More

    ಸ್ಯಾನಿಟರಿ, ಹ್ಯಾಂಡ್‌ಗ್ಲೌಸ್ ಹಸ್ತಾಂತರ

    ಸುರತ್ಕಲ್: ಹಿಂದು ಜಾಗರಣಾ ವೇದಿಕೆ ಸುರತ್ಕಲ್ ನಗರ ಘಟಕ ವತಿಯಿಂದ ಆರೆಸ್ಸೆಸ್ ಸೂಚನೆ ಮೇರೆಗೆ ಕರೊನಾ ಹಾವಳಿ ತಡೆಗೆ ರಾತ್ರಿ ಹಗಲು ಶ್ರಮಿಸುತ್ತಿರುವ ಸಿವಿಲ್ ಪೊಲೀಸರಿಗೆ, ಸಂಚಾರ ಠಾಣೆ ಪೊಲೀಸರಿಗೆ ಸಾವಿರಾರು ನೀರಿನ ಬಾಟಲ್, ಹ್ಯಾಂಡ್‌ವಾಶ್ ಸ್ಯಾನಿಟರಿ, ಹ್ಯಾಂಡ್‌ಗ್ಲೌಸ್ ಇತ್ಯಾದಿಗಳನ್ನು ಪಣಂಬೂರು ಎಸಿಪಿ ಕೆ.ಯು.ಬೆಳ್ಳಿಯಪ್ಪ ಅವರಿಗೆ ಹಿಂಜಾವೆ ಸುರತ್ಕಲ್ ನಗರಾಧ್ಯಕ್ಷ ಸತೀಶ್ ಮುಂಚೂರು ಶುಕ್ರವಾರ ಹಸ್ತಾಂತರಿಸಿದರು.
    ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಮುಂಚೂರು, ಜಿಲ್ಲಾ ಕಾರ್ಯದರ್ಶಿಪುಷ್ಪರಾಜ್ ಕುಳಾಯಿ, ಸಂಘಟನೆ ಪ್ರಮುಖರಾದ ಭವಾನಿ ಶಂಕರ್, ಬಾಲಕೃಷ್ಣ ಗುರುನಗರ, ರೂಪೇಶ್ ಇಡ್ಯಾ, ಸಂತೋಷ್ ಮುಂಚೂರು, ರಾಕೇಶ್ ಮಧ್ಯ, ಆಕಾಶ್ ಹೊಸಬೆಟ್ಟು, ಸಂತೋಷ್ ಗುರುನಗರ ಮೊದಲಾದವರು ಉಪಸ್ಥಿತರಿದ್ದರು.

    ವಲಸೆ ಕಾರ್ಮಿಕರಿಗೆ ನೆರವು: ಸುರತ್ಕಲ್: ಕರೊನಾ ಹಾವಳಿಯಿಂದ ಕೆಲಸವಿಲ್ಲದೆ ಊಟಕ್ಕೂ ಕಷ್ಟವಾಗಿರುವ, ಊರಿಗೂ ತೆರಳಲು ಸಮಸ್ಯೆ ಎದುರಿಸುತ್ತಿರುವ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕುಂಜತ್ತಬೈಲ್ ಬಸವನಗರ, ಬೈಕಂಪಾಡಿ ಕೂರಿಕಟ್ಟ, ಸುರತ್ಕಲ್ ತಡಂಬೈಲ್ ಮೊದಲಾದೆಡೆ ಇರುವ ಉತ್ತರ ಕರ್ನಾಟಕ ಮೂಲದ ವಲಸೆ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ. ಸುರತ್ಕಲ್‌ನಲ್ಲಿರುವ ಕೇಂದ್ರ ಸರ್ಕಾರದ ಜನೌಷಧ ಕೇಂದ್ರದಲ್ಲಿ ಎರಡು ದಿನಗಳಿಂದ ಗ್ರಾಹಕರ ಸರತಿ ಸಾಲು ಕಂಡು ಬಂದಿದ್ದು ಮುಖಕ್ಕೆ ಧರಿಸುವ ಮಾಸ್ಕ್ ಇಲ್ಲಿ ಲಭ್ಯವಿಲ್ಲ ಎಂದು ಗ್ರಾಹಕರು ದೂರಿದ್ದಾರೆ.

    ತುರ್ತು ಸೇವೆ ನಿರತರಿಗೆ, ನಿರಾಶ್ರಿತರಿಗೆ ಗಂಜಿ ಚಟ್ನಿ
    ಬೆಳ್ತಂಗಡಿ: ಐದು ದಿನಗಳಿಂದ ಕರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಸಂಕಷ್ಟಕ್ಕೆ ಒಳಗಾಗಿ ಆಹಾರಕ್ಕೆ ಸಮಸ್ಯೆ ಎದುರಿಸುತ್ತಿರುವವರಿಗೆ ಬೆಳ್ತಂಗಡಿ ಕಾಂಗ್ರೆಸ್ ವತಿಯಿಂದ ಬೆಳಗ್ಗೆ 11.30ರಿಂದ ಮಧ್ಯಾಹ್ನ 1.30ರವರೆಗೆ ಬಸ್ ನಿಲ್ದಾಣದಲ್ಲಿ ಉಚಿತ ಗಂಜಿ ಚಟ್ನಿ ಪಾರ್ಸೆಲ್ ವ್ಯವಸ್ಥೆ ಮಾಡಿದರು.

    ಕರ್ತವ್ಯ ನಿರ್ವಹಿಸುವ ಅರೋಗ್ಯ ಇಲಾಖೆಯವರಿಗೆ, ಆಶಾ ಕಾರ್ಯಕರ್ತರಿಗೆ, ಕಂದಾಯ ಇಲಾಖಾ ಸಿಬ್ಬಂದಿ, ಪೊಲೀಸರು, ನಿರಾಶ್ರಿತರಿಗೆ ಗಂಜಿ ಚಟ್ನಿ ಪಾರ್ಸೆಲ್ ವ್ಯವಸ್ಥೆ ಮಾಡುತ್ತಿದ್ದಾರೆ. ವಿಕಲಾಂಗರು, ಭಿಕ್ಷುಕರಿಗೆ ರಾತ್ರಿಗೆ ಬೇಕಾದ ಪಾರ್ಸೆಲ್ ನೀಡುತ್ತಿದ್ದರು.
    ಜಿಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಮುಖಂಡರಾದ ಭರತ್ ಕುಮಾರ್ ಇಂದಬೆಟ್ಟು, ಬಿಕೆ ವಸಂತ್, ಅನಿಲ್ ಪೈ ಬಂಗಾಡಿ, ಅಜಯ್ ಎ.ಜೆ, ಜಯದೇವ್ ಸಾವಂತ, ಗುರುರಾಜ್ ಕಿಲ್ಲೂರು, ಅಲ್ವಿನ್ ಅಪೋಸ್, ಗಣೇಶ್ ಕಣಿಯೂರು ಸೇವೆಯಲ್ಲಿ ನಿರತರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts