More

    ಕಠಿಣ ಶ್ರಮ ವಿನಿಯೋಗದಿಂದ ಸಂಘ ಅಭಿವೃದ್ದಿ

    ಅಳವಂಡಿ: ಪ್ರಾಮಾಣಿಕ ಪ್ರಯತ್ನ, ನಂಬಿಕೆ, ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಸಂಘಗಳು ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ರಾಬಕೊವಿ ಹಾಲು ಒಕ್ಕೂಟ ನಿರ್ದೆಶಕ ವೆಂಕನಗೌಡ ಹಿರೇಗೌಡ್ರ ಹೇಳಿದರು.


    ಸಮೀಪದ ಕಾತರಕಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಸಿದ್ದರಾಮಪ್ಪ ಹಾಗೂ ಉಪಾಧ್ಯಕ್ಷ ಹನುಮಪ್ಪ ಅವರನ್ನು ಸನ್ಮಾನಿಸಿ ಗುರುವಾರ ಮಾತನಾಡಿದರು.‘ನಾವು ಎಲ್ಲರಿಗಾಗಿ ಎಲ್ಲರೂ ನಮಗಾಗಿ’ ಎಂಬ ಸಹಕಾರ ತತ್ವವನ್ನು ಸಂಘದಲ್ಲಿ ಅಳವಡಿಸಿಕೊಳ್ಳಬೇಕು. ಸಂಘದ ಜೊತೆಗೆ ನಾವು ಬೆಳೆದು ಆರ್ಥಿಕವಾಗಿ ಸಬಲರಾಗಬೇಕಾದರೆ ಸಂಘದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

    ಇದನ್ನೂ ಓದಿ: ಹಾಲು ಒಕ್ಕೂಟ ನೌಕರರಿಗೂ ಭ್ರಷ್ಟ ನಿಗ್ರಹ ಕಾಯ್ದೆ ಅನ್ವಯ: ಹೈಕೋರ್ಟ್ ಆದೇಶ, ಕೆಎಂಎಫ್ ಅಧಿಕಾರಿ ಅರ್ಜಿ ವಜಾ
    ನೂತನ ಅಧ್ಯಕ್ಷ ಸಿದ್ದರಾಮಪ್ಪ ಗುಳನಗೌಡ ಮಾತನಾಡಿ, ಸರ್ವರ ಸಹಕಾರ ಪಡೆದು ಸಂಘವನ್ನು ಅಭಿವೃದ್ದಿಪಡಿಸುತ್ತೇನೆ. ರೈತರು ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಸದೃಡವಾಗಬಹುದು ಎಂದರು. ಉಪಾಧ್ಯಕ್ಷ ಹನುಮಪ್ಪ ದೇವರಮನಿ, ಚುನಾವಣಾಧಿಕಾರಿ ಸುರೇಶ ಅರಕೇರಿ, ಪ್ರಮುಖರಾದ ಸುರೇಶ ತಳವಾರ, ನಾಗರಾಜ, ಸಂಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts