕಷ್ಟವಾಗಿದೆ. ಬೈಕ್ ಸವಾರರು ಸ್ವಲ್ಪ ಯಾಮಾರಿದಲ್ಲಿ ಗುಂಡಿಗೆ ಬಿದ್ದು, ಗಾಯಗೊಳ್ಳುವುದು ಗ್ಯಾರಂಟಿ.

    ಈಗಾಗಲೇ ಹಲವರು ಬಿದ್ದು ಸಣ್ಣ ಪುಟ್ಟ ಗಾಯಗಳಾದ ಉದಾಹರಣೆಗಳಿವೆ. ಕಾರುಗಳು ಬಂದರೆ ಗುಂಡಿಯಲ್ಲಿ ಕಲ್ಲುಗಳು ಬಡಿದು ಹಾಳಾಗುತ್ತಿವೆ. ಬೈಕ್ ಸವಾರರು, ಗುಂಡಿಗಳು ಇರುವ ಸ್ಥಳವನ್ನು ನಡೆದುಕೊಂಡು ಹೋಗಿ ದಾಟುತ್ತಿದ್ದಾರೆ.

    ಒಂದೆಡೆ ಗುಂಡಿ ಬಿದ್ದು ಕೊಳಚೆ ನೀರಿನಲ್ಲಿ ವಾಹನ ಸವಾರರು ಪರದಾಡುತ್ತಿದ್ದರೆ, ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಈ ನಡುವೆ ನಾಯಿ, ಹಂದಿಗಳು ಆ ನೀರಿನಲ್ಲಿ ಹೊರಳಾಡಿ ದಣಿವಾರಿಸಿಕೊಳ್ಳುತ್ತಿವೆ.

    ಜಿಲ್ಲಾ ಹೆದ್ದಾರಿಯಲ್ಲಿ ನಿಲ್ಲುವ ಕೊಳಚೆ ನೀರು - ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ

    ಈಗಾಗಲೇ ಎರಡು ಬಾರಿ ತಾತ್ಕಾಲಿಕವಾಗಿ ದುರಸ್ತಿ ಮಾಡಿ ಕೊಳಚೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗಿತ್ತು. ಲೋಕೋಪಯೋಗಿ ಇಲಾಖೆಗೆ ರಸ್ತೆ ಒಳಪಟ್ಟಿದ್ದು, ಅವರಿಗೂ ಪತ್ರ ಬರೆಯಲಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಚರಂಡಿ ನಿರ್ಮಿಸಬೇಕಿದೆ.
    | ಸಂಶೀರ್ ಅಲಿ, ಪಿಡಿಒ, ಸುಳೇಕಲ್ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts