More

    ವಿಧಾನ ಪರಿಷತ್ ಹೈಡ್ರಾಮಾ: ಕಾಂಗ್ರೆಸ್ ವರ್ಸಸ್ ಬಿಜೆಪಿ- ಯಾರ ವಾದ ಏನು?

    ಬೆಂಗಳೂರು: ಪ್ರಜಾಪ್ರಭುತ್ವದ ಇತಿಹಾಸದಲ್ಲಿ ನಮ್ಮ ರಾಜ್ಯ ತಲೆತಗ್ಗಿಸುವಂಥ ಘಟನೆಗೆ ನಿನ್ನೆ ವಿಧಾನಪರಿಷತ್ ವೇದಿಕೆಯಾಗಿದ್ದು, ಈ ಬಗ್ಗೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಾಯಕರು ತಮ್ಮದೇ ಆದ ವಾದಗಳನ್ನು ಮುಂದಿರಿಸಿದ್ದಾರೆ.

    ಬಿಜೆಪಿ ವಾದವೇನು?

    1 ಅವಿಶ್ವಾಸ ಮಂಡನೆ ಅರ್ಜಿ ಹದಿನಾಲ್ಕು ದಿನ ಮುಗಿದು, ನಿಯಮದ ಪ್ರಕಾರ ಐದು ದಿನಗಳೊಳಗೆ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಸದನದ ಒಳಗೇ ಚರ್ಚೆಗೆ ನೀಡಬೇಕಿತ್ತು.

    2 ಐದನೇ ದಿನ ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯದ ವಿಚಾರ ಇರಲಿಲ್ಲ. ನಾವು ಈ ಬಗ್ಗೆ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ಸ್ಪಷ್ಟ ಮಾಹಿತಿ ನೀಡಿದರೂ ಸ್ಪಷ್ಟತೆ ಕೊಡಲಿಲ್ಲ.

    3 ಅವಿಶ್ವಾಸ ನಿರ್ಣಯ ಸದನದ ವಿಚಾರ, ಮತ್ತೆ ಅವಿಶ್ವಾಸ ನೋಟಿಸ್ ಕೊಟ್ಟು, ಅವರು ನನಗೆ ಅಧಿಕಾರವಿದೆ ಎಂದು ಮತ್ತೆ ತಿರಸ್ಕರಿಸಿದರೆ ಹೇಗಾಗುತ್ತದೆ.

    4 ಅರ್ಜಿ ಅವಧಿ ಮುಗಿದ ಬಳಿಕ ಸಭಾಪತಿಯವರಿಗೆ ಆ ಸ್ಥಾನದಲ್ಲಿ ಕೂರಿವ ಅವಕಾಶ ಸಿಗುವುದಿಲ್ಲ. ಈ ಕಾರಣಕ್ಕೆ ಉಪ ಸಭಾಪತಿಯವರನ್ನು ಸದನ ನಡೆಸಲು ಕೋರಿದೆವು.

    5 ಉಪ ಸಭಾಪತಿ ಆ ಸ್ಥಾನದಲ್ಲಿ ಕುಳಿತಾಗ ಕಾಂಗ್ರೆಸ್​ನವರು ಅಸಂವಿಧಾನಿಕವಾಗಿ ನಡೆದುಕೊಂಡಿದ್ದು ಸದನಕ್ಕೆ ಕಪ್ಪು ಚುಕ್ಕೆಯಾಗಿದೆ.

    6 ಬಿಜೆಪಿ ಪ್ರಸ್ತಾವಕ್ಕೆ ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿದ ಬಳಿಕ ಒಂದು ಕ್ಷಣವೂ ತಡಮಾಡದೆ ಸಭಾಪತಿಯಿಂದ ರಾಜೀನಾಮೆ ಕೊಡಿಸಬೇಕಿತ್ತು. ಇದು, ಕಾಂಗ್ರೆಸ್ ಕರ್ತವ್ಯವಾಗಿತ್ತು.

    ಕಾಂಗ್ರೆಸ್ ವಾದವೇನು?

    1 ಸಭಾಪತಿಗಳು ಸೂಚಿಸಿದ ನಂತರ ಉಪ ಸಭಾಪತಿ ಪೀಠದಲ್ಲಿ ಕೂರಬೇಕು. ಯಾರೋ ಹೇಳಿದರು ಎಂದ ಮಾತ್ರಕ್ಕೆ ಸಭಾಪತಿ ಸ್ಥಾನದಲ್ಲಿ ಕೂರುವುದು ಕಾನೂನಿನ ಪ್ರಕಾರ ತಪ್ಪು.

    2 ಅವಿಶ್ವಾಸ ನಿರ್ಣಯ ವಿಚಾರ ಅಜೆಂಡಾದಲ್ಲಿ ಇಲ್ಲ, ಅದನ್ನು ಸಭಾಪತಿ ತಿರಸ್ಕರಿಸಿದ್ದಾರೆ. ಹೀಗಿರುವಾಗ ಅದರ ಬಗ್ಗೆ ಚರ್ಚೆ ಸಲ್ಲ.

    3 ಕಲಾಪ ಆರಂಭವಾಗುವ ಮೊದಲು ಬಿಜೆಪಿ ಸದಸ್ಯರು ಸದನದ ಬಾಗಿಲು ಹಾಕಿದ್ದು ಕಾನೂನು ಬಾಹಿರ. ಇಂತಹ ಅಗೌರವ ಸೂಚಿಸಿದ ಘಟನೆ. ಹಿಂದೆ ಯಾವತ್ತೂ ನಡೆದಿರಲಿಲ್ಲ.
    4 ಎಲ್ಲಿಯ ತನಕ ಸಭಾಪತಿ ಇರುತ್ತಾರೋ ಅಲ್ಲಿಯವರೆಗೆ ಅವರೇ ಸುಪ್ರೀಂ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು.

    5 ಸರ್ಕಾರ ಸಂಪುಟ ಸಭೆ ನಿರ್ಧಾರ ಕೈಗೊಂಡು ಸದನ ಕರೆಯಬೇಕು. ಅವಿಶ್ವಾಸ ನಿರ್ಣಯ ಚರ್ಚೆ ಆಗದೆ ಅವಿಶ್ವಾಸ ಇದೆ ಎನ್ನುವುದು ತಪ್ಪು.

    6 ಬಿಜೆಪಿಗೆ ಹಸುಗಳ ಬಗ್ಗೆ ಪ್ರೀತಿ ಇದ್ದರೆ ಮೊದಲು ಅದನ್ನು ಚರ್ಚೆ ಮಾಡಬೇಕಿತ್ತು. ಅದರ ಬದಲಾಗಿ ಅವಿಶ್ವಾಸ ಚರ್ಚೆಯನ್ನೇ ಮೊದಲು ಮಾಡಿದ್ದಾರೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ವಿಧಾನ ಪರಿಷತ್ ಹೈಡ್ರಾಮಾ ಹೇಗಾಯಿತು- ಯಾಕಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts