More

    ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ? ಮಹಿಳೆಯರಿಗೇ ಹೆಚ್ಚು ಆಪತ್ತು! ವರದಿ

    ಬೆಂಗಳೂರು: ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಲಿಕ್ಕರ್​ ಕುಡಿಯುವುದು ಸಹ ಒಂದು ಚಟವಾಗಿ ಮಾರ್ಪಟ್ಟಿದೆ ಎಂದರೆ ಖಂಡಿತ ತಪ್ಪಾಗಲಾರದು. ಮದ್ಯ ಪ್ರಿಯರಿಗೆ ಇದನ್ನು ಸೇವಿಸುವುದರಿಂದ ಅದೇನೋ ಒಂದು ರೀತಿಯ ಖುಷಿ, ಉತ್ಸಾಹ ಲಭಿಸುತ್ತದೆ. ಕೆಲವರು ಆಲ್ಕೋಹಾಲ್ ಸೇವಿಸುವುದನ್ನು ದಿನನಿತ್ಯ ಅಭ್ಯಾಸ ಮಾಡಿಕೊಂಡರೆ, ಇನ್ನೂ ಕೆಲವರು ಟಾನಿಕ್ ರೀತಿ ರಾತ್ರಿಯ ವೇಳೆ ಕುಡಿಯುತ್ತಾರೆ. ಈ ಮಧ್ಯೆ ಇತ್ತೀಚಿನ ವರದಿಯೊಂದು ಎಷ್ಟು ಪ್ರಮಾಣದಲ್ಲಿ ಕುಡಿಯುವುದರಿಂದ ಲಿವರ್ ಆರೊಗ್ಯ ಕಾಪಾಡಿಕೊಳ್ಳಬಹುದು ಹಾಗೂ ಎಷ್ಟು ಕ್ವಾಂಟಿಟಿ ಸೇವನೆ ಮಾಡಿದ್ರೆ ಡ್ಯಾಮೇಜ್ ಆಗಬಹುದು ಎಂಬುದರ ಮಾಹಿತಿ ಹಂಚಿಕೊಂಡಿದೆ. ಅದು ಹೀಗಿದೆ ನೋಡಿ.

    ಇದನ್ನೂ ಓದಿ: ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ

    ಯಾವುದೇ ಟೈಪ್ ಅಥವಾ ಕ್ವಾಂಟಿಟಿವುಳ್ಳ ಆಲ್ಕೋಹಾಲ್ ಸೇವನೆಯು ಲಿವರ್ ಆರೋಗ್ಯಕ್ಕೆ ಹಾನಿಕಾರ. ಈ ಸಂಗತಿ ಮದ್ಯಪ್ರಿಯರು ತಪ್ಪದೇ ತಿಳಿಯುವುದು ಉತ್ತಮ. ಪುರುಷರಿಗಿಂತ ಮಹಿಳೆಯರಿಗೆ ಇದರಿಂದ ಹೆಚ್ಚು ಹಾನಿ ಸಂಭವವಿರುವುದು ವರದಿಯಲ್ಲಿ ಪತ್ತೆಯಾಗಿದೆ. ಕಡಿಮೆ ಪ್ರಮಾಣದಲ್ಲಿ ಕುಡಿದರು ಕೂಡ ಮಹಿಳೆಯರಿಗೆ ಹೆಚ್ಚಿನ ಆಪತ್ತು ಎಂದು ವರದಿ ಉಲ್ಲೇಖಿಸಿದೆ.

    ಅತೀಯಾಗಿ ಕುಡಿಯುವುದು, ವಾರಾಂತ್ಯದ ಪಾರ್ಟಿಗಳಲ್ಲಿ ನಶೆ ಏರುವಂತೆ ಸೇವಿಸುವುದು ಬಹಳ ಅಪಾಯಕಾರಿ. ಅನೇಕ ಯುವಕರು ಅಪರೂಪಕ್ಕೆ ಹೆಚ್ಚಾಗಿ ಕುಡಿಯುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭಾವಿಸಿ, ಅಳತೆ ಮೀರಿ ಮದ್ಯ ಸೇವಿಸುತ್ತಾರೆ. ಆದರೆ, ಇದು ಕೂಡ ಅತ್ಯಂತ ಡೆಂಜರೆಸ್​ ಎಂಬುದು ಗಮದಲ್ಲಿರಲಿ. ಲಿವರ್​ ಸಮಸ್ಯೆಯಿಂದ ಬಳಲುವವರು ಕೆಲವು ಸಮಯ ಮದ್ಯದಿಂದ ದೂರವಿದ್ದು, ಲಿವರ್ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ನಿರ್ಧರಿಸಿ, ತದನಂತರ ಮತ್ತೆ ಸೇವಿಸಲು ಪ್ರಾರಂಭಿಸುತ್ತಾರೆ. ಕೆಲವರಲ್ಲಿ ಅಲ್ಕೋಹಾಲ್ ತ್ಯಜಿಸಿದ ಬಳಿಕ ಫ್ಯಾಟಿ ಲಿವರ್​ ಕಂಡುಬರುತ್ತದೆ.

    ಇದನ್ನೂ ಓದಿ: ಬಿಜೆಪಿಯಿಂದ ಮಾಜಿ ಸಚಿವ ಈಶ್ವರಪ್ಪ ಉಚ್ಚಾಟನೆ; ವಿಜಯೇಂದ್ರ, ಯಡಿಯೂರಪ್ಪ ಹೇಳಿದ್ದಿಷ್ಟು

    ಲಿವರ್ ಚೇತರಿಸಿಕೊಳ್ಳುತ್ತಿದೆ ಎಂದು ತಿಳಿಯುತ್ತಿದ್ದಂತೆ ಮತ್ತೆ ಕುಡಿಯಬಹುದು, ಇನ್ನೇನು ಸಮಸ್ಯೆ ಇಲ್ಲ ಎಂದು ಭಾವಿಸುತ್ತಾರೆ. ಆದರೆ, ಲಿವರ್​ ಡ್ಯಾಮೇಜ್ ಆಗುವುದು ಮಾತ್ರ ಕಡಿಮೆಯಾಗಲ್ಲ, ಬದಲಿಗೆ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ, ಒಂದು ಸಮಯ ಬರುತ್ತದೆ, ಅಲ್ಲಿ ಯಕೃತ್ತು ಗುಣಮುಖ ಹೊಂದುವ ಲಕ್ಷಣವನ್ನೇ ಕಳೆದುಕೊಂಡಿರುತ್ತದೆ. ಆಗ ಮದ್ಯ ತ್ಯಜಿಸಿದ್ರು ಯಾವುದೇ ಪ್ರಯೋಜನ ಇರುವುದಿಲ್ಲ. ಆ ಸಮಯದಲ್ಲಿ ರೋಗಿಯ ಎಲ್ಲಾ ಪ್ರಯತ್ನವೂ ವಿಫಲ. ವರದಿಯ ಪ್ರಕಾರ, ಎಷ್ಟು ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವುದು ಒಳಿತು, ಎಷ್ಟು ತೆಗೆದುಕೊಂಡರೆ ಹಾನಿ? ಎಂಬ ಪ್ರಶ್ನೆಗೆ ಹೀಗಿದೆ ಉತ್ತರ.

    ಒಂದು ದಿನದಲ್ಲಿ 30 ಗ್ರಾಂಗಿಂತಲೂ ಅಧಿಕ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಲಿವರ್ ಆರೋಗ್ಯ ಕುಸಿಯಲು ಪ್ರಮುಖ ಕಾರಣ. 80 ಗ್ರಾಂಗಿಂತಲೂ ಹೆಚ್ಚಿನ ಸಂಪೂರ್ಣ ಮದ್ಯ ಸೇವಿಸಿದ್ರೆ ಖಂಡಿತವಾಗಿ ಲಿವರ್ ಡ್ಯಾಮೇಜ್ ಆಗುವುದರಲ್ಲಿ ಅನುಮಾನವೇ ಬೇಡ. ಅದು ಯಾವುದೇ ವೆರೈಟಿಯ ಅಲ್ಕೋಹಾಲ್ ಆದರು ಅಷ್ಟೇ, ಲಿವರ್ ಮೇಲೆ ಅದೇ ಪರಿಣಾಮ ಬೀರುತ್ತದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಮುಂಬೈ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಸಂದೀಪ್! ಖುಷಿಯ ಹಿಂದಿತ್ತು ಯಾರಿಗೂ ತಿಳಿಸದ ದುಃಖಕರ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts