More

    ರಾಜ್ಯದಲ್ಲಿ ಇನ್ನೂ 2 ದಿನ ಗುಡುಗು ಸಹಿತ ಧಾರಾಕಾರ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

    ಬೆಂಗಳೂರು: ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರದಲ್ಲಿ ನಿನ್ನೆ ಇಡೀ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಮಳೆ ನಿರಂತರವಾಗಿ ಧಾರಕಾರವಾಗಿ ಅಬ್ಬರಿಸಿದ ವರುಣ ಬೆಳಗಿನ ವೇಳೆಯಲ್ಲಿ ಬಿಡುವು ನೀಡಿದ್ದರೂ ಇನ್ನು ಮೋಡ ಕವಿದ ವಾತಾವರಣ ಇದೆ.

    ಇದೀಗ ಹವಾಮಾನ ಇಲಾಖೆಯು ಮಳೆ ಮುನ್ಸೂಚನೆ ನೀಡಿದ್ದು, ರಾಜ್ಯದಲ್ಲಿ ಇನ್ನೂ ಎರಡು ದಿನ ವರುಣ ಅಬ್ಬರಿಸಲಿದ್ದಾನೆ. ದಕ್ಷಿಣ ಒಳನಾಡಿನ ಬಹುತೇಕ ಕಡೆ ಮುಂದಿನ ಎರಡು ದಿನ ಗುಡುಗು ಸಹಿತ ಮಳೆಯಾಗಲಿದೆ. ಜನರು ಎಚ್ಚರದಿಂದ ಇರಲು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: ಚೆನ್ನಕೇಶವ ಸ್ವಾಮಿ ರಥದ ಮುಂದೆ ಕುರಾನ್ ಪಠಣಕ್ಕೆ ಅವಕಾಶವಿಲ್ಲ: ಧಾರ್ಮಿಕ ದತ್ತಿ ಆಯುಕ್ತರ ಆದೇಶ

    ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಭಾಗಗಳಿಗೆ ಹೆಚ್ಚಿನ ಮಳೆ ಸಾಧ್ಯತೆ ಇದೆ. ಕರಾವಳಿ, ಉತ್ತರ ಒಳನಾಡಿನಲ್ಲಿ ಎರಡು ದಿನ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ. ನಿನ್ನೆ ರಾತ್ರಿ ನಗರದ ಕೆಲವೆಡೆ ಮಳೆರಾಯ ತಂಪೆರೆದಿದ್ದಾನೆ. ಸದ್ಯ ಇಂದು ಕೂಡ ಹವಾಮಾನ ಇಲಾಖೆ ಅಲರ್ಟ್ ನೀಡಿದೆ.

    ಬಹಳ ದಿನಗಳಿಂದ ಬಿಸಿಲ ಬೇಗೆಯಿಂದ ಬಳಲುತ್ತಿದ್ದವರಿಗೆ ವರುಣನ ಆಗಮನ ತಂಪೆರೆದರೆ, ದಿನ ನಿತ್ಯ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮಂದಿಗೆ ಮಳೆರಾಯ ವಿರಾಮ ನೀಡಿದ್ದಾನೆ. ನಿರಂತರ ಸುರಿದ ಮಳೆಯಿಂದ ಹಲವೆಡೆ ವಿದ್ಯುತ್​ ಪೂರೈಕೆಯಲ್ಲೂ ವ್ಯತ್ಯಾಸವಾಗಿದೆ. (ದಿಗ್ವಿಜಯ ನ್ಯೂಸ್​)

    ಚೆನ್ನಕೇಶವ ಸ್ವಾಮಿ ರಥದ ಮುಂದೆ ಕುರಾನ್ ಪಠಣಕ್ಕೆ ಅವಕಾಶವಿಲ್ಲ: ಧಾರ್ಮಿಕ ದತ್ತಿ ಆಯುಕ್ತರ ಆದೇಶ

    ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರಿಲ್ಯಾಕ್ಸ್ ಮಗ ಯತೀಂದ್ರರಿಗೆ ಫುಲ್ ಟೆನ್ಷನ್!

    ಪಕ್ಷಿಯಿಂದ ನಾಯಿಗೆ ಟ್ವಿಟರ್​ ಲೋಗೋ ಬದಲಿಸಿದ ಎಲಾನ್​ ಮಸ್ಕ್​: ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts