More

    ಇಲ್ಲಿ ಗಣೇಶನಿಗೆ ಇಲಿಗಳೇ ಅರ್ಪಣೆ; ಬೆಳೆ ರಕ್ಷಣೆಗಾಗಿ ಹೀಗೊಂದು ವಿಚಿತ್ರ ಮೊರೆ..!

    ಚಿಕ್ಕಮಗಳೂರು: ಇಂದು ಗಣೇಶ ಚತುರ್ಥಿ, ವಿಧವಿಧದ ಗಣಪತಿಯನ್ನು ಕೂರಿಸಿ, ಬಗೆಬಗೆಯ ಭಕ್ಷ್ಯಭೋಜನಗಳನ್ನು ತಯಾರಿಸಿ, ನೈವೇದ್ಯವಿಟ್ಟು ಭಕ್ತರು ಗಣೇಶನನ್ನು ಪೂಜಿಸುತ್ತಾರೆ. ಆದರೆ ಇಲ್ಲೊಂದು ಕಡೆ ಗಣೇಶನಿಗೆ ಆತನ ವಾಹನವಾದ ಇಲಿಗಳನ್ನೇ ಭಕ್ತರು ಅರ್ಪಿಸಿದ್ದಾರೆ!

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್‌ ಗ್ರಾಮದಲ್ಲಿ ಹೀಗೆ ವಿಚಿತ್ರ ರೀತಿಯಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗಿದೆ. ಅಷ್ಟಕ್ಕೂ ಅವರು  ಹೀಗೆ ಇಲಿಗಳನ್ನು ತಂದು ಗಣೇಶನಿಗೆ ಅರ್ಪಿಸಲಿಕ್ಕೂ ಬಲವಾದ ಕಾರಣವಿದೆ. ಇಲ್ಲಿ ಚೌತಿ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ಗಣೇಶನ ಮುಂದೆ ನಿತಿನ್‌ ಎಂಬ ಭಕ್ತರೊಬ್ಬರು ತನ್ನ ಸ್ನೇಹಿತನ ಜೊತೆ ಸೇರಿ ಹೀಗೆ ಇಲಿಯನ್ನು ಅರ್ಪಿಸಿದ್ದಾರೆ.

    ಇದನ್ನೂ ಓದಿ: ಗಣೇಶನನ್ನು ಕೂರಿಸಲು ಪೊಲೀಸರ ಅನುಮತಿ ಪಡೆದು ಮರಳುತ್ತಿದ್ದ ಮೂವರು ಸ್ನೇಹಿತರು ಅಪಘಾತಕ್ಕೆ ಬಲಿ; ಇಬ್ಬರು ಸ್ಥಳದಲ್ಲೇ ಸಾವು

    ತಾವು ಬೆಳೆದ ಬೆಳೆಗಳಿಗೆ ಗಣೇಶನ ವಾಹನಸ್ವರೂಪಿಯಾದ ಇಲಿಗಳಿಂದಲೇ ಕುತ್ತುಂಟಾಗಿರುವುದರಿಂದ ಅವರು ಈ ರೀತಿ ಮಾಡಿದ್ದಾರೆ. ಇಲಿಗಳ ಕಾಟದಿಂದ ಬೆಳೆ ಹಾನಿ ಉಂಟಾಗುತ್ತಿದ್ದು, ಅಂಥ ಬೆಳೆಗಳನ್ನು ನೀನೇ ರಕ್ಷಿಸಬೇಕು ಎಂದು ಕೋರಿ ಭಕ್ತರು ಹೀಗೆ ಇಲಿಗಳನ್ನು ತಂದು ಅರ್ಪಿಸಿದ್ದಾರೆ. ಪ್ಲಾಸ್ಟಿಕ್‌ ಲಕೋಟೆಯಲ್ಲಿ ಹಾಕಿಕೊಂಡು ಬಂದ ಇಲಿಗಳನ್ನು ಗಣೇಶನ ಮುಂದೆ ತಂದು ಬಿಡುವ ಮೂಲಕ ವಿಭಿನ್ನವಾಗಿ ಗಣೇಶನನ್ನು ಪ್ರಾರ್ಥಿಸಿಕೊಂಡಿದ್ದಾರೆ.

    ಭಾರತದಲ್ಲಿ ಇನ್ನು ಈ ಕಾರು ಉತ್ಪಾದನೆ ಆಗುವುದಿಲ್ಲ; ಸದ್ಯಕ್ಕೆ ಇರುವ ದಾಸ್ತಾನಷ್ಟೇ ಮಾರಾಟ!

    ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts