More

    ವಿಶ್ವದ ಅತಿ ಹೆಚ್ಚು ತೂಕದ ಮಾವು ಬೆಳೆದ ಜೋಡಿ; ಈ ಮಾವಿನ ಹಣ್ಣಿನ ತೂಕ ಎಷ್ಟು ಗೊತ್ತಾ?

    ಬೊಗೊಟಾ: ಮಾವಿನ ಸೀಸನ್​ ಆರಂಭವಾಗಿದೆ. ಒಂದಿಷ್ಟು ಜನರು ಮಾವಿನ ಕಾಯಿಯ ಉಪ್ಪಿನಕಾಯಿ ತಯಾರಿಸಿಟ್ಟುಕೊಳ್ಳುವ ಭರದಲ್ಲಿದ್ದರೆ ಇನ್ನು ಸಾಕಷ್ಟು ಮಂದಿ ಹಣ್ಣನ್ನು ತಿನ್ನುವ ಕಾತುರದಲ್ಲಿದ್ದಾರೆ. ಆದರೆ ಈ ಒಂದು ಜೋಡಿ ಅದೇ ಮಾವಿನಿಂದ ಗಿನ್ನೆಸ್​ ರೆಕಾರ್ಡ್​ ಬರೆದಿದೆ.

    ಕೊಲಂಬಿಯಾದ ಗ್ವಾಯತ್ ಪ್ರದೇಶದ ಜರ್ಮನ್ ಒರ್ಲ್ಯಾಂಡೊ ನೊವಾ ಬ್ಯಾರೆರಾ ಮತ್ತು ರೀನಾ ಮಾರಿಯಾ ಮರೋಕ್ವಿನ್ ಆ ವಿಶೇಷ ಜೋಡಿ. ಇವರು ತಮ್ಮ ಮಾವಿನ ತೋಪಿನಲ್ಲಿ ವಿಶೇಷ ಮಾವನ್ನು ಬೆಳೆದಿದ್ದಾರೆ. ಅಂದ ಹಾಗೆ ಇವರು ಬೆಳೆದಿರುವ ಮಾವಿನ ಕಾಯಿಯ ತೂಕ ಬರೋಬ್ಬರಿ 4.25 ಕೆಜಿ. ಈವರೆಗೆ ಇಷ್ಟೊಂದು ತೂಕದ ಮಾವಿನ ಕಾಯಿಯನ್ನು ಯಾರೂ ಬೆಳೆದಿಲ್ಲ. ಇದೀಗ ವಿಶ್ವದ ಅತ್ಯಂತ ಭಾರೀ ತೂಕದ ಮಾವು ಬೆಳೆದ ಜೋಡಿಯಾಗಿ ಇವರು ಹೊರ ಹೊಮ್ಮಿದ್ದಾರೆ. ಗಿನ್ನೆಸ್​ ರೆಕಾರ್ಡ್​ನಲ್ಲೂ ಇವರ ಹೆಸರು ಸೇರ್ಪಡೆಗೊಂಡಿದೆ.

    ಈ ಹಿಂದೆ 2009ರಲ್ಲಿ ಪಿಲಿಫೈನ್ಸ್​ನಲ್ಲಿ 3.435 ಕೆಜಿ ತೂಕದ ಮಾವಿನ ಕಾಯಿಯನ್ನು ಬೆಳೆಯಲಾಗಿತ್ತು. ಆದರೆ ಕೊಲಂಬಿಯಾ ಈ ಜೋಡಿ ಆ ದಾಖಲೆಯನ್ನು ಮುರಿದಿದೆ.

    ಕೊಲಂಬಿಯಾದ ಜನ ಕಷ್ಟಪಟ್ಟು ದುಡಿಯುತ್ತಾರೆ. ಪ್ರೀತಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ ಎನ್ನುವುದನ್ನು ಪೂರ್ತಿ ವಿಶ್ವಕ್ಕೆ ತೋರಿಸಬೇಕೆಂಬ ಆಸೆ ಇತ್ತು. ಅದು ಈ ಮೂಲಕ ನೆರವೇರಿತು ಎನ್ನುತ್ತದೆ ಈ ವಿಶೇಷ ಜೋಡಿ. (ಏಜೆನ್ಸೀಸ್)

    ಕಚೇರಿಗೆ ಬಂದು ಕುಳಿತವ ಅಲ್ಲೇ ಪ್ರಾಣಬಿಟ್ಟ! ಜ್ವರವೆಂದು ನಿರ್ಲಕ್ಷ್ಯಿಸಿದವನನ್ನು ಬಲಿ ಪಡೆದ ಕರೊನಾ!

    ಆ್ಯಂಕರ್ ಅರುಣ ಬಡಿಗೇರ ತಂದೆ-ತಾಯಿಯನ್ನು ಬಲಿ ತೆಗೆದುಕೊಂಡ ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts