More

    ಸನಾತನ ಧರ್ಮದಲ್ಲಿ ದೇವಾಲಯಗಳ ಪರಂಪರೆ

    ಅನಾದಿ ಕಾಲದಿಂದಲೂ ದೇವಾಲಯಗಳು ಭಾರತೀಯ ಸಮಾಜದ ಕೇಂದ್ರಬಿಂದುಗಳಾಗಿವೆ. ದೇವಾಲಯಗಳ ಪಾವಿತ್ರ್ಯ ಕಾಪಾಡುವುದು ಮತ್ತು ಅಲ್ಲಿಯ ಪೂಜಾವಿಧಿ-ವಿಧಾನಗಳು ಮತ್ತು ಇತರ ಆಚರಣೆಗಳು ಕ್ರಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಸನಾತನ ಧರ್ಮದ ಅನುಯಾಯಿಯ ಕರ್ತವ್ಯವಾಗಿದೆ.

    ಅಮೃತ ಸಿಂಚನ‘ಭಗವಂತನ ಆನಂದವನ್ನು ಅನುಭವಿಸಿ, ಅದರಲ್ಲಿ ರತರಾದವರೇ ಭಾರತೀಯರು’ ಎಂದು ಭಗವಾನ್ ಶ್ರೀಸತ್ಯಸಾಯಿ ಬಾಬಾರವರು ಭಾರತೀಯರನ್ನು ವರ್ಣಿಸುತ್ತಿದ್ದರು. ಹಲವಾರು ಶತಮಾನಗಳಿಂದ ಭಾರತೀಯರಲ್ಲಿ ಹರಿದು ಬರುತ್ತಿರುವ ಭಗವದ್ಭಕ್ತಿಯ ಸಂಪ್ರದಾಯ ಅವರವರ ಇಷ್ಟದೇವತೆಗಳ ದೇವಾಲಯಗಳ ನಿರ್ವಣದ ರೂಪದಲ್ಲಿ ಭವ್ಯವಾಗಿ ವ್ಯಕ್ತವಾಗುತ್ತ ಬಂದಿದೆ. ದೇವಾಲಯಗಳ ನಿರ್ಮಾಣ ಮತ್ತು ಅಲ್ಲಿಯ ವಿವಿಧ ಆಚರಣೆಗಳಿಗೆ ಸಂಬಂಧಪಟ್ಟ ವಿಜ್ಞಾನ ಹಾಗೂ ಕಲೆಗಳನ್ನು ನಾವು ಆಗಮಶಾಸ್ತ್ರಗಳಿಂದ ತಿಳಿದುಕೊಳ್ಳಬಹುದು. ಆಗಮಶಾಸ್ತ್ರಗಳು, ದೇವಾಲಯಗಳ ನಿರ್ವಣಕಾರ್ಯದ ಸಂಪೂರ್ಣ ವಿವರಗಳನ್ನು ಮಾತ್ರವಲ್ಲದೆ, ದೇವ-ದೇವಿಯರ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ತದನಂತರ ಆಚರಿಸಬೇಕಾದ ಪೂಜಾ ವಿಧಿ-ವಿಧಾನಗಳು ಮತ್ತು ಇತರ ಆಚರಣೆಗಳ ಕುರಿತು ಸವಿಸ್ತಾರವಾಗಿ ತಿಳಿಸುತ್ತವೆ. ಮೂರು ಮುಖ್ಯವಾದ ಆಗಮಶಾಸ್ತ್ರಗಳೆಂದರೆ, ಶೈವಾಗಮ, ವೈಷ್ಣವಾಗಮ ಮತ್ತು ಶಕ್ಱಾಗಮ. ಶೈವಾಗಮವು ಶಿವನ ದೇವಾಲಯಗಳು ಹಾಗೂ ಆರಾಧನೆ ಕುರಿತು ತಿಳಿಸಿಕೊಡುತ್ತದೆ; ಅಂತೆಯೇ, ವೈಷ್ಣವಾಗಮವು ವಿಷ್ಣುವಿಗೆ ಸಂಬಂಧಿಸಿದ್ದರೆ, ಶಕ್ಱಾಗಮವು ದೇವಿಗೆ ಸಂಬಂಧಿಸಿದ್ದಾಗಿದೆ. ಈ ಮೂರಲ್ಲದೆ, ಗಣಪತಿಯ ಆರಾಧಕರ ಗಾಣಪತ್ಯಾಗಮ ಹಾಗೂ ಭೈರವನ ಆರಾಧಕರ ಭೈರವಾಗಮಗಳೂ ಪ್ರಚಲಿತವಾಗಿವೆ.

    ಪ್ರತಿ ಆಗಮದಲ್ಲಿಯೂ ನಾಲ್ಕು ಭಾಗಗಳಿವೆ.

    ‘ಜ್ಞಾನಪಾದ’ ಅಥವಾ ‘ವಿದ್ಯಾಪಾದ’ ಎಂದು ಕರೆಯಲ್ಪಡುವ ಪ್ರಥಮ ಭಾಗವು, ಮೋಕ್ಷಸಾಧನೆಗೆ ಅಗತ್ಯವಾದ ಆಧ್ಯಾತ್ಮಿಕ ಜ್ಞಾನ ಮತ್ತು ತತ್ವಗಳನ್ನು ಒಳಗೊಂಡಿರುತ್ತದೆ.
    ‘ಯೋಗಪಾದ’ವು ದೇಹದಾರ್ಡ್ಯ ಹಾಗೂ ಮನೋನಿಯಂತ್ರಣಕ್ಕೆ ಸಂಬಂಧಿಸಿದ ಯೋಗಸಿದ್ಧಾಂತ ಮತ್ತು ಸಾಧನೆಗಳನ್ನು ತಿಳಿಸಿಕೊಡುತ್ತದೆ.
    ‘ಕ್ರಿಯಾಪಾದ’ದ ವಸ್ತುವೆಂದರೆ, ದೇವಾಲಯಗಳ ವಾಸ್ತುಶಿಲ್ಪ ಮತ್ತು ನಿರ್ವಣ, ಶಿಲ್ಪಕಲೆ, ವಿಗ್ರಹಗಳ ಕೆತ್ತನೆ ಹಾಗೂ ಅವುಗಳಲ್ಲಿ ದೇವ-ದೇವಿಯರ ಪ್ರಾಣ ಪ್ರತಿಷ್ಠಾಪನೆ, ಇತ್ಯಾದಿ.
    ‘ಚರ್ಯಾಪಾದ’ವು ಪೂಜೆ-ಪುನಸ್ಕಾರಗಳ ವಿಧಿ-ವಿಧಾನಗಳು, ಹಬ್ಬ-ಹರಿದಿನಗಳ ಆಚರಣೆ, ಪ್ರಾಯಶ್ಚಿತ್ತವಿಧಿ-ನಿಯಮಗಳು, ಇತ್ಯಾದಿಗಳ ಬಗ್ಗೆ ವಿವರಿಸುತ್ತದೆ.

    ದೇವಸ್ಥಾನಗಳನ್ನು ‘ತೀರ್ಥ’ಗಳೆಂದೂ ಕರೆಯುತ್ತಾರೆ. ಅವುಗಳ ನಿರ್ವತೃಗಳ ಆಧಾರದ ಮೇಲೆ ತೀರ್ಥಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ- ದೈವ, ಆರ್ಷ, ಮಾನುಷ ಮತ್ತು ಆಸುರ (ಬ್ರಹ್ಮಪುರಾಣ). ದೇವ-ದೇವಿಯರ ನೇರ ಭಾಗವಹಿಸುವಿಕೆಯಿಂದ ನಿರ್ವಣವಾದ ತೀರ್ಥಗಳನ್ನು ದೈವತೀರ್ಥಗಳೆಂದು ಕರೆಯುತ್ತಾರೆ. ಆರ್ಷತೀರ್ಥಗಳು ಋಷಿಗಳಿಂದ, ಮಾನುಷತೀರ್ಥಗಳು ರಾಜರು ಅಥವಾ ಭಕ್ತರಿಂದ ಹಾಗೂ ಆಸುರತೀರ್ಥಗಳು ಅಸುರರಿಂದ ನಿರ್ವಣವಾದವುಗಳು.

    ಯಾವುದೇ ದೇವಾಲಯದ ವಿನ್ಯಾಸಕ್ಕೆ ಆಧಾರವಾಗಿರುವುದು, ‘ವಾಸ್ತು-ಪುರುಷ-ಮಂಡಲ’ವೆಂದು ಕರೆಯಲ್ಪಡುವ ಒಂದು ವಿಶಿಷ್ಟ ರೇಖಾವಿನ್ಯಾಸ. ಇಲ್ಲಿ ಮಂಡಲವೆಂದರೆ ವೃತ್ತ, ಪುರುಷನೆಂದರೆ ಸರ್ವಸೃಷ್ಟಿಗೆ ಆಧಾರವಾದ ಮೂಲಚೈತನ್ಯ ಹಾಗೂ ವಾಸ್ತುವೆಂದರೆ ಆವಾಸಸ್ಥಾನ. ನಮ್ಮ ಪರಂಪರೆಯಲ್ಲಿ ದೇವಾಲಯಗಳ ವಿನ್ಯಾಸಕ್ಕೆ ಆಧಾರವಾದ ಈ ವಾಸ್ತು-ಪುರುಷ-ಮಂಡಲವನ್ನು ಒಂದು ರೀತಿಯ ‘ಯಂತ್ರ’ವೆಂದು ಕರೆಯುತ್ತಾರೆ. ಇಂತಹ ಯಂತ್ರದ ವಿನ್ಯಾಸದ ಮೂಲಸೂತ್ರಗಳೆಂದರೆ, ಸಮಪ್ರಮಾಣ ಬದ್ಧತೆ (ಠಢಞಞಛಿಠ್ಟಿಢ) ಹಾಗೂ ಸ್ವಯಂ ಪುನರಾವರ್ತಿತ ಸಂರಚನೆ (ಠಛ್ಝಿf್ಟಟಛಿಚಠಿಜ್ಞಿಜ ಠಠ್ಟಿuಠ್ಠಿ್ಟ). ಈ ಎರಡು ಮೂಲಸೂತ್ರಗಳ ಆಧಾರವೆಂದರೆ, ಗಣಿತಶಾಸ್ತ್ರದ ಸಿದ್ಧಾಂತಗಳ ಜೊತೆಗೆ ಸಮ್ಮಿಲನಗೊಂಡ ಪುರಾಣಾಧಾರಿತ ಮೂಲಭೂತ ನಂಬಿಕೆಗಳು.

    ಯಾವುದೇ ದೇವಾಲಯದ ನಿರ್ವಣಕ್ಕಾಗಿ, ಮೊದಲು ನೆಲದ ಮೇಲೆ ನಾಲ್ಕು ಪ್ರಮುಖ ದಿಕ್ಕುಗಳ (ಪೂರ್ವ, ಪಶ್ಚಿಮ, ದಕ್ಷಿಣ ಹಾಗೂ ಉತ್ತರ) ಆಧಾರದಲ್ಲಿ ಆ ದೇವಾಲಯದ ಅಕ್ಷರೇಖೆಯನ್ನು ಗುರುತಿಸಲಾಗುತ್ತದೆ. ಅಲ್ಲಿ ಲಭ್ಯವಿರುವ ನೆಲದ ವಿಸ್ತೀರ್ಣಕ್ಕನುಗುಣವಾಗಿ ಅಕ್ಷರೇಖೆಯ ಮೇಲೆ ಒಂದು ಪರಿಪೂರ್ಣ ಚೌಕವನ್ನು ರಚಿಸಲಾಗುತ್ತದೆ. ಆ ಚೌಕವನ್ನು ಸುತ್ತುವರಿಯುವಂತೆ ಮಂಡಲದ ವೃತ್ತವನ್ನು ರಚಿಸಲಾತ್ತದೆ. ಪರಿಪೂರ್ಣ ಚೌಕವು ಪರಿಪೂರ್ಣತೆಯ ಪ್ರತೀಕವೆಂದು ಪರಿಗಣಿಸಿ, ಅದನ್ನು ದಿವ್ಯತೆಯ ಸಾಂಕೇತಿಕ ಸ್ವರೂಪವೆಂದು ಭಾವಿಸಲಾಗಿದೆ. ಅಂತೆಯೇ, ವೃತ್ತವು ಭೂಮಿಯ ಸಂಕೇತವಾಗಿದ್ದು, ಅದನ್ನು ಲೌಕಿಕತೆಯ ಸ್ವರೂಪವೆಂದು ಪರಿಗಣಿಸಲಾಗಿದೆ. ಅಲ್ಲದೆ, ಮಾನವನು ತನ್ನ ದೈನಂದಿನ ಜೀವನದಲ್ಲಿ ಕಾಣುವ ಚಂದ್ರ, ಸೂರ್ಯ, ದಿಗಂತ, ಇತ್ಯಾದಿಗಳೂ ವೃತ್ತಾಕಾರದಲ್ಲಿ ಇವೆಯಷ್ಟೆ. ಹೀಗಾಗಿ ವೃತ್ತವು ಲೌಕಿಕತೆಯನ್ನು ಪ್ರತಿನಿಧಿಸುತ್ತದೆ. ಇಲ್ಲಿಯ ಚೌಕ ಮತ್ತು ವೃತ್ತಗಳು ಪರಸ್ಪರ ಒಂದಕ್ಕೊಂದು ಆಧಾರವಾಗಿದ್ದು, ದಿವ್ಯತೆ ಮತ್ತು ಲೌಕಿಕತೆಗಳ ಪರಸ್ಪರ ಪೂರಕತೆಯನ್ನು ಸೂಚಿಸುತ್ತವೆ.

    ಚೌಕವನ್ನು 64 (ಅಥವಾ ಕೆಲವೊಮ್ಮೆ 81) ಉಪಚೌಕಗಳಾಗಿ ವಿಭಜಿಸಿ, ಪ್ರತಿಯೊಂದು ಉಪಚೌಕವು ಒಂದು ‘ಪಾದ’ವೆಂದು ಕರೆಯಲ್ಪಡುತ್ತದೆ. ಪ್ರತಿ ಪಾದವೂ ಒಂದು ಮೂಲವಸ್ತು ಅಥವಾ ಒಬ್ಬ ದೇವತೆಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಈ 64 ಉಪಚೌಕಗಳ ಪೈಕಿ ಕೇಂದ್ರದ ಒಂಬತ್ತು ಉಪಚೌಕಗಳು, ನಿರಾಕಾರ ಪರಬ್ರಹ್ಮನನ್ನು ಪ್ರತಿನಿಧಿಸುತ್ತವೆ; ಆದ್ದರಿಂದ ಅವುಗಳನ್ನು ‘ಬ್ರಹ್ಮಪಾದ’ಗಳೆಂದು ಕರೆಯುತ್ತಾರೆ. ಈ ಕೆಳಗಿನ ರೇಖಾಚಿತ್ರಗಳನ್ನು ನೋಡಿರಿ.

    ಆಗಮಶಾಸ್ತ›ದ ಆಧಾರದಲ್ಲಿ ನಿರ್ವಿುಸಲ್ಪಟ್ಟ ಯಾವುದೇ ದೇವಾಲಯ, ಸಮಸ್ತ ವಿಶ್ವ ಹಾಗೂ ಅದನ್ನು ನಡೆಸುತ್ತಿರುವ ಮೂಲ ಚೈತನ್ಯದ ಸಾಂಕೇತಿಕ ಪ್ರತಿರೂಪವಾಗಿದೆ. ‘ಯಥಾ ಬ್ರಹ್ಮಾಂಡೇ ತಥಾ ಪಿಂಡೇ’- ವಿಶ್ವದಲ್ಲಿ ಏನಿದೆಯೋ ಅದು ನಮ್ಮೊಳಗೂ ಇದೆ. ‘ಪುರುಷ’ನೆಂದರೆ, ‘ಪುರ’ದಲ್ಲಿ (ವಿಶ್ವ ಅಥವಾ ದೇಹದಲ್ಲಿ) ವಾಸಿಸುವನು. ವಿಶ್ವದಲ್ಲಿ ವಾಸಿಸುವನು ಭಗವಂತನಾದರೆ, ದೇಹದಲ್ಲಿ ವಾಸಿಸುವನು ಮಾನವ. ಹೀಗೆ, ‘ಪುರುಷ’ತತ್ವವನ್ನು ಆರಾಧಿಸುವ ದೇವಾಲಯವು ಮಾನವನ ದೇಹವನ್ನೂ ಪ್ರತಿನಿಧಿಸುತ್ತದೆ. ಮಾನವನ ದೇಹದಲ್ಲಿರುವ ಏಳು ಚಕ್ರಗಳನ್ನು ದೇವಾಲಯದ ಒಂದೊಂದು ಅಂಗವು ಪ್ರತಿನಿಧಿಸುತ್ತದೆ. ದೇವಾ ಲಯದ ಧ್ವಜಸ್ತಂಭವು ಮೂಲಾಧಾರ ಚಕ್ರವನ್ನು, ಬಲಿಪೀಠವು ಸ್ವಾಧಿಷ್ಠಾನ ಚಕ್ರವನ್ನು ಹಾಗೂ ಉಪಮಂಟಪ ಅಥವಾ ಅರ್ಧಮಂಟಪವು (ಶಿವ ದೇವಾಲಯಗಳಲ್ಲಿ ನಂದಿಮಂಟಪ) ಮಣಿಪೂರಕ ಚಕ್ರವನ್ನು ಪ್ರತಿನಿಧಿಸುತ್ತವೆ. ಅಂತೆಯೇ, ಮಹಾಮಂಟಪ ಅನಾಹತ ಚಕ್ರವನ್ನು, ರಾಜಮಂಟಪ ಅಥವಾ ಅಂತರಾಳವು ವಿಶುದ್ಧಿ ಚಕ್ರವನ್ನು, ವಿಮಾನ, ಶಿಖರ ಮತ್ತು ಕಳಶಸಹಿತವಾದ ಗರ್ಭಗುಡಿ ಆಜ್ಞಾಚಕ್ರವನ್ನು ಪ್ರತಿನಿಧಿಸುತ್ತವೆ. ಅಂತಿಮವಾಗಿ, ದೇವಾಲಯದಲ್ಲಿ ಪ್ರತಿಷ್ಠಾಪನೆ ಆಗಿರುವ ದೇವತಾ ವಿಗ್ರಹವು ಸಹಸ್ರಾರ ಚಕ್ರವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ದೇವಾಲಯದ ಪ್ರಾಕಾರವನ್ನು ಪ್ರವೇಶಿಸಿ, ವಿವಿಧ ಮಂಟಪಗಳನ್ನು ಹಾದು, ಅಂತಿಮವಾಗಿ ದೈವಸನ್ನಿಧಿಯನ್ನು ತಲುಪುವ ನಾವು, ಸಾಂಕೇತಿಕವಾಗಿ ಜೀವಾತ್ಮನಿಂದ ಪರಮಾತ್ಮನೆಡೆಗಿನ ವಿಕಸನ ಪಯಣವನ್ನು ಪೂರ್ಣಗೊಳಿಸಿದಂತೆಯೇ ಸರಿ!

    ಇಂದಿನ ಕಾಲದ ಯುವಪೀಳಿಗೆಯ ಒಂದು ಸಾಮಾನ್ಯ ಪ್ರಶ್ನೆ- ‘ದೇವರು ಸರ್ವಾತರ್ಯಾಮಿಯಾಗಿರುವಾಗ ನಾವು ಅವನನ್ನು ಹುಡುಕಿಕೊಂಡು ದೇವಾಲಯಕ್ಕೇ ಏಕೆ ಹೋಗಬೇಕು?’ ಈ ಪ್ರಶ್ನೆಗೆ ಉತ್ತರವೆಂದರೆ, ಹೇಗೆ ಅಂತರ್ಜಾಲ ತರಂಗಗಳು ಎಲ್ಲ ಕಡೆಯಲ್ಲಿದ್ದರೂ, ಅಂತರ್ಜಾಲ ಸ್ತಂಭ (ಜ್ಞಿಠಿಛ್ಟಿ್ಞಠಿ ಠಿಟಡಿಛ್ಟಿ) ದ ಸಾಮೀಪ್ಯದಲ್ಲಿ ಮಾತ್ರವೇ ಹೆಚ್ಚಿನ ಸಂಪರ್ಕ ದೊರೆಯುವುದೋ, ಅದೇ ರೀತಿಯಲ್ಲಿ ದೇವರು ಸರ್ವತ್ರವಿದ್ದರೂ, ಅವನ ದಿವ್ಯ ತರಂಗಗಳು ಪವಿತ್ರ ದೇವಾಲಯಗಳಲ್ಲಿ ಅಧಿಕವಾಗಿ ಹೊರಹೊಮ್ಮುತ್ತಿರುತ್ತವೆ. ಆದ್ದರಿಂದ ಅವನ ಸಾನ್ನಿಧ್ಯವನ್ನು ಹೆಚ್ಚು ಉತ್ಕಟವಾಗಿ ಅನುಭವಿಸಲು ನಾವು ದೇವಾಲಯಕ್ಕೆ ಹೋಗಬೇಕು. ಸಾಮಾಜಿಕ ಮಾಧ್ಯಮಗಳಿಂದ ಪ್ರಭಾವಿತವಾಗಿರುವ ಇಂದಿನ ಯುವಪೀಳಿಗೆಗೆ ಈ ನಿದರ್ಶನವು ಸುಲಭವಾಗಿ ಅರ್ಥವಾಗುತ್ತದೆ.

    ಅಂತಹ ಇನ್ನೊಂದು ಪ್ರಶ್ನೆ, ‘ಹೆಣ್ಣುಮಕ್ಕಳು ಗರ್ಭಾವಸ್ಥೆ ಹಾಗೂ ಮಾಸಿಕ ಮುಟ್ಟಿನ ಸಂದರ್ಭದಲ್ಲಿ ದೇವಾಲಯಗಳಿಗೆ ಪ್ರವೇಶಿಸಲು ನಿರ್ಬಂಧವೇಕೆ?’ ದೇವಾಲಯದಲ್ಲಿ ಹೊರಹೊಮ್ಮುವ ತರಂಗಗಳು ನಮ್ಮ ದೇಹದೊಳಗಿನ ಶಕ್ತಿಯನ್ನು ಮೂಲಾಧಾರ ಚಕ್ರದಿಂದ ಸಹಸ್ರಾರ ಚಕ್ರದೆಡೆಗೆ ಕೊಂಡೊಯ್ಯಲು ಹೇಗೆ ಸಹಾಯಕವಾಗುತ್ತವೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಈ ಪ್ರಶ್ನೆಗೆ ಉತ್ತರ ದೊರೆಯುತ್ತದೆ. ಮುಟ್ಟಿನ ಸಂದರ್ಭದಲ್ಲಿ ದ್ರವಗಳು ಜನನಾಂಗದಿಂದ ಹೊರಬರಲು ಕಾರಣವಾದ ಅಪಾನವಾಯುವಿನ ಚಲನೆ, ದೇವಾಲಯದಲ್ಲಿ ಹೊರಹೊಮ್ಮುವ ತರಂಗಗಳಿಂದ ಪ್ರಭಾವಿತವಾಗಿ, ಶರೀರದ ಸ್ವಾಸ್ಥ್ಯ ಏರುಪೇರಾಗುತ್ತದೆ. ಆದ್ದರಿಂದ ಮುಟ್ಟಿನ ಸಂದರ್ಭದಲ್ಲಿ ಹೆಣ್ಣುಮಕ್ಕಳು ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

    ಪ್ರಾಚೀನ ಹಾಗೂ ಮಧ್ಯಕಾಲೀನ ಭಾರತದಲ್ಲಿ ಭಾರತೀಯ ದೇವಾಲಯಗಳು ಕೇವಲ ಧಾರ್ವಿುಕ ಕೇಂದ್ರಗಳಾಗಿರದೆ, ಹಲವು ಸಾಮಾಜಿಕ, ಆರ್ಥಿಕ, ಬೌದ್ಧಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಗರಗಳೂ ಆಗಿದ್ದವು. ರಾಜಮನೆತನಗಳಿಂದ ಹಾಗೂ ಸಮಾಜದಿಂದ ದೊರೆತ ಅನುದಾನ ಮತ್ತು ದೇಣಿಗೆಗಳಿಂದ ದೇವಾಲಯಗಳು ಶ್ರೀಮಂತವಾಗಿದ್ದವು. ಅನೇಕ ದೇವಾಲಯಗಳು ಸಮಾಜದ ಆರ್ಥಿಕ ಉನ್ನತಿಯ ಕೇಂದ್ರಗಳೂ ಆಗಿದ್ದು, ಉದ್ಯೋಗಸೃಷ್ಟಿಯಲ್ಲಿ ಪ್ರಮುಖಪಾತ್ರ ವಹಿಸುತ್ತಿದ್ದವು. ಅನೇಕ ಕುಶಲಕರ್ವಿುಗಳಿಗೆ, ಕಲಾಕಾರರಿಗೆ ಮತ್ತು ಕಾರ್ವಿುಕರಿಗೆ ಉದ್ಯೋಗ ನೀಡುತ್ತಿದ್ದವು. ಅಲ್ಲದೆ, ಕೆರೆ-ಕುಂಟೆಗಳಂತಹ ಜಲಾಶಯಗಳು, ನೀರಾವರಿ ಕಾಲುವೆಗಳು ಹಾಗೂ ರಸ್ತೆಗಳ ನಿರ್ವಣ, ಇತ್ಯಾದಿ ಸಾರ್ವಜನಿಕ ಕಾರ್ಯಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದವು. ಅಂತೆಯೇ, ಗುರುಕುಲಗಳು, ವೈದ್ಯಶಾಲೆಗಳು ಮತ್ತು ಅನ್ನದಾನ ಕ್ಷೇತ್ರಗಳನ್ನು ನಿರ್ವಹಿಸುವ ಮೂಲಕ ದೇವಾಲಯಗಳು ಬಡಬಗ್ಗರಿಗೆ ಹಾಗೂ ದೀನದಲಿತರಿಗೆ ಉಚಿತವಾಗಿ ಶಿಕ್ಷಣ, ಆರೋಗ್ಯ ಹಾಗೂ ಆಹಾರ ಒದಗಿಸುತ್ತಿದ್ದವು.

    ಸನಾತನ ಧರ್ಮದ ಸರ್ವಜನಹಿತ ಬಯಸುವ ಉದಾತ್ತ ತತ್ವಗಳನ್ನು ಅರ್ಥಮಾಡಿಕೊಳ್ಳದ, ಲೋಭಿಗಳೂ ಮತ್ತು ಲೂಟಿಕೋರರೂ ಆದ ಪರಕೀಯ ಆಕ್ರಮಣಕಾರಿಗಳ ಅನೇಕ ದಾಳಿಗಳಿಂದಾಗಿ ಕಳೆದ ಸಹಸ್ರಮಾನದಲ್ಲಿ ಅನೇಕ ಭಾರತೀಯ ದೇವಾಲಯಗಳು ಬಹುವಾಗಿ ಘಾಸಿಗೊಂಡು ಬಡವಾದವು. ಶಹಬ್- ಉದ್-ದಿನ್ ಘೊರಿ 11ನೇ ಶತಮಾನದಲ್ಲಿ ಕಾಶಿ ದೇವಾಲಯವನ್ನು ಲೂಟಿ ಮಾಡಿ, ಸುಮಾರು 1400 ಒಂಟೆಗಳ ಮೇಲೆ ಅಲ್ಲಿ ದೊರೆತ ಧನ-ಕನಕಗಳೊಂದಿಗೆ ಅನೇಕ ಅಮೂಲ್ಯ ವಸ್ತುಗಳನ್ನು ತನ್ನ ದೇಶಕ್ಕೆ ಸಾಗಿಸಿದನೆಂದು ಹೇಳಲಾಗಿದೆ! ಇದು ಕಾಶಿ ಮಾತ್ರವಲ್ಲದೆ, ಬಹಳಷ್ಟು ಹಿಂದೂ ದೇವಾಲಯಗಳ ವ್ಯಥೆಯ ಕಥೆಯಾಗಿದೆ! ಆದರೂ ಕಾಲಕ್ರಮೇಣ, ಮಹಾನ್ ದೈವಭಕ್ತರಾದ ಅಂದಿನ ರಾಜರು ಆಯಾ ಸ್ಥಳಗಳಲ್ಲಿಯೇ ಹೊಸ ದೇವಾಲಯಗಳನ್ನು ನಿರ್ವಿುಸಿ, ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ರಕ್ಷಿಸಿದ್ದಾರೆ.

    ಅನಾದಿ ಕಾಲದಿಂದಲೂ ದೇವಾಲಯಗಳು ಭಾರತೀಯ ಸಮಾಜದ ಕೇಂದ್ರಬಿಂದುಗಳಾಗಿವೆ. ದೇವಾಲಯಗಳ ಪಾವಿತ್ರ್ಯ ಕಾಪಾಡುವುದು ಮತ್ತು ಅಲ್ಲಿಯ ಪೂಜಾವಿಧಿ-ವಿಧಾನಗಳು ಮತ್ತು ಇತರ ಆಚರಣೆಗಳು ಕ್ರಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಸನಾತನ ಧರ್ಮದ ಅನುಯಾಯಿಯ ಕರ್ತವ್ಯವಾಗಿದೆ.

    ‘ನಿಮ್ಮ ಸಮೀಪದ ದೇವಾಲಯಗಳನ್ನು ಪದೇಪದೆ ಸಂದರ್ಶಿಸಿ, ಅವುಗಳ ಸಂರಕ್ಷಣೆಯನ್ನು ಮಾಡಿ’ ಎಂಬುದು ನಿಮ್ಮಲ್ಲಿ ನಾನು ಮಾಡುವ ಕಳಕಳಿಯ ವಿನಂತಿ. ನಮ್ಮ ಸುತ್ತಮುತ್ತಲಿನ ದೇವಾಲಯಗಳನ್ನು ರಕ್ಷಿಸಿ, ಶುಚಿಯಾಗಿಟ್ಟುಕೊಂಡು ದೇವ-ದೇವಿಯರನ್ನು ಆರಾಧಿಸಿ, ಅಲ್ಲಿ ಸೇವಾಕಾರ್ಯಗಳನ್ನು ಮಾಡುವುದರ ಮೂಲಕ ನಾವು ಒಂದು ನವ ‘ದೇವಾಲಯ ಕ್ರಾಂತಿ’ಯನ್ನೇ ಪ್ರಾರಂಭಿಸೋಣ! ದೇವಾಲಯಗಳು ನಮ್ಮ ಸಂಸ್ಕೃತಿ-ನಾಗರಿಕತೆಗಳ ಪ್ರತೀಕಗಳು; ಯಾವುದೇ ಕಾರಣಕ್ಕೂ ನಾವು ಅವುಗಳನ್ನು ಕಳೆದುಕೊಳ್ಳುವಂತಿಲ್ಲ!

    IPL 2024; ಪ್ಲೇಆಫ್​ಗೇರುವ ನಾಲ್ಕು ತಂಡಗಳನ್ನು ಹೆಸರಿಸಿದ ಜಂಬೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts