More

    ಜಗತ್ತಿನ ಅತ್ಯಂತ ದುಬಾರಿ ಔಷಧಿ ಬೆಲೆ 28.5 ಕೋಟಿ; ಇದು ಯಾವ ರೋಗಕ್ಕೆ ಮದ್ದು ಗೊತ್ತಾ..?

    ಬೆಂಗಳೂರು: ಕರೊನಾ ನಂತರ ವ್ಯಾಕ್ಸೀನ್​ಗಳ ಬಗ್ಗೆ ಎಲ್ಲಾ ಜನರೂ ಕೇಳಿರುತ್ತಾರೆ. ಒಮ್ಮೆ ಕೊವಿಶೀಲ್ಡ್​, ಇನ್ನೊಮ್ಮೆ ರೆಮ್​ಡೆಸಿವಿರ್​, ಮತ್ತೊಮ್ಮೆ ಕೊವ್ಯಾಕ್ಸೀನ್​ ಎಂದು ಅನೇಕ ಕ್ಲಿಷ್ಟ ಹೆಸರುಗಳನ್ನು ಜನರು ಕೇಳಿಸಿಕೊಂಡಿರುವುದು ಸುಳ್ಳಲ್ಲ. ಆದರೆ ಜಗತ್ತಿನ ಅತ್ಯಂತ ದುಬಾರಿ ಔಷಧಿ ಯಾವುದು ಗೊತ್ತಾ? ಅದುವೇ ಹೆಮ್ಜೆನಿಕ್ಸ್​.

    ಈ ಔಷಧಿಯನ್ನು ಹಿಮೋಫಿಲಿಯಾ ಎನ್ನುವ ರೋಗಕ್ಕೆ ಚಿಕಿತ್ಸೆ ನಿಡುವಾಗ ಬಳಸಲಾಗುತ್ತದೆ. ಈ ಮದ್ದನ್ನು ಸಿಎಸ್​ಎಲ್​ ಬೆಹ್ರಿಂಗ್​ ಎನ್ನುವ ಸಂಸ್ಥೆ ತಯಾರಿಸಿದೆ. ಈ ಮದ್ದು ಸುದ್ದಿಯಲ್ಲಿ ಇರುವುದು ಏಕೆಂದರೆ, ಇದಕ್ಕೆ ಈಗ ಅಮೆರಿಕದ ಫುಡ್​ ಆ್ಯಂಡ್​ ಡ್ರಗ್​ ಅಡ್ಮಿನಿಸ್ಟ್ರೇಶನ್​ ಏಜೆನ್ಸಿ (ಎಫ್​ಡಿಎ) ಎನ್ನುವ ಸಂಸ್ಥೆ ಅನುಮೋದನೆ ನೀಡಿದೆ. ಸಿಎಸ್​ಎಲ್​ ತಯಾರಿಸಿದ ಈ ಔಷಧಿಯಿಂದ ಒಬ್ಬರಿಗೆ ಡೋಸ್​ ನೀಡುವುದು ಎಂದರೆ ಬರೋಬ್ಬರಿ 28.5 ಕೋಟಿ ರುಪಾಯಿಯನ್ನು ಖರ್ಚು ಮಾಡಿದಂತೆ.

    ಏನದು ಹಿಮೋಫಿಲಿಯಾ?
    ಈ ರೋಗದಿಂದ ಬಳಲುವ ಜನರ ರಕ್ತ ಹೆಪ್ಪುಗಟ್ಟುವುದಿಲ್ಲ. ಕಾರಣ ಅದಕ್ಕೆ ಬೇಕಾದ ಪ್ರೋಟೀನ್ ಅವರ ಶರೀರ ಉತ್ಪಾದಿಸುವುದಿಲ್ಲ. 40,000 ಜನರಲ್ಲಿ ಒಬ್ಬರಿಗೆ ಈ ರೀತಿ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತದೆಯಂತೆ. ಅದರಲ್ಲಿ ಪುರುಷರ ಪ್ರಮಾಣವೇ ಹೆಚ್ಚಾಗಿರುತ್ತದೆ ಎಂದು ಅಧ್ಯಯಗಳು ತಿಳಿಸಿವೆ.

    ಇನ್ಸ್ಟಿಟ್ಯೂಟ್ ಫಾರ್ ಕ್ಲಿನಿಕಲ್ ಅಂಡ್ ಎಕನಾಮಿಕ್ ರಿವ್ಯೂ, ಪ್ರಿಸ್ಕ್ರಿಪ್ಷನ್ ಡ್ರಗ್ಸ್ ಮತ್ತು ಇತರ ವೈದ್ಯಕೀಯ ಉತ್ಪನ್ನಗಳ ಮೌಲ್ಯವನ್ನು ವಿಶ್ಲೇಷಿಸುವ ಸ್ವತಂತ್ರ ಸಂಶೋಧನಾ ಸಂಸ್ಥೆ. ಈ ಸಂಸ್ಥೆ ಹೆಮ್ಜೆನಿಕ್ಸ್​ ಔಷಧವೇ ಜಗತ್ತಿನ ಅತ್ಯಂತ ದುಆರಿ ಔಷಧ ಎನ್ನುವುದನ್ನು ಧೃಢಪಡಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts