ಮೊಬೈಲ್​ನಿಂದಾಗುವ ದುಷ್ಪರಿಣಾಮಗಳ ಕುರಿತು ಹೇಮಂತ್​ ಹೆಗ್ಡೆ ಹೊಸ ಸಿನಿಮಾ …

blank

ಬೆಂಗಳೂರು: ‘ನಮ್ ನಾಣಿ ಮದ್ವೆ ಪ್ರಸಂಗ’ ಎಂಬ ಚಿತ್ರ ರೆಡಿ ಮಾಡಿಟ್ಟುಕೊಂಡು ಬಿಡುಗಡೆಗೆ ಕಾದಿರುವ ಹೇಮಂತ್​ ಹೆಗ್ಡೆ, ಅದರ ಬಿಡುಗಡೆಗೂ ಮುನ್ನವೇ ಇನ್ನೊಂದು ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಅದೇ ‘ನೆಟ್​ವರ್ಕ್​’.

ಇದನ್ನೂ ಓದಿ: 25ನೇ ಸಿನಿಮಾ ರಿಲೀಸ್ ಶುಭ ಸಂದರ್ಭದಲ್ಲಿ 1 ಕೋಟಿ ರೂ. ಬೆಲೆಬಾಳುವ ಕಾರಿಗೆ ಒಡೆಯನಾದ ಡಾಲಿ

ಮೊಬೈಲ್​ನಿಂದಾಗುವ ದುಷ್ಪರಿಣಾಮಗಳ ಕುರಿತು ಹೇಮಂತ್​ ಹೆಗ್ಡೆ ಹೊಸ ಸಿನಿಮಾ …‘ನೆಟ್​ವರ್ಕ್​’ ಚಿತ್ರವನ್ನು ಪ್ರಭಂಜನ್​ ನಿರ್ಮಿಸುತ್ತಿದ್ದು, ಹೇಮಂತ್​ ಹೆಗ್ಡೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಅವರು, ‘ಇದು ಒಂದು ಕುಟುಂಬದ ಕಥೆಯಲ್ಲ. ಸಾಕಷ್ಟು ಜನರು ಎದುರಿಸುತ್ತಿರುವ ಸಮಸ್ಯೆ. ಮೊಬೈಲ್​ನಿಂದ ಸಾಕಷ್ಟು ದುಷ್ಪರಿಣಾಮಗಳಾಗುತ್ತಿವೆ. ಮಕ್ಕಳು ಆಟವಾಡುವುದನ್ನೇ ಮರೆಯುತ್ತಿದ್ದಾರೆ. ಮನೆಯಲ್ಲಿ ಮೂರು ಜನ ಇದ್ದರೆ, ಮೂರು ಜನ ಮೊಬೈಲ್​ ನೋಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಈ ಎಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ’ ಎನ್ನುತ್ತಾರೆ ಅವರು.

30 ವರ್ಷಗಳ ಹಿಂದೆ ಹೇಮಂತ್ ಮತ್ತು ಗೆಳೆಯರು ‘ದೃಷ್ಟಿ’ ಎಂಬ ಸಂಸ್ಥೆ ಕಟ್ಟಿದ್ದರಂತೆ. ಆ ತಂಡದಲ್ಲಿದ್ದ ಬಹುತೇಕರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಮೇ 15 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಶ್ರೇಯಸ್​ ಈಗ ‘ದಿಲ್​ದಾರ್’ … ಶೀರ್ಷಿಕೆ ಅನಾವರಣ ಮಾಡಿದ್ರು ರವಿಚಂದ್ರನ್

‘ನೆಟ್​ವರ್ಕ್​’ ಚಿತ್ರದಲ್ಲಿ ಹೇಮಂತ್​ ಜತೆಗೆ ರಾಜೇಶ್ ನಟರಂಗ, ಸುಚೀಂದ್ರ ಪ್ರಸಾದ್, ಕೆ.ಎಂ.ಚೈತನ್ಯ, ಸಾಕ್ಷಿ ಮೇಘನ, ರಕ್ಷಿಕಾ ಮುಂತಾದವರು ನಟಿಸುತ್ತಿದ್ದಾರೆ.

ಬಾಲಿವುಡ್​ನಲ್ಲಿ ಮೌಲ್ಯ, ಶಿಸ್ತು ಇಲ್ಲ … ಕಾಜಲ್​ ಅಗರ್​ವಾಲ್ ಅಭಿಪ್ರಾಯ

Share This Article

ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್

ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…