More

    ರಾಷ್ಟ್ರಪತಿಗಳ ಭೇಟಿಯಿಂದಾದ ಟ್ರಾಫಿಕ್​ನಲ್ಲಿ ಸಿಲುಕಿದ್ದ ಮಹಿಳೆ ಸಾವು! ಕ್ಷಮೆ ಯಾಚಿಸಿದ ಪೊಲೀಸರು

    ಲಖನೌ: ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರು ಮೂರು ದಿನಗಳ ಕಾಲ ಉತ್ತರ ಪ್ರದೇಶದ ಪ್ರವಾಸದಲ್ಲಿದ್ದಾರೆ. ಈ ವೇಳೆ ವಿವಿಐಪಿಗೆ ಝೀರೋ ಟ್ರಾಫಿಕ್ ಮಾಡಿಕೊಟ್ಟಿದ್ದರಿಂದಾಗಿ ಟ್ರಾಫಿಕ್​ನಲ್ಲಿ ಸಿಲುಕಿ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ವಿಚಾರದಲ್ಲಿ ಉತ್ತರ ಪ್ರದೇಶ ಪೊಲೀಸರು ಮೃತಳ ಕುಟುಂಬದವರಲ್ಲಿ ಕ್ಷಮೆ ಯಾಚಿಸಿದ್ದಾರೆ.

    ರಾಮ್​ನಾಥ್ ಕೋವಿಂದ್ ಅವರು ಶುಕ್ರವಾರದಂದು ರೈಲಿನ ಮೂಲಕ ಕಾನ್ಪುರ ತಲುಪಿದ್ದರು. ಅವರು ‘ಕಾನ್ಪುರ್ ದೇಹತ್’ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಅವರು ಸೋಮವಾರ ಮತ್ತು ಮಂಗಳವಾರ ಲಖನೌನಲ್ಲಿ ಕಳೆಯಲಿದ್ದಾರೆ.

    ಟ್ರಾಫಿಕ್​ನಲ್ಲಿ ಸಿಲುಕಿ ಮೃತಪಟ್ಟ ಮಹಿಳೆಯನ್ನು ಭಾರತೀಯ ಕೈಗಾರಿಕಾ ಸಂಘದ ಕಾನ್ಪುರ್ ಅಧ್ಯಾಯದ ಮಹಿಳಾ ವಿಭಾಗದ ಮುಖ್ಯಸ್ಥರಾಗಿದ್ದ ವಂದನಾ ಮಿಶ್ರಾ (50) ಎಂದು ಹೇಳಲಾಗಿದೆ. ಅವರು ಕರೊನಾದಿಂದ ಗುಣಮುಖರಾಗಿದ್ದು, ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಆದರೆ ಈ ವೇಳೆ ರಾಷ್ಟ್ರಪತಿಗಳ ಕಾರು ಆ ರಸ್ತೆಯಲ್ಲಿ ಹೋಗಬೇಕಿದ್ದರಿಂದಾಗಿ ಬೇರೆ ರಸ್ತೆಗಳನ್ನು ಸ್ಥಗಿತಗೊಳಿಸಿ, ಗಣ್ಯರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇದರಿಂದಾಗಿ ಆಸ್ಪತ್ರೆಗೆ ಹೋಗುವುದು ವಿಳಂಬವಾಗಿದ್ದು, ಅವರು ದಾರಿ ಮಧ್ಯೆಯೇ ಪ್ರಾಣ ಬಿಟ್ಟಿದ್ದಾಗಿ ಹೇಳಲಾಗಿದೆ.

    “ವಂದನಾ ಮಿಶ್ರಾ ಅವರ ನಿಧನದ ಬಗ್ಗೆ ನನಗೆ ತೀವ್ರ ವಿಷಾದವಿದೆ. ಕಾನ್ಪುರ್ ಪೊಲೀಸರ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಇದು ಭವಿಷ್ಯಕ್ಕೆ ಒಂದು ದೊಡ್ಡ ಪಾಠವಾಗಿದೆ. ನಮ್ಮ ‘ಮಾರ್ಗ’ ವ್ಯವಸ್ಥೆಯು ನಾಗರಿಕರನ್ನು ಸಾಧ್ಯವಾದಷ್ಟು ಕಡಿಮೆ ಸಮಯದವರೆಗೆ ಹಿಡಿದಿಟ್ಟುಕೊಳ್ಳುತ್ತದೆ ಎಂದು ನಾವು ಪ್ರತಿಜ್ಞೆ ಮಾಡುತ್ತೇವೆ. ಇಂತಹ ಘಟನೆಗಳು ಪುನರಾವರ್ತನೆಯಾಗುವುದಿಲ್ಲ ”ಎಂದು ಕಾನ್ಪುರ ಪೊಲೀಸ್ ಮುಖ್ಯಸ್ಥ ಅಸಿಮ್ ಅರುಣ್ ಟ್ವೀಟ್ ಮಾಡಿದ್ದಾರೆ. ಈ ಘಟನೆಯಿಂದ ಅಧ್ಯಕ್ಷ ಕೋವಿಂದ್ ವಿಚಲಿತರಾಗಿದ್ದಾರೆ ಎಂದು ಮತ್ತೊಂದು ಟ್ವೀಟ್​ ಮೂಲಕ ತಿಳಿಸಲಾಗಿದೆ. “ರಾಷ್ಟ್ರಪತಿಗಳು ಪೊಲೀಸ್ ಆಯುಕ್ತರನ್ನು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಕರೆದು ಘಟನೆಯ ಬಗ್ಗೆ ವಿಚಾರಿಸಿದರು. ಕುಟುಂಬಕ್ಕೆ ವೈಯಕ್ತಿಕವಾಗಿ ಸಂತಾಪ ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    ಗೊರಕೆ ಹೊಡೆಯದ ಶ್ರೀಮಂತ ವರ ಬೇಕು! ವೈರಲ್ ಆಯ್ತು ಜಾಹೀರಾತು!

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts