More

    ರಾಜ್ಯದಲ್ಲಿ ಮುಂದಿನ ಐದು ದಿನ ಭಾರೀ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

    ಬೆಂಗಳೂರು: ಸತತ 13 ದಿನಗಳಿಂದ ಕ್ಷೀಣಿಸಿದ ಮುಂಗಾರು ಮಂಗಳವಾರದಿಂದ (ಜು.6) ಚುರುಕಾಗಲಿವೆ. ಇದರ ಪರಿಣಾಮದಿಂದ ರಾಜ್ಯದಲ್ಲಿ ಮುಂದಿನ ಐದು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

    ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಜು.6ರಿಂದ ಜು.10ರವರೆಗೆ ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

    ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರಿನಲ್ಲಿ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ತೇವಾಂಶ ಕೊರತೆ ಹಾಗೂ ಗಾಳಿಯ ವೇಗ ಇಲ್ಲದಿರುವ ಹಿನ್ನೆಲೆಯಲ್ಲಿ ಜೂ.23ರಿಂದ ಜು.3ರವರೆಗೆ ರಾಜ್ಯಾದ್ಯಂತ ಮಳೆ ಕ್ಷೀಣಿಸಿತ್ತು. ಕೆಲ ಭಾಗಗಳಲ್ಲಿ ಮಾತ್ರವೇ ಸಾಧಾರಣ ಮಳೆಯಾಗಿತ್ತು. ಆದರೆ, ಇದೀಗ ಮುಂಗಾರು ಮತ್ತೆ ಪ್ರಬಲವಾಗಿರುವ ಪರಿಣಾಮ ಜುಲೈ ಎರಡು, ಮೂರು ಮತ್ತು ನಾಲ್ಕನೇ ವಾರದವರೆಗೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದರು.

    ನೋಡ ನೋಡುತ್ತಿದ್ದಂತೆಯೇ ಕೊಚ್ಚಿಹೋಯ್ತು ಸಾಲುಗಟ್ಟಲೆ ಮನೆಗಳು! ಬೆಚ್ಚಿ ಬೀಳಿಸುವ ವಿಡಿಯೋ

    ವೇದಿಕೆಯ ಮೇಲೇ ವನಿತಾಗೆ ಅವಮಾನಿಸಿದ ರಮ್ಯಾ ಕೃಷ್ಣ!? ಡ್ಯಾನ್ಸ್ ಶೋನಿಂದ ಹೊರಬಂದ ನಟಿ ಹೇಳಿದ್ದೇನು?

    ಐ ಹೇಟ್ ಮೈ ಲೈಫ್ ಎಂದು ನೋಟ್ ಬುಕ್ ತುಂಬ ಬರೆದಿಟ್ಟು ನೇಣಿಗೆ ಶರಣಾದ 9ನೇ ಕ್ಲಾಸ್ ಬಾಲಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts