More

    ಹೆಸ್ಕಾಂ ಉಪವಿಭಾಗೀಯ ಕಚೇರಿ ಶೀಘ್ರ ಆರಂಭ

    ಹುನಗುಂದ: ಕಳೆದ 2013 ರಿಂದ 2018 ರ ಅವಧಿಯಲ್ಲಿ ನಾನು ಶಾಸಕನಾಗಿದ್ದ ಸಮಯದಲ್ಲಿ ಹುನಗುಂದ ಹೆಸ್ಕಾ ಉಪವಿಭಾಗದ ಕಚೇರಿ ಮಂಜೂರಾತಿ ಪಡೆದು ಸ್ವಂತ ಕಟ್ಟಡಕ್ಕೆ ಭೂಮಿಪೂಜೆ ಮಾಡಿದ್ದೆ. ಅದರಂತೆಯೇ ಮತಕ್ಷೇತ್ರದಲ್ಲಿ ಬಹುತೇಕ ಅನೇಕ ಕಾಮಗಾರಿ ಕೆಲಸಗಳು ಮತ್ತೇ ನನ್ನ ಕೈಯಲ್ಲಿ ಉದ್ಘಾಟನೆ ಆಗುತ್ತಿರುವುದು ನನ್ನ ಭಾಗ್ಯ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

    ಪಟ್ಟಣದ ವಿದ್ಯಾನಗರದಲ್ಲಿನ ಹುಬ್ಬಳ್ಳಿ ವಿದ್ಯುತ್ ವಿಭಾಗದ ಕಂಪನಿ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹುನಗುಂದ ಉಪ ವಿಭಾಗದ ನೂತನ ಕಚೇರಿ ಕಟ್ಟಡ, 33 ಕೆ.ವಿ. ಕರಡಿ ಉಪವಿದ್ಯುತ್ ವಿತರಣಾ ಕೇಂದ್ರದ ಹೆಚ್ಚುವರಿ, 5 ಎಂವಿಎ ಪವರ್ ಟ್ರಾನ್ಸ್‌ಫಾರ್ಮರ್ ಅಳವಡಿಕೆ, ವಿದ್ಯುತ್ ಮಾಪಕ ಬಾಹ್ಯ ಮಾರಾಟ ಮಳಿಗೆ ಉದ್ಘಾಟನೆ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಗ್ರಾನೈಟ್ ಉದ್ಯಮ ಹಾಗೂ ನೇಕಾರಿಕೆಗೆ ಹೆಚ್ಚಿಗೆ ವಿದ್ಯುತ್ ಬಳಕೆಯಾಗುವುದರಿಂದ ಹೆಸ್ಕಾಂ ಉಪವಿಭಾಗೀಯ ಕಚೇರಿ ಆಗಬೇಕು ಎಂ ಮನವಿ, ಬೇಡಿಕೆ ಇದ್ದು ಈ ವರ್ಷ ಕಚೇರಿಯನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಹುನಗುಂದಗೆ 220 ಕೆವಿ ಸ್ವೇಷನ್ ಅವಶ್ಯಕತೆ ಇದ್ದು, ಈಗಾಗಲೇ ಬಿಂಜವಾಡಗಿ ಹತ್ತಿರ 20 ಎಕರೆ ಜಮೀನು ಖರೀದಿಯಾಗಿದೆ. ಕೆಲವೇ ದಿನಗಳಲ್ಲಿ 220 ಕೆವಿ ಸ್ವೇಷನ್ ಕಾಮಗಾರಿ ಆರಂಭವಾಗಲಿದೆ. ತಾಲೂಕಿನಲ್ಲಿ 110 ಕೆ.ವಿ ಸ್ಟೇಷನ್ ಹಾವರಗಿ, ಮೂಗನೂರ, ಹುಲಗಿನಾಳ ಮಂಜೂರಾಗಿವೆ ಎಂದರು.

    ಬಾಗಲಕೋಟ ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಜೆ.ಕೆ.ಯಳಸಂಗಿ, ಹೆಸ್ಕಾಂ ಆರ್ಥಿಕ ಅಧಿಕಾರಿ ಪ್ರಕಾಶ ಪಾಟೀಲ, ಹೆಸ್ಕಾಂ ಅಧಿಕಾರಿಗಳಾದ ಬಾಲಾಜಿಸಿಂಗ್, ವಿಶಾಲ ಧರೆಪ್ಪಗೋಳ, ತಾಪಂ ಇಒ ಮುರಳೀಧರ ದೇಶಪಾಂಡೆ, ವಿಜಯ ಮಹಾಂತೇಶ ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ, ಶಿವಾನಂದ ಕಂಠಿ, ಮಹಾಂತೇಶ ಅವಾರಿ, ಸಂಗಣ್ಣ ಗಂಜೀಹಾಳ, ಅಮೀನಗಡ ಪಿಕೆಪಿಎಸ್ ಅಧ್ಯಕ್ಷ ಸಿದ್ದು ಭದ್ರಶೆಟ್ಟಿ, ಪಿಎಸ್‌ಐ ಯಲ್ಲಪ್ಪ ಜೋಡರೊಟ್ಟಿ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಲೇಮಾನ ಬಂಗಾರಚುಕ್ಕಿ, ಕಾರ್ಯದರ್ಶಿ ಅಮರೇಶ ಕರಂಡಿ, ಮಹಾಂತೇಶ ಹೊಸಮನಿ, ರಾಜು ಅಮರಾವತಿ, ಮಲ್ಲಣ್ಣ ಮುರನಾಳ, ಹೆಸ್ಕಾಂ ಇಲಾಖೆಯ ನೌಕರರು, ಸಿಬ್ಬಂದಿ ಇದ್ದರು. ಮಹಾಂತೇಶ ಬಾನಕದಿನ್ನಿ ನಿರೂಪಿಸಿದರು.

    ಹುನಗುಂದ ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿಗೆ ನಿವೇಶನ ನೀಡುವಂತೆ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಮನವಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts