More

    ಸತ್ಯ ಘಟನೆಗಳ ಆಧಾರಿತ ‘ಹೇ ರಾಮ್​’ ಸದ್ದಿಲ್ಲದೆ ಶುರುವಾಯ್ತು

    ಶ್ರಾವಣ ಮಾಸ ಶುರುವಾದರೆ, ಸಾಲುಸಾಲು ಚಿತ್ರಗಳು ಶುರುವಾಗುವ ಕಾಲವೊಂದಿತ್ತು. ಆದರೆ, ಕರೊನಾ ಹಾವಳಿಯಿಂದ ಚಿತ್ರರಂಗದಲ್ಲಿ ಚಟುವಟಿಕೆಗಳು ಬಹಳ ಕಡಿಮೆಯಾಗಿದ್ದು, ಶ್ರಾವಣ ಮಾಸ ಬಂದರೂ, ಸೆಟ್ಟೇರುತ್ತಿರುವ ಚಿತ್ರಗಳ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟಾಗಿವೆ.

    ಹೀಗಿರುವಾಗಲೇ, ‘ಹೇ ರಾಮ್​’ ಎನ್ನುವ ಚಿತ್ರವೊಂದು ಸದ್ದಿಲ್ಲದೆ ಸೆಟ್ಟೇರಿದೆ. ಜೆ.ಪಿ. ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ, ‘ಡಾಲಿ’ ಧನಂಜಯ್​ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್​ ಮಾಡಿ ಶುಭ ಕೋರಿದ್ದಾರೆ.

    ಇದನ್ನೂ ಓದಿ: ಲಾಭ ಬಂದ್ರೆ ಸಿನ್ಮಾದವ್ರು ನಿಮ್ಗೇನಾದ್ರೂ ಕೊಡ್ತಾರಾ? ಪಂಕಜ್​ ಹೀಗೆ ಕೇಳಿದ್ದು ಯಾಕೆ?

    ಅಂದಹಾಗೆ, ಈ ‘ಹೇ ರಾಮ್​’ ಚಿತ್ರವನ್ನು ಪ್ರವೀಣ್​ ಬೇಲೂರು ಎನ್ನುವವರು ನಿರ್ಮಿಸಿ-ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ಕಾವೇರಿ ತೀರದ ಚರಿತ್ರೆ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅವರಿಗೆ ಇದು ಎರಡನೆಯ ಚಿತ್ರ. ಈ ಚಿತ್ರದ ಹೀರೋ ಯಾರು ಎಂಬುದನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ. ಇನ್ನು ಧರ್ಮ, ಚೈತ್ರ ಕೋಟೂರು, ಸಪ್ತಮಿ ಗೌಡ ಮುಂತಾದವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

    ಈ ಚಿತ್ರಕ್ಕೆ ಮಾಜಿ ಪೊಲೀಸ್​ ಅಧಿಕಾರಿ ಎಸ್​.ಕೆ. ಉಮೇಶ್​ ಅವರು ಕಥೆ-ಚಿತ್ರಕಥೆ ಬರೆದಿದ್ದಾರೆ. ಕಳೆದ ವಾರವಷ್ಟೇ ಎಸ್​.ಪಿ. ಹುದ್ದೆಯಿಂದ ನಿವೃತ್ತರಾಗಿರುವ ಉಮೇಶ್​ ಅವರು ಸೇವೆಯಲ್ಲಿದ್ದಾಗ, ಹಲವು ಘಟನೆಗಳಿಗೆ ಸಾಕ್ಷಿಯಾಗಿದ್ದರು. ಆ ನೈಜ ಘಟನೆಗಳನ್ನೆಲ್ಲಾ ಪುಸ್ತಕ ರೂಪದಲ್ಲಿ ದಾಖಲಿಸಿಕೊಂಡಿದ್ದ ಅವರು, ಆ ಪುಸ್ತಕದ ಒಂದು ಭಾಗವನ್ನು ಈ ಸಿನಿಮಾ ಮೂಲಕ ತೋರಿಸುವುದಕ್ಕೆ ಹೊರಟಿದ್ದಾರಂತೆ. ಇನ್ನು, ಅವರ ಪಾತ್ರವನ್ನು ನಟ ಧರ್ಮ ನಿರ್ವಹಿಸುತ್ತಿದ್ದಾರೆ ಎನ್ನುವುದು ವಿಶೇಷ.

    ಇದನ್ನೂ ಓದಿ: ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್ ನಿರ್ಮಾಣಕ್ಕೆ ಮುಂದಾದ ನಟ ರಘು ಭಟ್

    ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪ್ರವೀಣ್, ‘ಒಬ್ಬ ಮನುಷ್ಯ ಕ್ರೈಮ್​ಗೆ ಸಿಕ್ಕಾಗ ಏನೆಲ್ಲಾ ಅನುಭವಿಸುತ್ತಾನೆ. ಅವನ ಮನೆಯವರು ಏನೆಲ್ಲಾ ಅನುಭವಿಸಬೇಕಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ. ಹಾಗೆಯೇ ಈ ಚಿತ್ರದಲ್ಲಿ ನಾಯಕ-ನಾಯಕಿ ಎನ್ನುವುದಕ್ಕಿಂತ, ಕಥೆಯೇ ನಾಯಕ ಎಂಬುದು ಅವರ ಅಭಿಪ್ರಾಯ.

    ಈ ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್​ ಸಂಗೀತ ಸಂಯೋಜಿಸಿದ್ದು, ಹಾಡುಗಳನ್ನೂ ಅವರೇ ರಚಿಸಿದ್ದಾರೆ.

    ಬಣ್ಣ ಹಚ್ಚಲಿರುವ ಅಮೀರ್ ಖಾನ್​ ಮಗ … ಯಶ್​ರಾಜ್​ ಫಿಲಂಸ್​ ಚಿತ್ರದ ಮೂಲಕ ಎಂಟ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts