More

    ಬಾಲಿವುಡ್​ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಸುಮ್ಮನಿರಲ್ಲ: ಹೇಮಾ ಮಾಲಿನಿ

    ಮುಂಬೈ: ‘ಯಾರೋ ಒಬ್ಬಿಬ್ಬರು ಮಾಡಿರುವ ತಪ್ಪಿಗೆ ಇಡೀ ಚಿತ್ರರಂಗಕ್ಕೆ ಡ್ರಗ್ಸ್​ ಮಾಫಿಯಾದ ನಂಟಿದೆ ದೂಷಿಸುವುದು ತಪ್ಪು …’ ಎಂದು ಬಾಲಿವುಡ್​ನ ಹಿರಿಯ ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್​ ಮಂಗಳವಾರವಷ್ಟೇ ಹೇಳಿದ್ದರು.

    ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿ ಜೈಲು ಪಾಲು!

    ಈ ಹೇಳಿಕೆಗೆ ಬಾಲಿವುಡ್​ನಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಬಾಲಿವುಡ್​ನ ಹಲವು ಕಲಾವಿದರು ಹಾಗೂ ತಂತ್ರಜ್ಱರು ಈ ವಿಷಯವಾಗಿ ಜಯಾ ಬಚ್ಚನ್​ ಅವರ ಬೆನ್ನಿಗೆ ನಿಂತಿದ್ದಾರೆ. ಎಲ್ಲರೂ ಬಾಲಿವುಡ್​ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವಾಗ, ಜಯಾ ಬಚ್ಚನ್​ ಅವರು ಚಿತ್ರರಂಗದ ಪರವಾಗಿ ನಿಂತಿರುವುದು ಹಲವರ ಮೆಚ್ಚುಗೆಗೆ ಕಾರಣವಾಗಿದೆ.

    ಈ ಕುರಿತು ಮಾತನಾಡಿರುವ ನಟಿ ಮತ್ತು ಸಂಸದೆ ಹೇಮಾ ಮಾಲಿನಿ, ‘ಬಾಲಿವುಡ್​ ಒಂದು ಅದ್ಭುತ ಜಗತ್ತು. ಅದರ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದಾಗ ಬಹಳ ನೋವಾಗುತ್ತದೆ. ಈ ಡ್ರಗ್ಸ್​ ಎಲ್ಲಾ ಕಡೆ ಇರುವಂತದ್ದು ಮತ್ತು ಬಾಲಿವುಡ್​ನಲ್ಲೂ ಇರಬಹುದು. ಹಾಗಂತ ಎಲ್ಲರೂ ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂದು ಬಿಂಬಿಸುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಡ್ರಗ್ಸ್ ಕೇಸ್; ಸದ್ಯಕ್ಕೆ ಸ್ಟಾರ್​ ದಂಪತಿಗೆ ಬಿಗ್​ ರಿಲೀಫ್​

    ‘ಚಿತ್ರರಂಗ ಎನ್ನುವುದು ಬಹಳ ಎತ್ತರದ ಸ್ಥಾನದಲ್ಲಿದೆ. ನೆಪೋಟಿಸಂ (ಸ್ವಜನಪಕ್ಷಪಾತ), ಡ್ರಗ್ಸ್​ ಅಂತ ಅದನ್ನು ಕೆಳಗೆ ಎಳೆಯುವುದಕ್ಕೆ ಸಾಧ್ಯವೇ ಇಲ್ಲ. ನನಗೆ ಹೆಸರು, ಜನಪ್ರಿಯತೆ ಎಲ್ಲವೂ ಸಿಕ್ಕಿದ್ದು ಈ ಚಿತ್ರರಂಗದಿಂದಲೇ. ಈ ರಂಗದಿಂದ ಅದೆಷ್ಟೋ ನಟರು ದೊಡ್ಡ ಹೆಸರು ಮಾಡಿದರು. ಜನ ಅವರನ್ನ ಪೂಜಿಸುವಷ್ಟು ದೊಡ್ಡದಾಗಿ ಬೆಳೆದರು. ರಾಜ್​ ಕಪೂರ್​, ದೇವ್​ ಆನಂದ್​, ಧರ್ಮೇಂದ್ರ, ಅಮಿತಾಬ್​ ಬಚ್ಚನ್​ ಇವರೆಲ್ಲಾ ಹಿಂದಿ ಚಿತ್ರರಂಗವನ್ನು ಭಾರತದ ಮನೆಮನೆಗೂ ತಲುಪಿಸಿದರು. ಬಾಲಿವುಡ್​ ಎಂದರೆ ಭಾರತ. ಯಾರಾದರೂ ಬಾಲಿವುಡ್​ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ನನಗೆ ಸುಮ್ಮನೆ ಇರುವುದಕ್ಕೆ ಸಾಧ್ಯವಿಲ್ಲ’ ಎಂದು ಹೇಮಾ ಮಾಲಿನಿ ಖಾರವಾಗಿ ಹೇಳಿದ್ದಾರೆ.

    ಬಚ್ಚನ್​ ಬಂಗಲೆಗಳಿಗೆ ಪೊಲೀಸ್​ ಭದ್ರತೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts