More

  ಗ್ರಾಮಗಳಿಗೆ ಸವಲತ್ತು ಒದಗಿಸಿ

  ಶೃಂಗೇರಿ: ಗ್ರಾಮೀಣ ಪ್ರದೇಶದ ಜನರಿಗೆ ಸವಲತ್ತುಗಳನ್ನು ನೀಡಬೇಕು. ಅವರ ಜೀವನ ನಿರ್ವಹಣೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಸಹಕಾರ ನೀಡುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಧ್ಯೇಯ ಎಂದು ತಾಲೂಕು ಯೋಜನಾಧಿಕಾರಿ ಮೂರ್ತಿ ಶೆಟ್ಟಿ ತಿಳಿಸಿದರು.

  ಹೊಳೆಕೊಪ್ಪ ಗ್ರಾಮದ ಶ್ರೀರಾಮ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ 1.50 ಲಕ್ಷ ರೂ. ಮೊತ್ತದ ಚೆಕ್‌ನ್ನು ಸಮಿತಿ ಅಧ್ಯಕ್ಷ ಅಶೋಕ್ ಹೆಗಡೆ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
  ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಹಾಗೂ ಕೃಷಿ ಕ್ಷೇತ್ರಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರದ ಯೋಜನೆಗಳು ಪೂರಕವಾಗಿವೆ. ಮಹಿಳಾ ಸಬಲೀಕರಣಕ್ಕಾಗಿ ಸಂಘಗಳನ್ನು ರಚಿಸಿ ಅವರಲ್ಲಿ ಉಳಿತಾಯ ಮನೋಭಾವ ಬೆಳೆಸುವ ಜತೆಗೆ ಉದ್ಯಮಕ್ಕಾಗಿ ಸಾಲ ನೀಡುತ್ತ ಬಂದಿದೆ. ಶೃಂಗೇರಿ ಆಧ್ಯಾತ್ಮಿಕವಾಗಿ ಉನ್ನತ ಸ್ಥಾನ ಗಳಿಸಿದ್ದು, ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗಾಗಿ ಧರ್ಮಸ್ಥಳ ಸಂಘ ಕೈಜೋಡಿಸುತ್ತದೆ ಎಂದರು.
  ಸಮಿತಿ ಉಪಾಧ್ಯಕ್ಷರಾದ ಪ್ರಸನ್ನ, ನಿಶ್ಚಲ್ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳದ ವಲಯ ಮೇಲ್ವಿಚಾರಕಿ ಸುಷ್ಮಾ, ಕೃಷಿ ಮೇಲ್ವಿಚಾರಕ ಗಿರೀಶ್, ಹೊಳೆಕೊಪ್ಪ ಒಕ್ಕೂಟದ ಅಧ್ಯಕ್ಷ ರಮೇಶ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts