More

    ಹೆದ್ದಾರಿಯಲ್ಲಿ ಹೊಂಡಗಳ ದರ್ಬಾರ್

    ಬೈಲಹೊಂಗಲ: ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಿತ್ತೂರು ಮತಕ್ಷೇತ್ರ ವ್ಯಾಪ್ತಿಯ ಸಂಪಗಾಂವ ಗ್ರಾಮದ ಜಿಲ್ಲಾ ಪ್ರಮುಖ ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿಗಳು ನಿರ್ಮಾಣವಾಗಿದೆ. ರಸ್ತೆಗಳಲ್ಲಿ ಹೊಂಡಗಳ ಸಾಮ್ರಾಜ್ಯ ಮೈದಳೆದಿದೆ. ಇದರಿಂದಾಗಿ ವಾಹನ ಸವಾರರು ನಿತ್ಯವೂ ಜನಪ್ರತಿನಿಧಿಗಳು ಹಾಗೂ
    ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲೇ ಸಂಚರಿಸುತ್ತಿದ್ದಾರೆ.

    ಸರ್ಕಾರ ಕಳೆದ ಎರಡು ವರ್ಷದ ಹಿಂದೆ ಕೋಟ್ಯಂತರ ರೂ. ಅನುದಾನ ವೆಚ್ಚ ಮಾಡಿ ಹಿರೇಬಾಗೇವಾಡಿಯಿಂದ ಚಿಕ್ಕಬಾಗೇವಾಡಿ, ಸಂಪಗಾಂವಿ ಬೈಪಾಸ್ ಮಾಗರ್ವಾಗಿ ಬೈಲಹೊಂಗಲ, ಬೆಳವಡಿ, ಕರೀಕಟ್ಟಿ ಮೂಲಕ ಸವದತ್ತಿವರೆಗೆ ಜಿಲ್ಲಾ ಹೆದ್ದಾರಿಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿತ್ತು. ಆದರೆ, ನಿರ್ಮಾಣಗೊಂಡ ಕೆಲ ದಿನಗಳಲ್ಲೇ ರಸ್ತೆ ಹಾಳಾಗಿದೆ. ಇದು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತಿದೆ.

    ಮನವಿಗಿಲ್ಲ ಸ್ಪಂದನೆ: ಅಂದಾಜು 20 ಸಾವಿರ ಜನಸಂಖ್ಯೆ ಹೊಂದಿರುವ ಹಾಗೂ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಸಂಪಗಾಂವ ಗ್ರಾಮ ಪ್ರಮುಖ ವ್ಯಾಪಾರಿ ಕೇಂದ್ರವಾಗಿದೆ. ಆದರೆ, 2 ಕಿ.ಮೀ. ಒಳರಸ್ತೆಯನ್ನು ದುರಸ್ತಿ ಮಾಡದಿರುವುದು ಸದ್ಯ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ದುರಸ್ತಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ದೂರು.

    ಭಯದಲ್ಲೇ ಸಂಚಾರ: ರಸ್ತೆಯಲ್ಲಿ ಆಳವಾದ ಗುಂಡಿ ನಿರ್ಮಾಣವಾಗಿರುವುದರಿಂದ ಭಯದಲ್ಲೇ ವಾಹನ ಸಂಚಾರ ನಡೆದಿದೆ. ಎಷ್ಟೇ ಜಾಗೃತಿ ವಹಿಸಿದರೂ ಅನೇಕ ಬೈಕ್ ಸವಾರರು ಗುಂಡಿಗಳಲ್ಲಿ ಬಿದ್ದು ಗಾಯಮಾಡಿಕೊಂಡಿದ್ದಾರೆ. ರಾತ್ರಿ ವೇಳೆ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ವಾಹನ ಸವಾರರು.

    ಒಳರಸ್ತೆ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ. ಕೆಲ ಕಾರಣಗಳಿಂದ ಕಾಮಗಾರಿ ಆರಂಭವಾಗಿಲ್ಲ. ಕಾಮಗಾರಿ ಆರಂಭಿಸಲು ಗುತ್ತಿಗೆದಾರನಿಗೆ ಸೂಚಿಸಲಾಗುವುದು.
    | ಮಹಾಂತೇಶ ದೊಡಗೌಡರ ಶಾಸಕ, ಚನ್ನಮ್ಮನ ಕಿತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts