More

    ಜಂಕ್​ಫುಡ್ ಅವಾಂತರ; ಹಲೋ ಡಾಕ್ಟರ್

    ಜಂಕ್​ಫುಡ್ ಅವಾಂತರ; ಹಲೋ ಡಾಕ್ಟರ್ಇತ್ತೀಚಿನ ದಿನಮಾನಗಳಲ್ಲಿ ‘ಜಂಕ್​ಫುಡ್’ ಅಥವಾ ಫಾಸ್ಟ್​ಫುಡ್ ಸೇವನೆ ಮಕ್ಕಳಲ್ಲಿ, ಯುವಕರಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಆರೋಗ್ಯ ಅಸಮತೋಲಕ್ಕೆ ಇದಕ್ಕಿಂತ ಕೆಟ್ಟ ವಸ್ತು ಬೇರೊಂದಿಲ್ಲ. ಜಂಕ್​ಫುಡ್ ಎಂದರೆ ಹೆಚ್ಚು ಕ್ಯಾಲರಿ, ಹೆಚ್ಚು ಸಕ್ಕರೆ, ಕೊಬ್ಬು, ಉಪ್ಪು ಇರುವ ಹಾಗೂ ದೇಹಕ್ಕೆ ಅವಶ್ಯವಾದ ಪ್ರೋಟಿನ್, ವಿಟಮಿನ್, ಖನಿಜಗಳು ಕಡಿಮೆ ಪ್ರಮಾಣದಲ್ಲಿ ಇರುವ ತಿಂಡಿಗಳು.

    ಈ ತಿಂಡಿಗಳು ಮಕ್ಕಳಿಗೆ, ಯುವಕರಿಗೆ ಅತಿ ರುಚಿ ಅನಿಸುವುದರಿಂದ, ವಿವಿಧ ಮಳಿಗೆಗಳಲ್ಲಿ ಸರಳವಾಗಿ ದೊರೆಯುವುದರಿಂದ ಹೆಚ್ಚು ಪ್ರಿಯಕರವಾದವುಗಳು.ಇವು ಆರೋಗ್ಯದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಕಾಲಾಂತರದಲ್ಲಿ ಚಟವಾಗಿ ಬದಲಾಗುತ್ತದೆ. ವೈಜ್ಞಾನಿಕ ಅಧ್ಯಯನಗಳು ದೃಢಪಡಿಸಿದ ಮುಖ್ಯ ಅಂಶವೆಂದರೆ ಚಿಕ್ಕ ವಯಸ್ಸಿನಿಂದ ನಿಯಮಿತ ಜಂಕ್​ಫುಡ್ ಸೇವನೆ ಇದ್ದರೆ ಕ್ರಮೇಣ ಸರಿಪಡಿಸಲಾಗದ ಆರೋಗ್ಯದ ಹಾನಿ ನಿಶ್ಚಿತ. ಜಂಕ್​ಫುಡ್​ನಲ್ಲಿ ಪೌಷ್ಟಿಕಾಂಶ ಅತಿಕಡಿಮೆ ಅಥವಾ ಏನೂ ಇರುವುದಿಲ್ಲ. ಕ್ಯಾಂಡಿ, ಬೇಕರಿ ಪದಾರ್ಥಗಳು, ಬರ್ಗರ್, ಸ್ವಾಸೇಜ್, ಉಪ್ಪುಯುಕ್ತ ತಿನಿಸುಗಳು, ಹೆಚ್ಚು ಎಣ್ಣೆಯುಕ್ತ ತಿಂಡಿಗಳನ್ನು ಜಂಕ್​ಫುಡ್ ಎಂದು ಕರೆಯಲಾಗುತ್ತವೆ. ಇವುಗಳನ್ನು ಹೆಚ್ಚು ಸೇವಿಸಿದಂತೆ ಸಮತೋಲನ ಆಹಾರಗಳಾದ ಪ್ರೋಟಿನ್, ವಿಟಾಮಿನ್ ಮುಂತಾದವುಗಳನ್ನು ಸೇವಿಸಬೇಕು. ಇಲ್ಲದಿದ್ದರೆ, ಆರೋಗ್ಯಕ್ಕೆ ನಾನಾ ಪ್ರಕಾರದ ತೀವ್ರತರಹದ ಹಾನಿಯಾಗುತ್ತದೆ. ಇವು ಇಂತಿವೆ.

    ಬೊಜ್ಜು: ಹೆಚ್ಚು ಪ್ರಮಾಣದ ಕ್ಯಾಲರಿ ಇರುವುದರಿಂದ ಬೊಜ್ಜು ಸಾಮಾನ್ಯ. ಜಂಕ್​ಫುಡ್​ನಲ್ಲಿರುವ ಅತಿ ಹೆಚ್ಚು ಉಪ್ಪು, ಸಕ್ಕರೆ, ಕೊಬ್ಬು ಇವುಗಳು ದೇಹದ ಬೊಜ್ಜಿಗೆ ಪೂರಕ. ಕಾಲಾಂತರದಲ್ಲಿ ಮಧುಮೇಹ, ಹೃದಯಾಘಾತ, ಆಲಸ್ಯ, ಯಕೃತ್ ತೊಂದರೆ, ಕೀಲು ನೋವು ಬರುವುದಲ್ಲದೆ, ಆಯುಷ್ಯದ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ. ದಪ್ಪ ಮಕ್ಕಳಿಗೆ ಶಾಲೆಗಳಲ್ಲಿ ಅವರ ಸಹಪಾಠಿಗಳು ಕಾಡುವುದರಿಂದ ಅಂಥ ಮಕ್ಕಳ ಓದು ಕುಂಠಿತವಾಗುವುದಲ್ಲದೆ, ಆತ್ಮಾಭಿಮಾನವು ಧಕ್ಕೆಗೊಂಡು ಖಿನ್ನತೆಗೆ ಒಳಗಾಗುತ್ತಾರೆ. ಜಂಕ್​ಫುಡ್ ಒಂದು ಚಟವಾಗಿ ಪರಿಣಮಿಸುವುದರಿಂದ, ಅದರಿಂದ ಮುಕ್ತಿ ಕೂಡ ಬಹಳ ಕಠಿಣವಾಗಿದ್ದು, ತಜ್ಞ ವೈದ್ಯರ, ಮನೋವೈದ್ಯರ ನಿರಂತರ ಸಲಹೆ ಅವಶ್ಯ. ಈ ಮಕ್ಕಳು ಯುವಕರಾದಾಗ ಗೆಳೆಯಂದಿರ ಟೀಕೆಗಳು ಹೆಚ್ಚುವುದಲ್ಲದೆ ಮುಂದಿನ ಕಲಿಕೆ, ಉತ್ತಮವಾದ ಉದ್ಯೋಗಗಳ ಅವಕಾಶಗಳು ಗಣನೀಯವಾಗಿ ತಗುತ್ತವೆ. ಆತ್ಮಸ್ಥೈರ್ಯ, ಉತ್ತಮ ಪೌಷ್ಟಿಕ ಆಹಾರ ಸೇವನೆ, ಜಿಮ್ಲ್ಲಿ ನಿಯಮಿತ ವ್ಯಾಯಾಮ ಇವುಗಳಿಂದ ಗಣನೀಯವಾಗಿ ತೂಕ, ಬೊಜ್ಜು ಕಡಿಮೆಯಾಗಿ ಸಾಮಾನ್ಯ ಜೀವನ ನಡೆಸಬಹುದು.

    ಹೃದಯಾಘಾತ: ಜಂಕ್​ಫುಡ್ ಹೃದಯಾಘಾತಕ್ಕೆ ಹೆದ್ದಾರಿ. ಇವುಗಳಲ್ಲಿಯ ಹೆಚ್ಚು ಕೊಬ್ಬು, ಹಾನಿಕಾರಕ ಕೊಬ್ಬು ಹೃದಯದ ರಕ್ತನಾಳಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಶೇಖರಣೆಯಾಗುವುದರಿಂದ 20ರಿಂದ 40 ವರ್ಷದ ಯುವಕರಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಬಹುದು. ಖಿನ್ನತೆಯನ್ನು ಹೋಗಲಾಡಿಸಲು ತಂಬಾಕು ಸೇವನೆ, ಸಿಗರೇಟ್ ಸೇವನೆ, ಮಾದಕ ವಸ್ತುಗಳ ಸೇವನೆ, ಮದ್ಯಪಾನ ಮಾಡುವವರಲ್ಲಿ ಹೃದಯಾಘಾತ ಸಂಭವ ಗಣನೀಯವಾಗಿ ಹೆಚ್ಚುವುದು.

    ನೆನಪಿನ ಶಕ್ತಿ: ಇತ್ತೀಚಿನ ಅಮೆರಿಕ ಆಹಾರ ಸಂಶೋಧನೆಗಳಲ್ಲಿ ಜಂಕ್​ಫುಡ್ ಸೇವನೆಯಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ತಗ್ಗುವುದಲ್ಲದೆ ಅವರ ಕಲಿಯುವ ಸಾಮರ್ಥ್ಯ ಕೂಡ ಕಡಿಮೆ ಆಗುವುದೆಂಬ ಆಘಾತಕಾರಿ ಅಂಶ ವ್ಯಕ್ತವಾಗಿದೆ. ಮನಸ್ಸಿನ ಉದ್ವೇಗವೂ ಹೆಚ್ಚುತ್ತದೆ.

    ಹಸಿವು ಹಾಗೂ ಜೀರ್ಣಶಕ್ತಿ ಕೆಡುವುದು: ಜಂಕ್​ಫುಡ್​ನಲ್ಲಿಯ ಹೆಚ್ಚು ಸಕ್ಕರೆ, ಮಿದುಳನ್ನು ನಕಾರಾತ್ಮಕವಾಗಿ ಉತ್ತೇಜಿಸಿ ಹೆಚ್ಚು ಹಸಿವು ಉಂಟು ಮಾಡುತ್ತದೆ. ಇನ್ನೂ ಹೆಚ್ಚು ಜಂಕ್​ಫುಡ್ ಸೇವನೆಯಿಂದ ಹಸಿವು, ಜೀರ್ಣಶಕ್ತಿ ಕಡಿಮೆಯಾಗುತ್ತವೆ. ದಪ್ಪವಾಗಿ ಕಂಡರೂ ದೈಹಿಕ ಶಕ್ತಿ ಕಡಿಮೆಯಾಗುತ್ತದೆ.

    ಬೆಳವಣಿಗೆ ತಗ್ಗುವಿಕೆ: ಸಮತೋಲನ ಆಹಾರ, ವಿಟಾಮಿನ್, ಖನಿಜಗಳು ಇಲ್ಲದಿರುವುದರಿಂದ ದೇಹದ ಬೆಳವಣಿಗೆ, ಮಿದುಳಿನ ಸಾಮರ್ಥ್ಯ ಕೂಡ ತಗ್ಗುತ್ತವೆ.

    ಹಲವು ಜಂಕ್​ಫುಡ್​ಗಳ ಅಂಶಗಳು: ಹ್ಯಾಮ್​ಗರ್ರ್-962 ಕ್ಯಾಲರಿ, ಕಿಂಗ್​ಬರ್ಗರ್-1061 ಕ್ಯಾಲರಿ, ಚೀಜ ಬೇಕನ್-908 ಕ್ಯಾಲರಿ, ಮ್ಯಾಕ್​ಡೋನಾಲ್ಡ್ ಬಿಗ್​ಬ್ರೇಕ್​ಫಾಸ್ಟ್-767 ಕ್ಯಾಲರಿ! ಇದನ್ನು ನೋಡಿ ಶಾಕ್ ಆಯಿತೇ? ಈ ಅಂಕಿ ಅಂಶಗಳಿಂದ ಗೊತ್ತಾಗುವ ಮುಖ್ಯ ಅಂಶವೆಂದರೆ ಇಂತಹ ತಿನಿಸುಗಳ ಸೇವನೆ 2-3 ದಿನದ ಸಾಮಾನ್ಯ ಊಟಕ್ಕೆ ಸಮಾನ! ಅಂತೆಯೇ ನಿಯಮಿತ ಜಂಕ್​ಫುಡ್ ಭಾರತೀಯ ಆಹಾರದಲ್ಲಿ ಬರ್ಗರ್, ಕಚೋರಿ, ಕೋಫ್ತಾ, ಪಕೋಡಾ, ಬಟಾಟೆ ಚಿಪ್ಸ್, ಪಾನಿಪೂರಿ, ವಡಾ, ಕೂರ್ವ, ಪೀಜಾ, ಹ್ಯಾಮಬರ್ಗರ್, ದೀಪಾವಳಿಯ ತಿಂಡಿಗಳಾದ ಚಕ್ಲಿ, ಚೂಡಾ, ಗುಲಾಬ ಜಾಮೂನ ಮುಂತಾದವುಗಳು. ಯಾವಾಗಾದರೊಮ್ಮೆ ಈ ಎಲ್ಲ ಪದಾರ್ಥಗಳ ಸೇವನೆ ಮಾಡಿದರೆ ತಪ್ಪೇನಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts